Uttarakhand: ಸಮಾನ ನಾಗರಿಕ ಸಂಹಿತೆ ಸ್ವೀಕಾರಕ್ಕೆ ಉತ್ತರಾಖಂಡ ಸಜ್ಜು
ಏಕರೂಪ ನಾಗರಿಕ ಸಂಹಿತೆಗೆ ಸಿಎಂ ಧಮಿ ನೇತೃತ್ವದ ಸಂಪುಟ ಅಸ್ತು
Team Udayavani, Feb 5, 2024, 12:31 AM IST
ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ನಿಟ್ಟಿನಲ್ಲಿ ಉತ್ತರಾಖಂಡ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ಮುಖ್ಯ ಮಂತ್ರಿ ಪುಷ್ಕರ್ ಸಿಂಗ್ ಧಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ರವಿವಾರ ಸಮಾನ ನಾಗರಿಕ ಸಂಹಿತೆ ಮಸೂದೆಗೆ ಒಪ್ಪಿಗೆ ನೀಡಿದ್ದು, ಮಂಗಳವಾರವೇ ವಿಧಾನಸಭೆ ಯಲ್ಲಿ ಇದನ್ನು ಮಂಡಿಸಲಾಗುತ್ತದೆ. ಇದು ಅಂಗೀ ಕಾರಗೊಂಡರೆ ಏಕರೂಪ ನಾಗರಿಕ ಸಂಹಿತೆ ಯನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ.
ಸರಕಾರವೇ ನೇಮಕ ಮಾಡಿದ್ದ ಉನ್ನತ ಮಟ್ಟದ ಸಮಿತಿಯು ಇತ್ತೀಚೆಗಷ್ಟೇ ಮಸೂದೆಯ ಕರಡನ್ನು ಮುಖ್ಯಮಂತ್ರಿ ಧಮಿ ಅವರಿಗೆ ಹಸ್ತಾಂತರಿಸಿತ್ತು. ವಿವಾಹ, ವಿಚ್ಛೇದನ, ಭೂಮಿ, ಆಸ್ತಿಪಾಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿ ಎಲ್ಲ ನಾಗರಿಕರಿಗೂ ಅನ್ವಯವಾಗುವಂತೆ ಏಕರೂಪದ ಕಾನೂನು ತರುವುದೇ ಈ ಮಸೂದೆಯ ಉದ್ದೇಶ ಎಂದು ಧಮಿ ನೇತೃತ್ವದ ಬಿಜೆಪಿ ಸರಕಾರ ತಿಳಿಸಿದೆ.
ಯುಸಿಸಿ ಕರಡು ಮಸೂದೆಯಲ್ಲೇನಿದೆ?
-ಹಲಾಲ್, ಇದ್ದತ್, ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ
– ಬಹುಪತ್ನಿತ್ವ ಪದ್ಧತಿಗೆ ನಿಷೇಧ
-ಮಕ್ಕಳ ಸಂಖ್ಯೆಯಲ್ಲಿ ಏಕರೂಪತೆ ಮುಂತಾದ ಜನಸಂಖ್ಯೆ ನಿಯಂತ್ರಣ ಉದ್ದೇಶದ ಕ್ರಮಗಳು
-ಲಿವ್ ಇನ್ ರಿಲೇಷನ್‌ಶಿಪ್ (ಸಹ ಜೀವನ) ನೋಂದಣಿ ಕಡ್ಡಾಯ
-ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲು
-ಯುಸಿಸಿ ವ್ಯಾಪ್ತಿಯಿಂದ ಬುಡಕಟ್ಟು ಸಮುದಾಯ ಹೊರಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.