ಬದಲಾವಣೆ ಪರ್ವ- ನಾಳೆಯಿಂದ ಗೃಹಜ್ಯೋತಿ ಉಚಿತ ಬಿಲ್‌ ಜಾರಿ, ಹಾಲು ತುಟ್ಟಿ

- ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ 3.41 ಲಕ್ಷ ಕೋ.ರೂ. ಬಜೆಟ್‌ ಜಾರಿ

Team Udayavani, Jul 31, 2023, 7:45 AM IST

price hike

ಬೆಂಗಳೂರು: ಗೃಹ ಜ್ಯೋತಿ ಉಚಿತ ಬಿಲ್‌ ಜಾರಿ, ಪ್ರತೀ ಲೀಟರ್‌ ಹಾಲಿಗೆ 3 ರೂ. ಹೆಚ್ಚಳ, ಹೋಟೆಲ್‌ಗಳಲ್ಲಿ ಕಾಫಿ, ಚಹಾ ದರದಲ್ಲೂ ಹೆಚ್ಚಳ ಸಾಧ್ಯತೆ…

ಆಗಸ್ಟ್‌ 1ರಿಂದ ರಾಜ್ಯದ ಜನತೆಯ ಮೇಲೆ ಉಂಟಾಗಲಿರುವ ಪರಿಣಾಮಗಳಿವು. ಪ್ರಸಕ್ತ ಆರ್ಥಿಕ ಸಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ ಮಂಗಳವಾರದಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದ್ದು, ಕೆಲವು ಪರಿಷ್ಕೃತ ದರಗಳೂ ಜಾರಿಗೆ ಬರಲಿವೆ.

2023-24ನೇ ಸಾಲಿಗೆ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು 3.09 ಲಕ್ಷ ಕೋಟಿ ರೂ.ಗಳ ಬಜೆಟ್‌ ಮಂಡಿಸಿ, ಚುನಾವಣೆ ಹಿನ್ನೆಲೆಯಲ್ಲಿ ಎ. 1ರಿಂದ ಜು. 31ರ ವರೆಗಿನ ಖರ್ಚು-ವೆಚ್ಚಗಳಿಗಾಗಿ 1.07 ಲಕ್ಷ ಕೋಟಿ ರೂ.ಗಳಿಗೆ ಲೇಖಾನುದಾನ ಪಡೆದುಕೊಂಡಿದ್ದರು. ಈ ಅವಧಿಯು ಸೋಮವಾರಕ್ಕೆ ಅಂತ್ಯಗೊಳ್ಳಲಿದ್ದು, ಆ. 1ರಿಂದ 2024ರ ಮಾ. 31ರ ವರೆಗೆ ಸಿಎಂ ಸಿದ್ದರಾಮಯ್ಯ ಬಜೆಟ್‌ಗೆ ಲೇಖಾನುದಾನ ದೊರೆತಿದೆ. ಆರಂಭದಲ್ಲಿ 3.27 ಲಕ್ಷ ಕೋಟಿ ರೂ.ಗಳ ಬಜೆಟ್‌ ಮಂಡಿಸಿದ್ದ ಸಿಎಂ, ಬಳಿಕ ಅದನ್ನು 13,573 ಕೋಟಿ ರೂ. ಏರಿಸುವ ಮೂಲಕ ಬಜೆಟ್‌ ಗಾತ್ರವನ್ನು 3.41 ಲಕ್ಷ ಕೋಟಿ ರೂ.ಗಳಿಗೆ ಹಿಗ್ಗಿಸಿಕೊಂಡಿದ್ದಾರೆ. ಆಯವ್ಯಯ ಸರಿದೂಗಿಸುವ ನಿಟ್ಟಿನಲ್ಲಿ ಸರಕಾರದ ಕೆಲವು ಸಂಸ್ಥೆಗಳು ತಮ್ಮ ಉತ್ಪನ್ನಗಳ ದರಗಳನ್ನು ಪರಿಷ್ಕರಣೆ ಮಾಡಿದ್ದು, ಅವೆಲ್ಲವೂ ಆ. 1ರಿಂದ ಜಾರಿಗೆ ಬರಲಿವೆ.

