Uttarakashi: ಕಾರ್ಮಿಕರ ರಕ್ಷಣೆಗೆ ಸೇನೆ ಆಗಮನ- ಸುರಂಗ ಕೊರೆಯಲಿರುವ ಯೋಧರು
Team Udayavani, Nov 26, 2023, 10:29 PM IST
ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ 15 ದಿನಗಳಿಂದ ಸಿಲುಕಿರುವ 41 ಕಾರ್ಮಿಕರ ರಕ್ಷಣ ಕಾರ್ಯಾಚರಣೆಗೆ ಈಗ ಭಾರತೀಯ ಸೇನೆ ಆಗಮಿಸಿದೆ.
ಸುರಂಗದ ಅವಶೇಷಗಳನ್ನು ಕೊರೆಯಲು ಅಮೆರಿಕದಿಂದ ತರಲಾದ ಆಗರ್ ಯಂತ್ರವು ಕಾರ್ಯ ಸ್ಥಗಿತಗೊಳಿಸಿದ ಬೆನ್ನಲ್ಲೇ ಭಾರತೀಯ ಸೇನೆಯ ಯೋಧರಿಗೆ ಕರೆ ಹೋಗಿದ್ದು, ಅವರು ಕೈಯಿಂದಲೇ ಅವಶೇಷಗಳನ್ನು ಅಗೆಯುವ ಕೆಲಸಕ್ಕೆ ಸಾಥ್ ನೀಡಲಿದ್ದಾರೆ. ಮದ್ರಾಸ್ ಸ್ಯಾಪರ್ಸ್‌ನ ಒಂದು ಘಟಕ, ಸೇನೆಯ ಕಾಪ್ಸ್ ಆಫ್ ಎಂಜಿನಿಯರ್ಸ್‌ನ ಒಂದು ತಂಡ ಈಗಾಗಲೇ ಉತ್ತರಕಾಶಿ ತಲುಪಿದೆ.
ಸುಮಾರು 60 ಮೀ. ಕೊರೆಯುವಿಕೆ ಪೂರ್ಣಗೊಳಿಸಿದ್ದ ಆಗರ್ ಯಂತ್ರದ ಬ್ಲೇಡ್‌ಗಳು ಶುಕ್ರವಾರ ಅವಶೇಷಗಳಲ್ಲಿ ಸಿಲುಕಿ ಹಾನಿಗೀಡಾಗಿದೆ. ಹೀಗಾಗಿ ಅನಿವಾರ್ಯವಾಗಿ ರಕ್ಷಣ ತಂಡವು ಕೈಯಿಂದಲೇ ಡ್ರಿಲ್ಲಿಂಗ್ ಪೂರ್ಣಗೊಳಿಸುವ ನಿರ್ಧಾರ ಕೈಗೊಂಡಿದೆ. ಅದರಂತೆ ಯೋಧರೇ ಪವರ್ ಟೂಲ್‌ಗಳನ್ನು ಬಳಸಿ ಅಗೆಯುತ್ತ ಕೊನೆಯ 10-15 ಮೀಟರ್ ದೂರವನ್ನು ಕ್ರಮಿಸಲಿದ್ದಾರೆ. ಇಕ್ಕಟ್ಟಾದ ಸ್ಥಳವಾದ ಕಾರಣ ಒಮ್ಮೆಗೆ ಒಬ್ಬನಿಗಿಂತ ಹೆಚ್ಚು ಮಂದಿ ಒಳಹೋಗಲು ಸಾಧ್ಯವಿಲ್ಲ. ಹೀಗಾಗಿ ಒಂದು ಬಾರಿಗೆ ಒಬ್ಬ ಯೋಧ ಒಳಕ್ಕೆ ಹೋಗಿ ಸ್ವಲ್ಪ ಹೊತ್ತು ಡ್ರಿಲ್ಲಿಂಗ್ ಮಾಡಿ ಹೊರಬರಲಿದ್ದಾರೆ. ಅನಂತರ ಮತ್ತೂಬ್ಬ ಯೋಧ ಒಳಕ್ಕೆ ಹೋಗಲಿದ್ದಾರೆ.
ಲಂಬವಾಗಿ ಡ್ರಿಲ್ಲಿಂಗ್
ಮತ್ತೂಂದೆಡೆ ಕಾರ್ಮಿಕರ ರಕ್ಷಣೆಗಾಗಿ ಹಲವು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಬೆಟ್ಟದ ಮೇಲಿನಿಂದ ಲಂಬವಾಗಿ ಕೊರೆಯುವ ಕೆಲಸವೂ ನಡೆಯುತ್ತಿದೆ. ರವಿವಾರ ಮಧ್ಯಾಹ್ನ ಈ ಪ್ರಕ್ರಿಯೆ ಆರಂಭವಾಗಿದ್ದು, ರಾತ್ರಿ ವೇಳೆಗೆ 19.2 ಮೀ. ಡ್ರಿಲ್ಲಿಂಗ್ ಪೂರ್ಣಗೊಂಡಿದೆ. ಒಟ್ಟು 86 ಮೀ. ಕೊರೆಯಬೇಕಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸದಸ್ಯ ನಿವೃತ್ತ ಲೆ|ಜ| ಸೈಯದ್ ಹಸ್ನೆ„ನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.