ಸಾಮೂಹಿಕ ಸಾರಿಗೆ ವ್ಯವಸ್ಥೆ ಸ್ಥಗಿತ ! ಸದ್ಯಕ್ಕೆ ಬಾರದ ರೈಲುಗಳಿಗೆ ಕಾಯುತ್ತಿರುವವರು!


Team Udayavani, Apr 18, 2020, 6:55 PM IST

ಸಾಮೂಹಿಕ ಸಾರಿಗೆ ವ್ಯವಸ್ಥೆ ಸ್ಥಗಿತ ! ಸದ್ಯಕ್ಕೆ ಬಾರದ ರೈಲುಗಳಿಗೆ ಕಾಯುತ್ತಿರುವವರು!

ಎಷ್ಟೋ ದೂರದ ಪ್ರದೇಶಗಳಿಂದ ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದವರೆಲ್ಲರ ಸದ್ಯದ ಆಸೆ ಒಂದೇ. ಅದು ಊರಿಗೆ ಹೋಗಬೇಕೆಂಬುದು. ಇವರ ನಿತ್ಯಕಾಯುವಿಕೆಗೆ ನಿಲಾªಣಕ್ಕೂ ಬೇಸರ ಮೂಡಿರಬಹುದು…

ನವದೆಹಲಿ: ವಾರಣಾಸಿಯ ಪ್ರಮುಖ ರೈಲು ನಿಲ್ದಾಣ ಬಹು ವಿಸ್ತಾರವಾದ ಕಟ್ಟಡ. ಐದು ಶತಮಾನದಿಂದ ಹಲವಾರು ಬಾರಿ ಇಲ್ಲಿ ರೈಲುಗಳಿಗಾಗಿ ಜನರು ಕಾದಿದ್ದಾರೆ. ಕೆಲವೊಮ್ಮೆ ಬಹಳ ತಾಸುಗಳು, ಇನ್ನು ಕೆಲವೊಮ್ಮೆ ಕೆಲವೇ ನಿಮಿಷಗಳು. ಆದರೆ, ಇಷ್ಟು ದಿನ ಕಾದದ್ದು ಇಲ್ಲವೇ ಇಲ್ಲ. ವಿಪರ್ಯಾಸವೆಂದರೆ ಬಾರದ ರೈಲುಗಳಿಗೆ ಕಾಯಲಾಗುತ್ತಿದೆ.

ಎತ್ತರದ ಛಾವಣಿಯ ಕೋಣೆಯೊಳಗೆ ನೂರಾರು ಮಂದಿ ಪ್ರಯಾಣಿಕರು ಮೂರು ವಾರಗಳಿಂದ ಕಾಯುತ್ತಿದ್ದಾರೆ ಇನ್ನೂ ಬಾರದ ರೈಲುಗಳ ನಿರೀಕ್ಷೆಯಲ್ಲಿ. ಕಟ್ಟಡ ಕಾರ್ಮಿಕರು, ಮಕ್ಕಳೊಂದಿಗೆ ಪೋಷಕರು, ಯಾತ್ರಿಕರು, ವಿದ್ಯಾರ್ಥಿಗಳು-ಹೀಗೆ ಎಲ್ಲ ವರ್ಗದವರೂ ಇಲ್ಲಿದ್ದಾರೆ. ಎಲ್ಲರ ಸಂಕಷ್ಟ ಮತ್ತು ಆಸೆ ಒಂದೇ-ತಮ್ಮ ಊರುಗಳಿಗೆ ಹೇಗಾದರೂ ಮಾಡಿ ತೆರಳಬೇಕಿದೆ.

