UV Fusion: ನಂಬಿಕೆಯೇ ಗೆಳೆತನ

ಸ್ನೇಹಿತರ ದಿನ ಆಚರಿಸಿದವರು ಮುಂದಿನ ವರ್ಷವೂ ಜತೆಯಲ್ಲೇ ಇರುತ್ತಾರೆ ಎನ್ನಲಾಗದು

Team Udayavani, Aug 6, 2023, 3:41 PM IST

UV Fusion: ನಂಬಿಕೆಯೇ ಗೆಳೆತನ

ನೊಂದಾಗ ಸಮಾಧಾನ ಹೇಳಿ ಬಿದ್ದಾಗ ಮೇಲೆತ್ತುವುದೇ ನಿಜವಾದ ಸ್ನೇಹ. ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಗೆಳೆಯನಿದ್ದಂತೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಒಳ್ಳೆಯ ಗೆಳತಿಯೊಬ್ಬಳು ನಮ್ಮ ಇಡೀ ಜೀವನವನ್ನು ಸುಂದರವಾಗಿಸಬಲ್ಲಳು, ಜೀವನದಲ್ಲಿ ಎದುರಾಗುವ ಕಷ್ಟ -ನಷ್ಟಗಳನ್ನು ಸಹೃದಯಿಗಳೊಂದಿಗೆ ಮಾತ್ರ ಹಂಚಿಕೊಳ್ಳಬಹುದು. ಅವರ ಸಲಹೆಗಳಿಂದ ಧೈರ್ಯ , ಸ್ಫೂರ್ತಿ ಸಿಗುವುದು. ಸುಮಧುರ ಸಂಬಂಧವಾದ ‘ಸ್ನೇಹ’ಕ್ಕೆ ಗೌರವ ನೀಡುವ ದಿನ ನಾಳೆ, ಮನಸ್ಸು ಮನಸ್ಸುಗಳ ಬಾಂಧವ್ಯವೇ ಗೆಳೆತನ.

ನಮ್ಮ ನಗುವಿಗೆ ಕಣ್ಣಿರಿಗೆ ಸಾಥಿಯಾಗಿ ನಮ್ಮೊಂದಿಗೆ ಬೆರೆಯುವ ಆ ಮತ್ತೂಂದು ಮನಸ್ಸಿನ ರೂಪವೇ ಸ್ನೇಹ. ಆ ಮನಸ್ಸಿನಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷವೇ ಗೆಳೆತನದ ಆಹ್ಲಾದಕ್ಕೆ ಸಾಕ್ಷಿ . ಪರಿಶುದ್ಧ , ನಿಸ್ವಾರ್ಥ ತ್ಯಾಗದಿಂದ ಕೂಡಿದ ನಿಷ್ಕಲ್ಮಶವಾದ ಸ್ನೇಹ ಸಮಾಜಕ್ಕೂ ಒಳಿತನ್ನು ಮಾಡುತ್ತದೆ. ಸ್ನೇಹದಲ್ಲಿ ಅಹಂ ಆಗಲಿ ದ್ವೇಷವಾಗಲಿ ಸುಳಿಯಲೇ ಬಾರದು ನಮ್ಮ ಸ್ನೇಹ ಸರಿಯಾದ ಮಾರ್ಗದಲ್ಲಿ ನಡೆಯಲು ಸಹಕಾರಿ ಯಾಗಬೇಕು. ನಾವು ನಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳುವಂತಿದ್ದು ನಾವು ಮಾಡುವ ಸ್ನೇಹ ಕೂಡ ನಮಗೆ ದಾರಿದೀಪವಾಗಬೇಕು. ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವಂತಿರಬೇಕು .

ನಿನ್ನ ಸ್ನೇಹಿತರನ್ನು ತೋರಿಸು ನಿನ್ನ ಗುಣವನ್ನು ಹೇಳುತ್ತೇನೆ ‘ ಎಂಬ ಮಾತಿದೆ. ಕಷ್ಟದ ಸಮಯದಲ್ಲಿ ಸಹಾಯ ಹಸ್ತ ನೀಡಿ ಧೈರ್ಯ ತುಂಬ ಎದೆಗುಂದದಂತೆ ಮುನ್ನುಗ್ಗಿಸುವ ಸದ್ಗುಣವು ಸ್ನೇಹಿತರಲ್ಲಿರಬೇಕು. ಕೆಲವೊಮ್ಮೆ ನಾವು ಕಷ್ಟವನ್ನಾಗಲಿ ನೋವನ್ನಾಗಲಿ ಮನೆಯವರೊಡನೆ ಹಂಚಿಕೊಳ್ಳದೆ ಆತ್ಮೀಯ ಗೆಳೆಯರೊಡನೆ ಹಂಚಿಕೊಳ್ಳುತ್ತೇವೆ ಸ್ನೇಹಿತರಾದರೆ ಆ ಗೆಳತಿಯು ನೋವನ್ನು ಅರಿತು ಪರಿಹಾರವನ್ನು ಸೂಚಿಸಿ ಮಾರ್ಗದರ್ಶಕರಾಗಿ ಸ್ನೇಹಕ್ಕೆ ಒಂದು ವ್ಯಾಖ್ಯಾನ ನೀಡುತ್ತಾರೆ ಇಂದಿನ ದಿನಗಳಲ್ಲಿ ಎಂದಿನಂತೆ ಸ್ನೇಹಕ್ಕೆ ಒಂದು ನಿಖರವಾದ ಅರ್ಥವನ್ನು ನೀಡುವುದು ಕಷ್ಟವಾಗುತ್ತದೆ . ಏಕೆಂದರೆ ಇಂದಿನವರು ಸ್ನೇಹ ಎಂಬುದರ ಅರ್ಥವನ್ನು ಆಳವಾಗಿ ಅರಿತುಕೊಳ್ಳಲು ಇಷ್ಟಪಡುವುದಿಲ್ಲ .

ಶೇಕ್‌ ಹ್ಯಾಂಡ್‌ ಕೊಡುತ್ತಿರುವಾಗ ಮನಸ್ಸಲ್ಲಿ ಇನ್ನೇನೋ ಸಂಚು ನಡೆಯುತ್ತಿರುತ್ತೆ . ಪ್ರಾಮಾಣಿಕ ಸ್ನೇಹಿತರಾಗಿ , ಸ್ನೇಹವನ್ನು ಉಳಿಸಿಕೊಳ್ಳುವವರು ಅತೀ ಕಡಿಮೆ ಜನ . ಮಹಾಭಾರತದಲ್ಲಿ ದುರ್ಯೋಧನ ಮತ್ತು ಕರ್ಣನ ನಡುವಿನ ಸ್ನೇಹವನ್ನು ಪ್ರಪಂಚವೇ ಹೊಗಳಿದರೂ, ದುರ್ಯೋಧನನಲ್ಲಿ ಸ್ನೇಹದ ಜತೆ ಸ್ವಾರ್ಥವೂ ಕೂಡಿತ್ತು . ಆದರೆ ಕರ್ಣನ ಸ್ನೇಹದಲ್ಲಿ ಕಿಂಚಿತ್ತೂ ಕಲ್ಮಷವಿರಲಿಲ್ಲ . ರಾಜ್ಯವನ್ನು ಕೊಟ್ಟು ಸ್ನೇಹ ಹಸ್ತಚಾಚಿದ ದುರ್ಯೋಧನನಿಗೆ ಕರ್ಣ ಕೊನೆಯುಸಿರಿರುವವರೆಗೂ ಸ್ನೇಹಕ್ಕೆ ಎರಡು ಬಗೆಯದೆ ಮಹಾ ಭಾರತದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾನೆ. ಪಾಂಡವರು ನಿನ್ನ ಸಹೋದರರು ಅವರೊಡನೆ ಯುದ್ಧ ಬೇಡ ನೀನು ದುರ್ಯೋಧನನ ಪಕ್ಷವನ್ನು ಬಿಟ್ಟು ಬಾ ಎಂದು ಶ್ರೀ ಕೃಷ್ಣ ಕರ್ಣನಿಗೆ ತಿಳಿಸಿದಾಗ ಕರ್ಣ ಸ್ನೇಹಕ್ಕೆ ದ್ರೋಹ ಬಗೆಯದೆ ದುರ್ಯೋಧನ ನನ್ನ ಆಪತ್ತಿನ ಸಮಯದಲ್ಲಿ ರಾಜ್ಯ ಕೊಟ್ಟು ಸ್ನೇಹ ಹಸ್ತ ಚಾಚಿದ್ದಾನೆ. ಅವನಿಗೆ ಮೋಸ ಮಾಡಲಾರೆ ಎಂದು ತಿಳಿಸುತ್ತಾನೆ . ಅಂದು ಕರ್ಣ ದುರ್ಯೋಧನನಿಗೆ ತೋರಿಸಿದ್ದು ಎಂತಹ ನಿಸ್ವಾರ್ಥವಾದ ಸ್ನೇಹ ಅಲ್ಲವೇ? ಶ್ರೀ ಕೃಷ್ಣ – ಕುಚೇಲ ಬಾಲ್ಯದಿಂದಲೂ ಆತ್ಮೀಯ ಸ್ನೇಹಿತರು.

