ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ
Team Udayavani, Sep 23, 2021, 11:15 PM IST
ಅಯೋಧ್ಯಾ: ಈ ಬಾರಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ರಾಮೋತ್ಸವ ನಡೆಸಲು ಯೋಗಿ ಆದಿತ್ಯನಾಥ್ ಸರ್ಕಾರ ಸಿದ್ಧತೆ ನಡೆಸಿದೆ.
ಹಾಗೆಯೇ ದೀಪಾವಳಿಯನ್ನು ವಿಶಿಷ್ಟ, ಸ್ಮರಣೀಯವಾಗಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ 500 ಡ್ರೋನ್‌ಗಳ ಪ್ರದರ್ಶನವೊಂದು; ದೀಪಾವಳಿಯ ಹಿಂದಿನ ದಿನವಾದ ನ.3ರಂದು, ಅಯೋಧ್ಯೆಯ ಬಾನಿನಲ್ಲಿ ನಡೆಯಲಿದೆ.
ಅದರ ಮೂಲಕ ಶ್ರೀರಾಮ ಅಯೋಧ್ಯೆಗೆ ಹಿಂತಿರುಗಿದ್ದು ಹಾಗೂ ರಾಮಾಯಣದ ವಿವಿಧ ಘಟನೆಗಳನ್ನು ಕೂಡಿಸಿ 12 ನಿಮಿಷದ ಪ್ರದರ್ಶನ ನಡೆಯಲಿದೆ. ಇದನ್ನು ನಡೆಸಿಕೊಡಲಿರುವುದು ಇಂಟೆಲ್. ಈ ಸಂಸ್ಥೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 1,824 ಡ್ರೋನ್‌ಗಳ ಮೂಲಕ ಆಗಸದಲ್ಲಿ ಕಬುಕಿ ಲಾಂಛನವನ್ನೇ ಸೃಷ್ಟಿಸಿತ್ತು. ಅದು ವಿಶ್ವವಿಖ್ಯಾತವಾಗಿತ್ತು. ಈ ಹಿನ್ನೆಲೆಯಲ್ಲಿ ಅದೇ ಸಂಸ್ಥೆಗೆ ಯೋಗಿ ಸರ್ಕಾರ ಅಯೋಧ್ಯೆಯ ಹೊಣೆಯನ್ನು ಹೊರಿಸಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಧ್ಯೇಯಗೀತೆ ಬಿಡುಗಡೆ
ಈ ಪ್ರದರ್ಶನಕ್ಕೆ ಕ್ವಾಡ್‌ಕಾಪ್ಟರ್ ಅಥವಾ ಮಲ್ಟಿರೊಟಾರ್‌ಗಳಿರುವ ಡ್ರೋನ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇವುಗಳು ಎಲ್‌ಇಡಿ ದೀಪಗಳನ್ನು ಹೊಂದಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.