ಕೋವಿಡ್‌-19 ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಘೋಷಿಸಲಾಯಿತು. ಇದ್ದಕ್ಕಿದ್ದಂತೆ ರೈಲು ಸೇರಿದಂತೆ ಸಾಮೂಹಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಾಗ ರೈಲು ನಿಲ್ದಾಣದಲ್ಲಿದ್ದ ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ನಿಲ್ದಾಣದಲ್ಲೇ ಉಳಿದುಕೊಳ್ಳಬೇಕಾಯಿತು. ನೂರಾರು ಮೈಲಿ ದೂರದಿಂದ ನಗರಕ್ಕೆ ಬಂದಿದ್ದ ವಲಸಿಗರೂ ಸೇರಿದಂತೆ ಇನ್ನೂ ಯಾವ್ಯಾವುದೋ ಕಾರಣಕ್ಕೆ ಬಂದವರೆಲ್ಲಾ ರೈಲ್ವೆ ನಿಲ್ದಾಣದಲ್ಲೇ ಬಂಧಿಯಾದರು.

ಲಕ್ಷಾಂತರ ಮಂದಿ ಪ್ರಯಾಣಿಕರನ್ನು ನಿಭಾಯಿಸಲು ಒಗ್ಗಿಕೊಂಡಿರುವ ನಿಲ್ದಾಣದ ಸಿಬಂದಿ, ಉಳಿದಿರುವ 50 ಕ್ಕಿಂತ ಕಡಿಮೆ ಪ್ರಯಾಣಿಕರನ್ನು ನೋಡಿಕೊಳ್ಳುವಲ್ಲಿ ನಿರತರಾಗಿ¨ªಾರೆ. ಮೂರು ಹೊತ್ತಿನ ಊಟ, ಬಿಸಿ ಚಹಾ, ಬೆಳಗ್ಗೆ ಯೋಗ ಅಧಿವೇಶನ ಮತ್ತು ಹಿಂದೂ ಮಹಾಕಾವ್ಯಗಳ ರಾತ್ರಿಯ ಪ್ರದರ್ಶನಗಳನ್ನು ಮಾಡಲಾಗುತ್ತದೆ. ಲಾಕ್‌ಡೌನ್‌ ಮಾರ್ಚ್‌ 25 ರಿಂದ ಪ್ರಾರಂಭವಾಗಿ ಮೇ 3 ರವರೆಗೆ ವಿಸ್ತರಿಸಲ್ಪಟ್ಟಿದೆ. ಉದ್ಯೋಗವಿಲ್ಲದೇ ಬದುಕುವ ಅವಕಾಶದ ಕೊರತೆಯ ಭಯದಿಂದ ಕಾರ್ಮಿಕರು ಕಾಲ್ನಡಿಗೆಯಲ್ಲಿ ನಗರಗಳಿಂದ ಹೊರಬಂದಿ¨ªಾರೆ. 1.3 ಬಿಲಿಯನ್‌ ಜನಸಂಖ್ಯೆ ಹೊಂದಿರುವ ಈ ರಾಷ್ಟ್ರದಲ್ಲಿ ಆರ್ಥಿಕತೆ ಸ್ಥಗಿತಗೊಂಡಾಗ ಅನೇಕರು ಹಸಿವಿನಿಂದ ಬಳಲುತ್ತಿರುವುದು ನಿಜ.

ವಾರಣಾಸಿಯ ಮುಖ್ಯ ರೈಲ್ವೇ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರು ದೂರದರ್ಶನದಲ್ಲಿ ಮಹಾಭಾರತ-ರಾಮಾಯಣ ವೀಕ್ಷಿಸುತ್ತಾ ಸಮಯ ನೂಕುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸಿಲುಕಿರುವವರಿಗೆ ಸ್ಥಳೀಯ ಅಧಿಕಾರಿಯೊಬ್ಬರು ಸಹಾಯದ ಮುಂದಾಳತ್ವ ವಹಿಸಿದ್ದಾರೆ. ಆದರೆ ಇಲ್ಲಿ ಹಲವು ಕಥೆಗಳಿವೆ.

