ನಾನು ನೋಡಿದಂತೆ ಸಿನೆಮಾ : ಸೈಕಲಾಜಿಕಲ್ ಥ್ರಿಲ್ಲಿಂಗ್ ರಾಕ್ಷಸನ್
Team Udayavani, May 30, 2020, 9:04 PM IST
2018ರಲ್ಲಿ ಬಿಡುಗಡೆಗೊಂಡ ತೀವ್ರ ಕುತೂಹಲ ಕೆರಳಿಸಿದ್ದ ತಮಿಳು ಚಲನಚಿತ್ರ ರಾಕ್ಷಸನ್. ಪ್ರೇಕ್ಷರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿತ್ತು.
ಇದೊಂದು ಸೈಕಾಲಾಜಿಕಲ್ ಥ್ರಿಲ್ಲಿಂಗ್ ಫಿಲಂ ಆದ ಕಾರಣ ಥಿಯೇಟರ್‌ಗಳಲ್ಲಿ ಜನರ ಸಂಖ್ಯೆಗಳಿಗೆ ಕೊರತೆ ಇರಲಿಲ್ಲ.
ಚಿತ್ರವನ್ನು ನೋಡುತ್ತಾ ವಿಸ್ಮಯಗಳು ಕಣ್ಣೆದುರೇ ಹಾದು ಹೋದ ಅನುಭವವಾಗುತ್ತದೆ. ಚಿತ್ರ ಮುಂದೆ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂದು ಊಹಿಸಲು ಅಸಾಧ್ಯವಾಗುತ್ತದೆ. ಈ ಮಟ್ಟಿಗೆ ಚಿತ್ರ ತನ್ನ ಗುಟ್ಟನ್ನು ಬಿಟ್ಟಿಕೊಡದೇ ಮುಂದಕ್ಕೆ ಸಾಗುತ್ತದೆ. ಚಿತ್ರದ ಉದ್ದಕ್ಕೂ ಹಲವು ಆಕಸ್ಮಿಕ ಘಟನೆಗಳು ಪ್ರೇಕ್ಷಕರನ್ನು ಉನ್ಮಾದಗೊಳಿಸುತ್ತದೆ.
ನಾಯಕ ನಟನಾಗಿ ವಿಷ್ಣು ವಿಶಾಲ್ ಹಾಗೂ ನಾಯಕಿ ಪಾತ್ರದಲ್ಲಿ ಅಮಲಾ ಪೌಲ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಉದ್ದಕ್ಕೂ ಎಲ್ಲೂ ತಮ್ಮ ನಟನೆಗೆ ಧಕ್ಕೆ ಬಾರದಂತೆ ನೋಡಿಕೊಂಡಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮುಖ್ಯವಾಗಿ ಇದರಲ್ಲಿ ಲೀಡ್ ರೋಲ್ ಆಗಿ ಕ್ರಿಸ್ಟೋಫರ್ ಬಹಳ ಹೆಸರು ಮಾಡಿರುವ ಪಾತ್ರವಾಗಿದೆ.
ಮನುಷ್ಯನ ಸೈಕೋ ಗುಣ ಸಹಜವಾಗಿ ನಡೆದುಕೊಳ್ಳುವ ರೀತಿ, ಕೆಲವೊಮ್ಮೆ ಭಯಾನಕವಾಗಿ ಕಂಡರೂ, ಶಾಲಾ ವಿದ್ಯಾರ್ಥಿಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಹತ್ಯೆಗೈಯುವ ರಹಸ್ಯ ವೀಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. ಕ್ರಿಸ್ಟೋಪರ ಎಂಬಾತ ಒಂದು ಮಾನಸಿಕ ಅಸ್ವಸ್ತತೆಯಿಂದ ಬಳಲುವವನಾಗಿರುತ್ತಾನೆ. ಆ ಪಾತ್ರ ಕೊನೆಯವರೆಗೂ ನಿಗೂಢತೆಯನ್ನು ಕಾಪಾಡಿಕೊಂಡೇ ಸಾಗುತ್ತದೆ.
ಗಿಫ್ಟ್ ಬಾಕ್ಸೊಂದರಲ್ಲಿ ಗೊಂಬೆಯ ತಲೆಯನ್ನಿಟ್ಟು ಅದರಲ್ಲಿ ಆಟವಾಡಿಸೋ ವಿಲನ್ ಪಾತ್ರ ವೀಕ್ಷಕರನ್ನು ದಿಗ್ಭ್ರಮೆಗೊಳಿಸುತ್ತದೆ. ಒಂದೊಂದಾಗಿ ಅಪಹರಣಕ್ಕೊಳಗಾಗಿ ಕಣ್ಮರೆಯಾಗುವ ಹರೆಯದ ಹುಡುಗಿಯರು ಕೊನೆಗೆ ಉಸಿರು ನಿಲ್ಲಿಸೋ ರೀತಿಯಲ್ಲಿ ಕಾಣಸಿಗುತ್ತಾರೆ.
