UV Fusion: ಸ್ವದೇಶಿ ಉಳಿಯಲಿ, ವಿದೇಶಿ ಅಳಿಯಲಿ..


Team Udayavani, Nov 3, 2024, 1:01 PM IST

13-

ಹಬ್ಬಗಳು ಬಂತೆಂದರೆ ಸಾಕು ತಿಂಗಳಿಗೂ ಮೊದಲೇ ಆನ್‌ಲೈನ್‌ ಶಾಪಿಂಗ್‌ ಕಂಪೆನಿಗಳು ವಿವಿಧ ರೀತಿಯ ರಿಯಾಯಿತಿಗಳನ್ನು ಆರಂಭಿಸಿ ಜನರನ್ನು ಭರ್ಜರಿಯಾಗಿ ಕೊಳ್ಳೆ ಹೊಡೆಯುವುದನ್ನು ಆರಂಭಿಸುತ್ತವೆ. ಇದು ಇಂದು ಸರ್ವೆಸಾಮಾನ್ಯವಾಗಿಬಿಟ್ಟಿದೆ ಕೂಡ. ಜನರು ಕೂಡ ತಮ್ಮ ಸುತ್ತಮುತ್ತಲಿನ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುವ ಬದಲು ಆನ್‌ಲೈನ್‌ನಲ್ಲಿ ಕಾಣಸಿಗುವ ವಸ್ತುಗಳತ್ತ ಮೊರೆಹೊಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ನಮ್ಮ ಅಕ್ಕಪಕ್ಕದ, ನಮ್ಮ ಪಟ್ಟಣದ ಅಂಗಡಿಗಳಿಂದ ಖರೀದಿಸಿ ಅವರಿಗೆ ನೆರವಾಗುವ ಅವಶ್ಯಕತೆ ಇಂದಿದೆ.

ದೀಪಾವಳಿಯ ಪ್ರಣತಿಗಳನ್ನು ರಸ್ತೆ ಬದಿಯಲ್ಲಿ ಮಾರುವವರಿಂದ ಖರೀದಿ ಮಾಡಿ ಸ್ಥಳೀಯ ಕುಂಬಾರಿಕೆಯಂತಹ ಕರಕುಶಲ ಕೈಗಾರಿಕೆಗಳನ್ನು ಬೆಳೆಸೋಣ. ಬೀದಿಬದಿ ಹಣ್ಣು, ತರಕಾರಿ ಮಾರುವ ಮುಪ್ಪಿನ ವಯಸ್ಸಿನ ಮಾರಾಟಗಾರರ ಮನಸ್ಥಿತಿಯನ್ನು ಒಮ್ಮೆ ಮಾನವೀಯ ದೃಷ್ಟಿಯಿಂದ ನೋಡಿದಾಗ ಗೊತ್ತಾಗುತ್ತದೆ ಅವರ ಕಷ್ಟ ಎಂಥದ್ದು ಎಂದು. ಇಂತಹ ನಿಷ್ಕಲ್ಮಶ ಮುಗ್ಧ ಮನಸ್ಸಿನ ಬಡ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿ ಮಾಡಿ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸೋಣ. ಅವರಿಗೂ ಹಬ್ಬದ ಸಿಹಿಯನ್ನು ಹಂಚೋಣ.

ಫೈವ್‌ಸ್ಟಾರ್‌ ವಿದೇಶಿ ಮಾಲಕತ್ವದ ಹೊಟೇಲ್‌ಗ‌ಳಲ್ಲಿ ತಿನ್ನುವ ಬದಲು ನಮ್ಮ ಹತ್ತಿರದ ಸಣ್ಣ ಸಣ್ಣ ಹೊಟೇಲ್‌ಗ‌ಳಲ್ಲಿ ತಿಂದು ಅವರು ಕುಟುಂಬಕ್ಕೂ ನೆರವಾಗಿ ಮಾನವೀಯತೆಯನ್ನು ಮೆರೆಯೋಣ. ಈ ಸಣ್ಣ ಪುಟ್ಟ ಹೊಟೇಲ್‌ಗ‌ಳ ಶುಚಿ-ರುಚಿ ಸ್ಟಾರ್‌ ಹೊಟೇಲ್‌ಗ‌ಳಲ್ಲಿ ಸಿಗಲು ಸಾಧ್ಯವಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಹಸಿದ ಬಡ ಜನರಿಗೆ ಊಟ ಕೊಟ್ಟವರು ಇದೇ  ಸಣ್ಣ ಪುಟ್ಟ ಸ್ಥಳೀಯ ಅಂಗಡಿಗಳೇ ಹೊರತು ವಿದೇಶಿ ಬ್ರ್ಯಾಂಡ್‌ಗಳಲ್ಲ. ಆನ್‌ಲೈನ್‌ನಲ್ಲಿ ವಸ್ತುಗಳನ್ನು ಮಾರುವವರು  ಬಡವರ ಬಗ್ಗೆ ಒಂದು ಕ್ಷಣವಾದರೂ ಯೋಚಿಸಿದ್ದಾರಾ ಎಂದು ಒಮ್ಮೆ ಬಿಡುವಾದಾಗ ನೀವೆ ಯೋಚಿಸಿ ನೋಡಿ.

ಇಂತಹ ಮಾನವೀಯತೆ ಮೆರೆದಂಥಹ ನಮ್ಮವರಿಗೆ ಹಬ್ಬ ಹರಿದಿನಗಳಲ್ಲಿ ಸಹಾಯ ಮಾಡಲಾಗದಿದ್ದರೂ ಪರವಾಗಿಲ್ಲ. ನಮ್ಮ ಸ್ಥಳೀಯ ಅಂಗಡಿಗಳಿಗೆ ಹೋಗಿ ಖರೀದಿ ಮಾಡೋಣ, ಅವರಿಗೆ ಒಂದಷ್ಟು ಲಾಭ ಮಾಡೋಣ. ಅದೆಷ್ಟೇ ತೊಂದರೆಯಾದರೂ ಪರವಾಗಿಲ್ಲ ಸ್ವದೇಶಿ ವಸ್ತುಗಳನ್ನೇ ಬಳಕೆ ಮಾಡೋಣ. ಚೀನ ಸಹಿತ ಇನ್ನಿತರ ವಿದೇಶಿ ವಸ್ತುಗಳ ಮಾರಾಟ, ಖರೀದಿಗೆ ಕಿಂಚಿತ್ತೂ ಮನಸ್ಸು ಮಾಡುವುದಿಲ್ಲ ಎಂದು ಎಲ್ಲರೂ ಪ್ರತಿಜ್ಞೆ ಮಾಡೋಣ. ಎಲ್ಲರೂ ಒಂದಾಗಿ ದೇಶೀಯವಾಗಿ ಸಿಗುವ ವಸ್ತುಗಳನ್ನು ಖರೀದಿ ಮಾಡೋಣ. ಭಾರತದ ಆರ್ಥಿಕತೆಗೆ ಈ ಮೂಲಕ ಸೇವೆ ಸಲ್ಲಿಸೋಣ.

-ಶ್ರೀನಿವಾಸ ಎನ್‌. ದೇಸಾಯಿ

ಶಿಕ್ಷಕ, ವಿದ್ಯಾನಗರ ಕುಷ್ಟಗಿ

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.