Varanga: ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನ
Team Udayavani, Jan 22, 2024, 11:23 PM IST
ಅಜೆಕಾರು: ವರಂಗ ವ್ಯವಸಾಯಿಕ ಸೇವಾ ಸಂಘದಲ್ಲಿ ಜ. 21ರ ರಾತ್ರಿ ಕಳವಿಗೆ ಯತ್ನ ನಡೆದಿದೆ. ಸಂಘದ ಸಿಬಂದಿ ಜ. 22ರ ಬೆಳಗ್ಗೆ ಕರ್ತವ್ಯಕ್ಕೆ ಬಂದ ಸಂದರ್ಭ ಮುಖ್ಯ ದ್ವಾರದ ಬೀಗ ಮುರಿದಿರುವುದು ಕಂಡು ಬಂದಿದ್ದು ತತ್‌ಕ್ಷಣ ಹೆಬ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ ವೇಳೆ ನುಗ್ಗಿದ್ದ ಕಳ್ಳರು ಬಾಗಿಲಿನ ಬೀಗ, ಸೇಫ್ ಲಾಕರ್‌ನ ಹೊರ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ ಲಾಕರ್ ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣ ಮಾಡಿರುವುದರಿಂದ ಕಳ್ಳರ ಯತ್ನ ವಿಫಲವಾಗಿದೆ. ಸಂಘದ ಸಿಸಿ ಕೆಮರಾದ ಪರಿಕರಗಳನ್ನು ಕಳ್ಳತನ ಮಾಡಿರುವ ಕಳ್ಳರು ಸುಳಿವು ಸಿಗದಂತೆ ಮಾಡಿದ್ದು, ಪೊಲಿಸರು ತನಿಖೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.