ಕುಚೇಲ ತನ್ನ ಬಡತನದಿಂದ ಕುಗ್ಗಿ ಸ್ನೇಹಿತನಾದ ಶ್ರೀ ಕೃಷ್ಣನಿಗೆ ಕೊಡಲು ತಂದಿದ್ದ ಅವಲಕ್ಕಿಯನ್ನು ಹೇಗೆ ಕೊಡುವುದೆಂದು ಯೋಚಿಸುತ್ತಿರುವಾಗ ಕೃಷ್ಣ ತಾನೇ ಒಂದು ಮುಷ್ಟಿ ಅವಲಕ್ಕಿ ತಿಂದು ಸ್ನೇಹಿತನಲ್ಲಿದ್ದ ಹಿಂಜರಿಕೆಯನ್ನು ಹೋಗಲಾಡಿಸಿ, ಬೇಕಾದ ಸಂಪತ್ತನ್ನು ಕೊಟ್ಟು ನಿಷ್ಕಲ್ಮಷ ವಾದ ಸ್ನೇಹವನ್ನು ಪ್ರಕಟಿಸುತ್ತಾನೆ .

ಬಾಲ್ಯದ ಗೆಳೆತನ, ಉದ್ಯೋಗ ಸ್ಥಳದಲ್ಲಿನ ಸ್ನೇಹಿತರು. ಹೊಸ ಹೊಸ ಮಿತ್ರರು ಇವರೆಲ್ಲರ ಆತ್ಮೀಯಗೆಳೆತನ ಉಳಿಸಿಕೊಂಡು ಹೋಗುವುದು ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು ಆದರೆ ನಂಬಿಕೆಯಿಟ್ಟ ಸ್ನೇಹಿತನಿಗೆ ಎರಡುಬಗೆಯದೇ ಸದಾ ನಾನು ನಿನ್ನೊಂದಿಗೆದ್ದೇನೆ ಎಂಬ ಆತ್ಮವಿಶ್ವಾಸವನ್ನು ತುಂಬುವ ಗುಣ ಸ್ನೇಹದಲ್ಲಿರಬೇಕು. ಆತಂಹ ಗುಣವುಳ್ಳವರನ್ನು ಸ್ನೇಹಿತರನ್ನಾಗಿಸಿಕೊಳ್ಳಬೇಕು . ಸ್ನೇಹದಲ್ಲಿ ಇರಬೇಕಾದದ್ದು ಒಂದೇ ಅದೇ ವಿಶ್ವಾಸ , ಆದರೆ ಪ್ರೀತಿಯಲ್ಲಿ ಮಾತ್ರ ಸ್ನೇಹ ಹಾಗೂ ವಿಶ್ವಾಸ ಎರಡೂ ಇರಬೇಕಾಗುತ್ತದೆ . ಸ್ನೇಹ ನಿಜಕ್ಕೂ ನವಿರಾದ ಸಂಬಂಧ , ಸಾವಿರ ಜನರು ನಮ್ಮ ವಿರುದ್ಧ ನಿಂತಾಗ ನಮ್ಮ ಪರವಾಗಿ ಒಬ್ಬಳು ನಿಂತಿರುತ್ತಾಳಾ ಅವಳೇ ನಿಜವಾದ ಸ್ನೇಹಿತೇ ಅದೇ ನೈಜ ಸ್ನೇಹ ಹೀಗೆ ಸ್ನೇಹಕ್ಕೆ ನಾನಾ ಕವಿಗಳು ನಾನಾ ರೀತಿಯ ಭಾಷ್ಯ ಬರೆದಿದ್ದಾರೆ . ಸ್ನೇಹ ಯಾವಾಗ , ಎಲ್ಲಿ ಬೇಕಾದರೂ ಮೂಡಬಹುದು . ನೋಡ ನೋಡುತ್ತಿದ್ದಂತೆಯೇ ಬೆಳೆದು ಹೆಮ್ಮರವಾಗಬಹುದು , ಆದರೆ ಅದೇ ಸ್ನೇಹ ನಮ್ಮ ಬೆನ್ನಹಿಂದೆ ಎಲ್ಲಿಯತನಕ ಇರುತ್ತೆ ಅನ್ನೋದಷ್ಟೇ ಮುಖ್ಯ. ಇಂದು ಜತೆಯಲ್ಲಿ ಸ್ನೇಹಿತರ ದಿನ ಆಚರಿಸಿದವರು ಮುಂದಿನ ವರ್ಷವೂ ಜತೆಯಲ್ಲೇ ಇರುತ್ತಾರೆ ಎನ್ನಲಾಗದು . ಆಗ ಇನ್ಯಾರೋ ಆ ಜಾಗದಲ್ಲಿ ಇರಬಹುದು .

ನಮ್ಮ ಮನಸ್ಸೇ ಹಾಗೆ , ಕೆಲವೊಮ್ಮೆ ಯಾರೋ ? ಯಾಕೋ ? ಇಷ್ಟವಾಗ್ತಾರೆ . ಅವರೇ ನಮ್ಮ ಬೆಸ್ಟ್‌ಫ್ರೆಂಡ್‌ ಅಂತ ತಿಳಿತೀವಿ . ಅಂಥವರ ಜತೆ ಎಲ್ಲವನ್ನೂ ಹಂಚಿಕೊಳ್ಳುತ್ತೇವೆ. ಆದರೆ ಅವರು ಮುಂದೊಂದು ದಿನ ಕಾರಣ ಹೇಳದೆ ಕೈಕೊಟ್ಟುಬಿಡುತ್ತಾರೆ ಆಗ ಅದೆಷ್ಟು ನೋವು , ಅವಮಾನ ಅನುಭವಿಸುತ್ತೀವಿ. ಈಗಂತೂ ಕಾಲ ತುಂಬಾನೇ ಬದಲಾಗಿದೆ. ಸಾಮಾಜಿಕ ಜಾಲ ತಾಣಗಳು ಗೆಳೆತನ ಸಂಪಾದಿಸಲು ಸಾಕಷ್ಟು ದಾರಿಯನ್ನು ಮಾಡಿಕೊಟ್ಟಿವೆ . ಇಂದು ಕಾಲ ಬದಲಾಗಿದೆ , ಜತೆಗೆ ನಾವೂ ಬದಲಾಗಿದ್ದೇವೆ ಲೆಟರ್‌ ಬರೆಯೋಕೆ ಟೈಂ ಇಲ್ಲ , ಫೋನ್‌ ಮಾಡೋಕೆ ಕರೆದರಗಳು ಅನ್‌ ಲಿಮಿಟೆಡ್‌ ಜತೆ ವಿಪರೀತ ಏರಿಕೆಯಾಗಿವೆ . ಹೀಗಾಗಿ ಜನರಿಗೆ ಅಂತಜಾìಲ ತಾಣಗಳು ಕಡಿಮೆ ಖರ್ಚಿಗೆ ಲಾಭದಾಯಕ ಎಂಬಂತೆ ತೋರುತ್ತಿವೆ ಫೇಸ್ ಬು ಕ್‌, ಟ್ವಿಟರ್‌ ಖಾತೆ ತೆರೆದು ಅಲ್ಲಿರುವವರಿಗೆ ರಿಕ್ವೆಸ್ಟ್‌ ಕೊಟ್ಟರೆ ಕೆಲವೇ ಕ್ಷಣಗಳಲ್ಲಿ ನೂರಾರು ಸ್ನೇಹಿತರು ನಮ್ಮ ಸುತ್ತಮುತ್ತ ಹುಟ್ಟಿಕೊಳ್ಳುತ್ತಾರೆ . ಆದರೆ ಇವರೆಲ್ಲ ನಮ್ಮ ಬೆಸ್ಟ್‌ ಫ್ರೆಂಡ್‌ ಗಳ ಸ್ಥಾನ ತುಂಬುತ್ತಾರಾ? ಖಂಡಿತಾ ಅಲ್ಲ , ಸಾಮಾಜಿಕ ತಾಣಗಳು ಇಂದು ಸ್ನೇಹವನ್ನು ಬಿಕರಿ ಮಾಡುವ ತಾಣಗಳಾಗುತ್ತಿವೆಯೇ ಹೊರತು ಒಳ್ಳೆಯ ಸ್ನೇಹಿತರನ್ನು ಸೃಷ್ಟಿಸುವ ತಾಣಗಳಾಗುತ್ತಿಲ್ಲ . ಏನೇ ಇರಲಿ , ಈ ದಿನದ ಮಟ್ಟಿಗಾದರೂ ನಮ್ಮ ಜೀವನದಲ್ಲಿ ಸ್ನೇಹಿತರ ಜತೆ ಕಳೆದ ಅಮೂಲ್ಯ ದಿನಗಳನ್ನು ನೆನಪು ಮಾಡಿಕೊಳ್ಳೋಣ . ನಾನಾ ಕಾರಣಕ್ಕೆ ಮನಸ್ಸಿಗೆ ಹತ್ತಿರವಾದ ಗೆಳೆಯ ಗೆಳತಿಯರು . ಹೀಗೆ ಎಲ್ಲರಿಗೂ ಈ ದಿನದ ಶುಭಾಶಯ.

*ಭೂಮಿಕಾ ದಾಸರಡ್ಡಿ , ಬಿದರಿ

ಟಾಪ್ ನ್ಯೂಸ್

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.