ಈ ಮಧ್ಯೆ ನಟ ಪೊಲೀಸ್ ಅಧಿಕಾರಿಯ ಪಾತ್ರಧಾರಿಯಾಗಿ ಈ ಸೈಕೋ ವಿಲನ್‌ನನ್ನು ಹುಡುಕಾಡಲು ಚಡಪಡಿಸುವ ಸಂದರ್ಭ ಉತ್ತಮ ರೀತಿಯಲ್ಲಿ ಚಿತ್ರಿತವಾಗಿದೆ. ಕೆಲವು ಭಾವನೆಗಳನ್ನು ಕಣ್ಣೀರಿನ ಮೂಲಕ ವೀಕ್ಷಕರಿಗೆ ಬಹಳ ಹತ್ತಿರವೆನಿಸುವಂತೆ ತೋರ್ಪಡಿಸಲಾಗಿದೆ.
ಹುಡುಗಿಯರ ಅಪಹರಣದ ಹಿಂದೆ ಅಡಗಿರುವ ಕರಾಳ ಮುಖ ಹಾಗೂ ಅದರ ಹುಡುಕಾಟದಲ್ಲಿ ತೊಡಗಿದಾಗ ದೊರೆತ ಕೆಲವು ಸಾಕ್ಷಿಗಳು ಸಿನೆಮಾವನ್ನು ಮತ್ತಷ್ಟೂ ಕೌತುಕದೆಡೆಗೆ ದೂಡುತ್ತದೆ. ಕ್ರಿಸ್ಟೋಪರ್ ನ ನಿಜ ಜೀವನದಲ್ಲಿ ಎದುರಾಗುವ ನೈಜ ಘಟನೆಗಳನ್ನು, ಅದಕ್ಕೆ ಅನುಸಾರವಾಗಿ ಹೊಂದಿಸಿಕೊಂಡು ಹೋಗುವ ಕೆಲವು ದೃಶ್ಯಗಳು ವಿಭಿನ್ನ ರೀತಿಯಲ್ಲಿ ಕಂಡುಬರುತ್ತವೆೆ. ಬದುಕು ನಡೆಸಿಕೊಂಡು ಹೋಗುವ ರೀತಿ ಹಾಗೂ ಘಟನೆಯೊಂದು ಮನಸ್ಸಿನ ಮೇಲೆ ಪರಿಣಾಮ ಬೀರಿ ಅದು ದ್ವೇಷದ ಹಾದಿಯನ್ನು ಹಿಡಿಯುತ್ತದೆ.
ಈ ಸಂದರ್ಭ ನಿರ್ದೇಶಕನ ಸೃಜನಶೀಲತೆ ಹಾಗೂ ಕೆಮರಮೆನ್‌ನ ಕೈ ಚಳಕ ಅತ್ಯುತ್ತಮವಾಗಿ ಕೆಲಸಮಾಡಿದೆ. ಸಿನೆಮಾ ವೀಕ್ಷಕನನ್ನು ಎಲ್ಲೂ ನಿರಾಸೆಗೊಳಿಸದೇ ಅವನನ್ನೂ ತನ್ನೊಂದಿಗೆ ಕರೆದುಕೊಂಡು ಹೋಗುತ್ತದೆ. ಚಿತ್ರ ತಂಡದ ಕೆಲಸ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಎಲ್ಲರ ಮನಸ್ಸು ಒಂದೇ ರೀತಿ ಇರುವುದಿಲ್ಲ. ವಿಭಿನ್ನ ಭಾವನೆಗಳಿಗೆ ತಕ್ಕಂತೆ ಬದಲಾಗುತ್ತಾ ಇರುತ್ತದೆ. ಇಲ್ಲಿ ಒಬ್ಬ ಮನುಷ್ಯ ಇನ್ನೊಂದು ಮುಗ್ಧ ಜೀವವನ್ನು ಹೀನಾಯವಾಗಿ ಕೊಲ್ಲುವ ರೀತಿ ಮನುಷ್ಯನ ಭಾವನೆಗಳು ಹೀಗೂ ತಿರುವನ್ನು ಪಡೆದುಕೊಳ್ಳುತ್ತದೆಯೇ
ಎಂಬುದಕ್ಕೆ ಸಾಕ್ಷಿಯಾಗಿದೆ.
– ಲಿಖಿತಾ ಗುಡ್ಡೆಮನೆ, ಪ್ರಥಮ ಎಂಸಿಜೆ, ವಿವೇಕಾನಂದ ಕಾಲೇಜು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.