ವಾರಾಹಿಯಿಂದ ನೀರು ಪೂರೈಕೆ : 271 ಕಿ. ಮೀ. ಪೈಪ್ಲೈನ್
Team Udayavani, Feb 28, 2022, 5:30 AM IST
ಉಡುಪಿ : ಉಡುಪಿ ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಭರ ದಿಂದ ಸಾಗುತ್ತಿದೆ. (ಕೆಯುಐಡಿಎಫ್ಸಿ) ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು ಯೋಜನೆಯನ್ನು ನಿರ್ವಹಿಸುತ್ತಿದೆ.
ನಗರದ ಹೃದಯ ಭಾಗದಲ್ಲಿ ಪೈಪ್ಲೈನ್ ಕಾಮಗಾರಿಗಳು ಚುರುಕುಗೊಂಡಿದ್ದು, ಈಗಾಗಲೇ ಶೇ.67 ಕಾಮಗಾರಿ ಮುಗಿಸಲಾಗಿದೆ. ನಗರ ಸುತ್ತಮುತ್ತ ಸಹಿತ ಒಟ್ಟು 271 ಕಿ.ಮೀ. ಪೈಪ್ಲೈನ್ ನಿರ್ಮಿಸಬೇಕಿದ್ದು, 170 ಕಿ.ಮೀ. ಮುಗಿಸಲಾಗಿದೆ. ಇದರಲ್ಲಿ ಈಗಾಗಲೆ ಸುಸ್ಥಿತಿಯಲ್ಲಿರುವ ಪೈಪ್ಲೈನ್ಗಳನ್ನು ಉಳಿಸಿಕೊಳ್ಳಲಾಗುತ್ತಿದೆ. ಮಣಿಪಾಲ, ಚಿಟ್ಪಾಡಿ, ಮಲ್ಪೆ, ಪರ್ಕಳ, ಗುಂಡಿಬೈಲು, ಸರಳೇಬೆಟ್ಟು, ಸಗ್ರಿ, ಕಲ್ಮಾಡಿ ಸಹಿತ ಕೆಲವು ಪೈಪ್ಲೈನ್ ಕಾಮಗಾರಿ ನಡೆಯಲಿದೆ. ಕೆಲವು ಕಡೆಗಳಲ್ಲಿ ಬಾಕಿ ಇದ್ದು, ಅಲ್ಲಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ.
8 ವರ್ಷ ನಿರ್ವಹಣೆ
ಒಟ್ಟು ಕಾಮಗಾರಿ 172 ಕೋ.ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ. ಇದರಲ್ಲಿ ಪೈಪ್ಲೈನ್ ವರ್ಕ್, ಒಎಚ್ಟಿ ಟ್ಯಾಂಕ್ಗಳ ನಿರ್ಮಾಣ ಸೇರಿದೆ. ಕೆಲಸ ಮುಕ್ತಾಯದ ಬಳಿಕ ಗುತ್ತಿಗೆ ವಹಿಸಿಕೊಂಡ ಸಂಸ್ಥೆ 8 ವರ್ಷ ನಿರ್ವಹಣೆ ಮಾಡಬೇಕು.
2046ರವರೆಗಿನ ದೂರದೃಷ್ಟಿ ಯೋಜನೆ
ಮುಂದಿನ 2046ರವರೆಗೆ ನಗರದಲ್ಲಿ 24 ಗಂಟೆಯೂ ಕುಡಿಯುವ ನೀರು ಪೂರೈಸಲು ರೂಪಿಸಿದ ಯೋಜನೆ ಇದಾಗಿದೆ. ನಗರದಲ್ಲಿ ನೀರು ಪೂರೈಕೆ ಸಂಬಂಧಿಸಿ ಎಚ್ಡಿಪಿ (ಹೈಡೆನ್ಸಿಟಿ ಪಾಲಿಥಿನ್ ಪೈಪ್)ಗಳನ್ನು ಅಳವಡಿಸಲಾಗುತ್ತಿದೆ. ಅತ್ಯಂತ ಗುಣಮಟ್ಟದಿಂದ ಕೂಡಿರುವ ಪೈಪ್ ಮತ್ತು ವಾಲ್Ì, ಜಾಯಿಂಟ್ ಪರಿಕರಗಳನ್ನು ಅಳವಡಿಸಲಾಗುತ್ತದೆ.
– ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.