ಮಹಾರಾಷ್ಟ್ರದ ಕಾರ್ಮಿಕ ರಘು ಉತ್ತಮ್‌ ಶಿಂಧೆ (25) ನಾಲ್ಕು ಮಕ್ಕಳು ಸೇರಿದಂತೆ ಅವರ ಕುಟುಂಬದ 10 ಸದಸ್ಯರೊಂದಿಗೆ ಬಿಹಾರ ರಾಜ್ಯದಲ್ಲಿ ಕೇಬಲ್‌ ಹಾಕಲು ಗ್ರಾಹಕರ ಮನೆಗಳಿಗೆ ತೆರಳುತ್ತಿದ್ದರು. ಅವರ ರೈಲು ಮಧ್ಯರಾತ್ರಿಯಲ್ಲಿ ವಾರಣಾಸಿಯ ಹೊರಗಿನ ನಿಲ್ದಾಣದಲ್ಲಿ ನಿಂತು, ಎಲ್ಲರಿಗೂ ಇಳಿಯುವಂತೆ ಆದೇಶಿಸಲಾಯಿತು. ನಗರದ ರೈಲು ನಿಲ್ದಾಣವನ್ನು ತಲುಪಲು ಶಿಂಧೆ ಮತ್ತು ಅವರ ಕುಟುಂಬ ನಾಲ್ಕು ಗಂಟೆಗಳ ಕಾಲ ನಡೆದು ಮತ್ತೂಂದು ರೈಲು ಹಿಡಿಯುವ ಆಶಯದೊಂದಿಗೆ ಇದ್ದರು.
ಸರಕಾರಿ ವಕೀಲ ನರೇಂದ್ರ ಸಿಂಗ್‌ ಕೆಲಸದ ಪ್ರವಾಸದಿಂದ ಹಿಂದಿರುಗುವಾಗ ವಾರಣಾಸಿಯಲ್ಲಿ ಒಂದು ದಿನ ಸ್ಥಳ ವೀಕ್ಷಣೆಗೆಂದು ನಿಂತರು.

ಪ್ರತಿದಿನ ಬೆಳಗ್ಗೆ, ರೈಲ್ವೆ ಸಿಬಂದಿಯೊಬ್ಬರು ಸಿಕ್ಕಿಬಿದ್ದ ಪ್ರಯಾಣಿಕರಿಗಾಗಿ ಯೋಗ ಅಧಿವೇಶನ ನಡೆಸುತ್ತಾರೆ. ಪ್ರಯಾಣಿಕರು ಯೋಗ, ಅನಂತರ ಬೇಯಿಸಿದ ತರಕಾರಿಗಳು ಮತ್ತು ಕರಿದ ಬ್ರೆಡ್‌ನ‌ ಸರಳ ಉಪಹಾರ, ಸಂಜೆ ಊಟ ಮುಗಿಸುತ್ತಾರೆ. ಲೋಹದ ಬೆಂಚುಗಳ ಮೇಲೆ ಅಥವಾ ನೆಲದ ಮೇಲೆ ತೆಳುವಾದ ರಗ್ಗುಗಳನ್ನು ಹಾಸಿಕೊಂಡು ಮಲಗುತ್ತಾರೆ. ಪ್ರತಿಯೊಬ್ಬರೂ ಸರಿ ಸುಮಾರು ಒಂದೇ ಸಮಯಕ್ಕೆ ಮಲಗುತ್ತಾರೆ, ಏಳೂವುದು ಸಹ. ಸಣ್ಣ ಶಬ್ದಗಳೂ ಪ್ರತಿಧ್ವನಿಸುವ ಗುಹೆಯಲ್ಲಿ ಮೌನವಾಗಿರಲು ಪ್ರಯತ್ನಿಸುತ್ತವೆ.

ಇದು ಒಂದು ರೈಲು ನಿಲ್ದಾಣಗಳ ಕಥೆಯಲ್ಲ; ಹಲವು ಊರುಗಳ ಕಥೆ. ಬಹುತೇಕ ನಗರಗಳಲ್ಲಿ ಇಂಥದ್ದೇ ಕಥೆಗಿಳಿವೆ. ಇನ್ನೇನು ಹೊರಟು ಬಿಡಬೇಕು ಎಂದುಕೊಂಡವರೆಲ್ಲಾ ಈಗ ಸುಮ್ಮನೆ ಕುಳಿತಿದ್ದಾರೆ. ಏನೂ ಮಾಡುವಂತಿಲ್ಲ; ಅಸಹಾಯಕತೆಯನ್ನೇ ಹೊದ್ದುಕೊಂಡು ಮಲಗಬೇಕು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.