ಐದರಲ್ಲಿ 3 ಗ್ಯಾರಂಟಿ ಜಾರಿ

ಐದು ಗ್ಯಾರಂಟಿಗಳ ಪೈಕಿ ಶಕ್ತಿ, ಅನ್ನಭಾಗ್ಯ ಗೃಹಜ್ಯೋತಿ ಕಾರ್ಯಕ್ರಮಗಳು ಜಾರಿಗೆ ಬಂದಿದ್ದು, ಶಕ್ತಿ ಯೋಜನೆಯಿಂದ ಈವರೆಗೆ 28.87 ಕೋಟಿ ಮಹಿಳೆಯರು 674 ಕೋಟಿ ರೂ. ಮೌಲ್ಯದ ಪ್ರಯೋಜನ ಪಡೆದಿದ್ದಾರೆ. ಇನ್ನು ಅನ್ನಭಾಗ್ಯ ಯೋಜನೆಯಡಿ 97.27 ಲಕ್ಷ ಪಡಿತರ ಚೀಟಿಗಳ 3.45 ಕೋಟಿ ಫ‌ಲಾನುಭವಿಗಳ ಖಾತೆಗೆ 566 ಕೋಟಿ ರೂ. ಜಮೆ ಆಗಿದೆ.

ಶೂನ್ಯದರದ ಗೃಹಜ್ಯೋತಿ ಬಿಲ್‌

ಜುಲೈ ತಿಂಗಳಿನಲ್ಲಿ ಬಳಕೆ ಮಾಡಿರುವ ವಿದ್ಯುತ್‌ ಬಿಲ್‌ ಆಗಸ್ಟ್‌ನಲ್ಲಿ ಬರಲಿದ್ದು, ಕಳೆದ ವರ್ಷ ಬಳಕೆ ಮಾಡಿದ್ದ ಸರಾಸರಿ ವಿದ್ಯುತ್‌ಗಿಂತ ಶೇ. 10ರ ವರೆಗೆ ಹಾಗೂ 200 ಯುನಿಟ್‌ ಒಳಗೆ ವಿದ್ಯುತ್‌ ಬಳಸಿದ್ದವರಿಗೆ ಶೂನ್ಯ ದರದ ಬಿಲ್‌ ಸಿಗಲಿದೆ. ಇದಕ್ಕಾಗಿ ಬೆಸ್ಕಾಂ ಸಹಿತ ರಾಜ್ಯದ ಆರು ಎಸ್ಕಾಂಗಳಿಂದ 1.16 ಕೋಟಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

ಗೃಹಲಕ್ಷ್ಮೀ, ಯುವನಿಧಿಗೆ ನೋಂದಣಿ

ಮನೆಯೊಡತಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಇದುವರೆಗೆ 80.90 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಆಗಸ್ಟ್‌ ತಿಂಗಳಿಂದಲೇ ನೋಂದಾಯಿತ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಲಿದೆ. ಸುಮಾರು 1.28 ಕೋಟಿ ಮಹಿಳೆಯರಿಗೆ ಇದರಿಂದ ಪ್ರಯೋಜನ ಸಿಗುವ ಅಂದಾಜಿದೆ. ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಮತ್ತು ಡಿಪ್ಲೊಮಾ ಪಡೆದು ನಿರುದ್ಯೋಗಿಗಳಾಗಿರುವವರಿಗೆ ತಿಂಗಳಿಗೆ 1,500 ರೂ. ನೀಡುವ ಯುವನಿಧಿ ಯೋಜನೆಯು ವರ್ಷಾಂತ್ಯದೊಳಗೆ ಅನುಷ್ಠಾನಕ್ಕೆ ಬರಲಿದೆ.

ಹಾಲಿನ ದರದಲ್ಲಿ ