ಈ ತಿಂಗಳ ಅಂತ್ಯದೊಳಗೆ ಕೇರಳದಲ್ಲಿ ಲಸಿಕೆ ವಿತರಣೆ ಪೂರ್ಣ?
ಖಾಸಗಿ ಆಸ್ಪತ್ರೆಗಳಿಂದಲೂ ಲಸಿಕೆ ಖರೀದಿಗೆ ಸರ್ಕಾರ ನಿರ್ಧಾರ
Team Udayavani, Aug 8, 2021, 11:00 PM IST
ತಿರುವನಂತಪುರಂ/ನವದೆಹಲಿ: ಪ್ರಸಕ್ತ ತಿಂಗಳ ಅಂತ್ಯದೊಳಗಾಗಿ ಕೇರಳದ ಎಲ್ಲ ಅರ್ಹ ಜನಸಂಖ್ಯೆಗೆ ಲಸಿಕೆ ವಿತರಣೆ ಪೂರ್ಣಗೊಳಿಸಲು ಯತ್ನಿಸಲಾಗುವುದು ಎಂದು ಸಿಎಂ ಪಿಣರಾಯಿ ವಿಜಯನ್ ಭಾನುವಾರ ಹೇಳಿದ್ದಾರೆ. ಈಗಾಗಲೇ ರಾಜ್ಯದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಮಂದಿ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
ಆ.9ರಿಂದ 31ರವರೆಗೆ ರಾಜ್ಯವ್ಯಾಪಿ ಲಸಿಕೆ ವಿತರಣೆ ಅಭಿಯಾನವನ್ನು ಸರ್ಕಾರ ಕೈಗೊಂಡಿದೆ. ವಿಶೇಷವೆಂದರೆ, ಸರ್ಕಾರವು ಖಾಸಗಿ ಆಸ್ಪ ತ್ರೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ಲಸಿಕೆ ಖರೀದಿಸಿ ಸಾರ್ವಜನಿಕರಿಗೆ ವಿತರಿಸಲು ನಿರ್ಧರಿಸಿದೆ. ಅದರಂತೆ, ಖಾಸಗಿ ಆಸ್ಪತ್ರೆಗ ಳಲ್ಲಿ 20 ಲಕ್ಷ ಡೋಸ್ ಲಸಿಕೆ ಇವೆ. ಅದರ ಜೊತೆಗೆ ಈ ತಿಂಗಳು ಕೇಂದ್ರ ಸರ್ಕಾರವು 24 ಲಕ್ಷ ಡೋಸ್‌ಗಳನ್ನು ರಾಜ್ಯಕ್ಕೆ ಒದಗಿಸಲಿದೆ ಎಂದೂ ಸಿಎಂ ಪಿಣರಾಯಿ ತಿಳಿಸಿದ್ದಾರೆ.
ನೂಳ್‌ಪುಳದಲ್ಲಿ ಶೇ.100 ಲಸಿಕೆ:
ಕೇರಳದ ವಯನಾಡ್ ಜಿಲ್ಲೆಯ ನೂಳ್‌ಪುಳದಲ್ಲಿ ಶೇ.100ರಷ್ಟು ಲಸಿಕೆ ವಿತರಣೆ ಪೂರ್ಣಗೊಂಡಿದೆ. ಈ ಮೂಲಕ ಲಸಿಕೆ ನೀಡುವಿಕೆ ಪೂರ್ಣ ಗೊಳಿಸಿದ ಮೊದಲ ಬುಡಕಟ್ಟು ಪಂಚಾಯತ್ ಎಂಬ ಹೆಗ್ಗಳಿಕೆಗೆ ನೂಳ್‌ಪುಳ ಪಾತ್ರವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದೇ ವೇಳೆ, ಶನಿವಾರದಿಂದ ಭಾನುವಾರಕ್ಕೆ 24 ಗಂಟೆಗಳಲ್ಲಿ ದೇಶಾದ್ಯಂತ 39,070 ಮಂದಿಗೆ ಸೋಂಕು ದೃಢಪಟ್ಟಿದ್ದು, 491 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 4,06,822ಕ್ಕಿಳಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಇನ್ಮುಂದೆ ಕ್ಷಣಾರ್ಧದಲ್ಲೇ ವಾಟ್ಸಾಪ್ ಮೂಲಕ ಪಡೆಯಬಹುದು ವ್ಯಾಕ್ಸಿನೇಷನ್ ಪ್ರಮಾಣ ಪತ್ರ
ಪ್ರಯಾಣ ನಿರ್ಬಂಧ ಸಡಿಲಿಕೆ:
ಭಾರತಕ್ಕೆ ವಿಧಿಸಿದ್ದ ಪ್ರಯಾಣ ನಿರ್ಬಂಧವನ್ನು ಯುಕೆ ಭಾನುವಾರ ಸಡಿಲಿಕೆ ಮಾಡಿದೆ. ಅದರಂತೆ, ಇನ್ನು ಮುಂದೆ ಲಸಿಕೆಯ ಎರಡೂ ಡೋಸ್ ಪಡೆದುಕೊಂಡ ಭಾರತೀಯರು ಬ್ರಿಟನ್ ತಲುಪಿದಾಗ 10 ದಿನಗಳ ಕಡ್ಡಾಯ ಹೋಟೆಲ್ ಕ್ವಾರಂಟೈನ್‌ನಿಂದ ವಿನಾಯ್ತಿ ಪಡೆಯಲಿದ್ದಾರೆ.
ಜಾಗತಿಕ ಲಸಿಕೆ
ಈವ ರೆಗೆ ಜಗತ್ತಿನಾದ್ಯಂತ 440 ಕೋ ಟಿ ಡೋಸ್ ಲಸಿಕೆ ವಿತರಣೆಯಾಗಿದೆ. ಅಂದರೆ ಇದು ಪ್ರತಿ 100 ಮಂದಿಗೆ 57 ಡೋಸ್‌ಗೆ ಸಮ. ಅಭಿ ವೃದ್ಧಿ ಹೊಂದಿರುವ ಅಥವಾ ಅಧಿಕ ಆದಾಯವುಳ್ಳ ಶ್ರೀಮಂತ ರಾಷ್ಟ್ರಗಳು ಪ್ರತಿ 100 ಮಂದಿಗೆ ಸುಮಾರು 100 ಡೋಸ್‌ಗಳ ವಿತರಣೆಯನ್ನು ಪೂರ್ಣಗೊಳಿಸಿದೆ. ಆದರೆ, ಕಡಿಮೆ ಆದಾಯವಿರುವ ಬಡ ದೇಶಗಳಲ್ಲಿ ಇನ್ನೂ ಪ್ರತಿ 100 ಮಂದಿಯಲ್ಲಿ ಕೇವಲ 1.5 ಡೋಸ್‌ಗಳಷ್ಟೇ ವಿತರಣೆ ಯಾಗಿವೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ಯಾವ ದೇಶದಲ್ಲಿ ಎಷ್ಟು? (ಸಿಂಗಲ್ ಡೋಸ್)
ಯುಎಇ – ಶೇ.81
ಮಾಲ್ಟಾ- ಶೇ.80
ಐಸ್ ಲ್ಯಾಂಡ್- ಶೇ.76
ಸಿಂಗಾಪು ರ- ಶೇ.76
ಉರುಗ್ವೆ- ಶೇ.75
ಕತಾರ್- ಶೇ.75
ಚಿಲಿ- ಶೇ.73
ಕೆನಡಾ – ಶೇ.72
ಸ್ಪೇನ್- ಶೇ.70
ಪೋರ್ಚುಗಲ್- ಶೇ.70
ಯುಕೆ- ಶೇ.70
ಅಮೆರಿಕ- ಶೇ.58
ಭಾರತ- ಶೇ. 44
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.