ಹಸಿವಿನ ಕಾದಾಟ ವೃದ್ಧೆಯ ಸಾವಲ್ಲಿ ಅಂತ್ಯ

ವೃದ್ಧಾಶ್ರಮದಲ್ಲೇ ಪರಸ್ಪರ ಹೊಡೆದಾಟ ; ಅನ್ನ ಕೊಡದೆ ವೃದ್ಧೆಯ ಉಸಿರು ನಿಲ್ಲಿಸಿದ ಉಸುರು ಫೌಂಡೇಶನ್‌

Team Udayavani, Aug 17, 2021, 2:22 PM IST

ಹಸಿವಿನ ಕಾದಾಟ ವೃದ್ಧೆಯ ಸಾವಲ್ಲಿ ಅಂತ್ಯ

ಬೆಂಗಳೂರು: ಹೆತ್ತ ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವವರೇ ಹುಷಾರ್‌! ಪ್ರತಿ ತಿಂಗಳು ಸಾವಿರಾರು ರೂ. ಪಡೆದರೂ ನಗರದಲ್ಲಿರುವ ಕೆಲ ವೃದ್ಧಾಶ್ರಮಗಳು ಸರಿಯಾಗಿ ಊಟ-ಉಪಚಾರ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಂಥ ದಾರುಣ ಘಟನೆ ನಗರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಊಟಕ್ಕಾಗಿ ಕೂಗಾಡುತ್ತಿದ್ದ ವೃದ್ಧೆಯ ಚಿರಾಟಕ್ಕೆ ಆಕ್ರೋಶಗೊಂಡ ಮತ್ತೂಬ್ಬ ವೃದ್ಧೆ ದೊಣ್ಣೆ, ಕುರ್ಚಿಯಿಂದ ಹೊಡೆದು ಹತ್ಯೆಗೈದಿರುವ ಅಮಾನವೀಯ ಘಟನೆ ಆರ್‌ಎಂಸಿ ಯಾರ್ಡ್‌ನ ಠಾಣಾ ವ್ಯಾಪ್ತಿಯ “ಉಸುರು ಫೌಂಡೇಶನ್‌ ವೃದ್ಧಾಶ್ರಮ’ದಲ್ಲಿ ನಡೆದಿದೆ.

ನಾಗರ ಬಾವಿ ನಿವಾಸಿ ಕಮಲಮ್ಮ (82) ಕೊಲೆಯಾದ ವೃದ್ಧೆ. ಕೃತ್ಯ ಎಸಗಿದ ವಸಂತ(64) ಎಂಬಾಕೆಯನ್ನು ಬಂಧಿಸಲಾಗಿದೆ. ಇದೇ ವೇಳೆ ಮೃತ ವೃದ್ಧೆಯನ್ನು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿ ಊಟ ಕೊಡದೆ ಹಿಂಸೆ ನೀಡಿದ ಆರೋಪದ ಮೇಲೆ ಉಸುರು ಫೌಂಡೇಷನ್‌
ವೃದ್ಧಾಶ್ರಮದ ಮುಖ್ಯಸ್ಥ ಯೋಗೇಶ್‌, ಸಾಕ್ಷ್ಯನಾಶಪಡಿ ಸಿದ ಆರೋಪದ ಮೇಲೆ ವಾರ್ಡ್‌ನ್‌ಗಳಾದ ಪ್ರೇಮಾ,ಜಾನ್‌, ಭಾಸ್ಕರ್‌ ಮತ್ತು ಸಿಸಿ ಕ್ಯಾಮೆರಾದ ಡಿವಿಆರ್‌ಕೊಂಡೊಯ್ದಿದ್ದ ಮಂಜುನಾಥ್‌ಎಂಬುವರನ್ನು ಬಂಧಿಸಲಾಗಿದೆ. ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ವಸಂತ ವಿರುದ್ಧ ಕೊಲೆ ಪ್ರಕರಣ ಹಾಗೂ ಇತರೆ ಆರೋಪಿಗಳ ವಿರುದ್ಧ ಸಾಕ್ಷ್ಯನಾಶಪಡಿಸಿದಆರೋಪಪ್ರಕರಣದಾಖ ಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹಳೇ ಮದ್ರಾಸ್‌ ರಸ್ತೆಯ ಭಟ್ಟರಹಳ್ಳಿ ನಿವಾಸಿ ಕಮಲಮ್ಮ ನಿವೃತ್ತ ಎಎಸ್‌ಐ ಪತ್ನಿಯಾಗಿದ್ದು, ದಂಪತಿಗೆ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಇದ್ದಾರೆ. ಕಮಲಮ್ಮ ಮರೆವು ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ವೃದ್ಧೆಯ ಪುತ್ರ ರಾಮಚಂದ್ರ ಅವರು, ತಮ್ಮ ತಾಯಿಯನ್ನು ಮಾರ್ಚ್‌ನಲ್ಲಿ ನಾಗರಭಾವಿಯಲ್ಲಿರುವ ಉಸಿರು ಫೌಂಡೇಷನ್‌ ವೃದ್ಧಾ ಶ್ರಮಕ್ಕೆ ಸೇರಿಸಿದ್ದು, ಅವರ ನಿರ್ವಹಣೆಗಾಗಿ ತಿಂಗಳಿಗೆ 10 ಸಾವಿರ ರೂ. ಪಾವತಿಸುತ್ತಿದ್ದರು. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಕಮಲಮ್ಮ ಕೆಲವೊಮ್ಮೆ ಜೋರಾಗಿ ಕೂಗುತ್ತಿದ್ದರು. ಅದರಿಂದ ಅಕ್ಕ-ಪಕ್ಕದ ನಿವಾಸಿಗಳು ವೃದ್ಧಾಶ್ರಮಕ್ಕೆ ದೂರು ನೀಡಿದ್ದರು.. ಅದರಿಂದ ಆಶ್ರಮದ ಸಿಬ್ಬಂದಿ ಅವರನ್ನು ಕಂಠೀರವ ಸ್ಟುಡಿಯೋ ಸಮೀಪ ಇರುವ ಮತ್ತೊಂದು  ಶಾಖೆಗೆ ಸ್ಥಳಾಂತರಿಸಿದ್ದರು ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ಲಾಕ್‍ಡೌನ್‍ : ಗೋವಾದಲ್ಲಿ ಸಿಲುಕಿಕೊಂಡಿದ್ದಾರೆ 1200 ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು

ಕತ್ತಲ ಕೋಣೆಯಲ್ಲಿ ಗೃಹ ಬಂಧನ!: ಕಮಲಮ್ಮನ ಜೋರು ಕೂಗಾಟ ಯಾರಿಗೂ ಕೇಳಬಾರದು ಎಂದು ಮೂರು ಅಂತಸ್ತಿನ ಕಟ್ಟಡದ ಶಾಖೆಯಲ್ಲಿ ನೆಲಮಹಡಿಯಲ್ಲಿರುವ ಕತ್ತಲ ಕೊಣೆಯಲ್ಲಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಮಲಮ್ಮ ಜೋರಾಗಿ ಕೂಗಾಡುತ್ತಿದ್ದರು. ಊಟ ಕೊಟ್ಟರೆ ಕೂಗಾಡುತ್ತಾರೆ ಎಂದು ಸಿಬ್ಬಂದಿ ಪ್ರೇಮ ಭಾಸ್ಕರ್‌, ಜಾನ್‌ ಎರಡು-ಮೂರು ದಿನಕ್ಕೊಮ್ಮೆ ಊಟ ಕೊಡುತ್ತಿದ್ದರು .

ಈ ಮಧ್ಯೆ ಕೆಲ ದಿನಗಳ ಹಿಂದೆ ವಸಂತಮ್ಮ ಎಂಬಾಕೆಯನ್ನು ಕರೆತಂದ ಆಶ್ರಮದ ಸಿಬ್ಬಂದಿ ಅದೇ ಕೋಣೆಯಲ್ಲಿರಿಸಿದ್ದರು. ಆರಂಭದಲ್ಲಿ ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ,ಕಮಲಮ್ಮನ ಕೂಗಾಟದಿಂದ ಆಕ್ರೋಶಗೊಂಡಿದ್ದ ವಸಂತಮ್ಮ ಸಾಕಷ್ಟು ಬಾರಿ ಎಚ್ಚರಿಕೆ ನೀಡಿ ಸುಮ್ಮನಿರಿಸಿದ್ದರು. ಇಬ್ಬರು ವೃದ್ಧೆಯರಿಗೂ ಸಿಬ್ಬಂದಿ ಸರಿಯಾಗಿ ಊಟ ಕೊಡುತ್ತಿರಲಿಲ್ಲ.

ಆ.7ರಂದು ಊಟದ ವಿಚಾರಕ್ಕೆ ‌ ಕಮಲಮ್ಮ ಜೋರಾಗಿ ಕೂಗಾಡಿದ್ದಾರೆ. ಅದರಿಂದ ಆಕ್ರೋಶಗೊಂಡ ವಸಂತಮ್ಮ ಸುಮ್ಮನಿರುವಂತೆ ಎಚ್ಚರಿಕೆ ‌ ನೀಡಿದ್ದಾರೆ. ಆದರೂ ಕಮಲಮ್ಮ ಶಾಂತವಾಗಿಲ್ಲ. ಅಲ್ಲದೆ, ವಸಂತಮ್ಮ ಮೇಲೆ ಜಗಳಕ್ಕೆ ಬಂದಿದ್ದಾರೆ. ಅದರಿಂದ ಆಕ್ರೋಶಗೊಂಡ ವಸಂತಮ್ಮ ತನ್ನ ಬಳಿಯಿದ್ದ ಕೋಲು ಮತ್ತು ಪಕ್ಕದಲ್ಲೇ ಇದ್ದ ಚೇರ್‌ ನಿಂದ ತಲೆ ಮತ್ತು ಕಿವಿ ಭಾಗಕ್ಕೆ ಜೋರಾಗಿ ನಾಲ್ಕೈದು ಬಾರಿ ಹಲ್ಲೆ ನಡೆಸಿದ್ದಾರೆ. ತೀವ್ರ
ರಕಸ್ರಾವದಿಂದ ಕಮಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶವ ಸ್ಥಳಾಂತರಿಸಿದ ಆಶ್ರಮ ಸಿಬ್ಬಂದಿ: ಭೀಕರ ಹತ್ಯೆಯನ್ನು ಮುಚ್ಚಿಡುವ ಉದ್ದೇಶದಿಂದ ಆಶ್ರಮದ ಸಿಬ್ಬಂದಿ ಕಮಲಮ್ಮ ಅವರ ಮೃತದೇಹ ವನ್ನು ನೆಲಮಹಡಿಯಿಂದ ಮೊದಲ ಮಹಡಿಗೆ ಸ್ಥಳಾಂತರಿಸಿದ್ದರು.ಅಲ್ಲದೆ, ಜಾನ್‌, ಪ್ರೇಮಾ, ಭಾಸ್ಕರ್‌ ಕತ್ತಲ ಕೋಣೆಯಲ್ಲಿದ್ದ ರಕ್ತದ ಕಲೆಯನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಿದ್ದಾರೆ. ಬಳಿಕ ಮಂಜುನಾಥ್‌ ಸಿಸಿ ಕ್ಯಾಮೆರಾದ ಡಿವಿಆರ್‌ ಕೊಂಡೊಯ್ದಿದ್ದಾನೆ. ಬಳಿಕ ಆಶ್ರಮ ಮಾಲೀಕ ಯೋಗೇಶ್‌, ಆ.7ರಂದು ರಾತ್ರಿ ಕಮಲಮ್ಮನ ಪುತ್ರ ರಾಮಚಂದ್ರಗೆ ಕರೆ ಮಾಡಿ ನಿಮ್ಮ ತಾಯಿಗೆ ಉಸಿರಾಟದ ತೊಂದರೆ ಇದೆ ಬೇಗ ಬರುವಂತೆ ಸೂಚಿಸಿದ್ದರು.

ರಾಮಚಂದ್ರ ಬಂದು ನೋಡಿದಾಗ ಕಮಲಮ್ಮ ವಾಸವಾಗಿದ್ದ ಕೊಠಡಿಯಲ್ಲಿ ಇರಲಿಲ್ಲ. ಬಳಿಕ ಪಕ್ಕದ ಕೋಣೆಯಲ್ಲಿ ಹೋಗಿ ನೋಡಿದಾಗ ರಕ್ತದ ಕಲೆಗಳು ಕಂಡು ಬಂದಿವೆ. ತಾಯಿ ಬಗ್ಗೆ ಪ್ರಶ್ನಿಸಿದಾಗ ಆ್ಯಂಬುಲೆನ್ಸ್‌ನಲ್ಲಿ ಇರುವುದಾಗಿ ತಿಳಿಸಿದ್ದು, ಅಲ್ಲಿಗೆ ಹೋಗಿ ನೋಡಿದಾಗ ತಾಯಿಯ ತಲೆ, ಕಿವಿ ಭಾಗಕ್ಕೆ ಗಂಭೀರವಾದ ಗಾಯಗಳಾಗಿದ್ದು, ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಅನುಮಾನಗೊಂಡ ರಾಮಚಂದ್ರ, ಈ ಕುರಿತು ದೂರು ದಾಖಲಿಸಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪೋಷಕರಿಂದ ಹಣವಸೂಲಿ
ವೃದ್ಧಾಶ್ರಮ ನಡೆಸುವ ನೆಪದಲ್ಲಿ ವೃದ್ಧರ ಪುತ್ರರು, ಅವರ ಪೋಷಕರಿಂದ ಮಾಸಿಕ ಸಾವಿರಾರು ರೂ.ಪಡೆಯುವ ಉಸುರು ಫೌಂಡೇಶನ್‌
ಸಿಬ್ಬಂದಿ ಸರಿಯಾಗಿ ಊಟ ಕೊಡುತ್ತಿರಲಿಲ್ಲ.ಜತೆಗೆ ವೃದ್ಧರನ್ನು ವೈದ್ಯಕೀಯ ತಪಾಸಣೆ ಕೂಡ ಮಾಡಿಸುತ್ತಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.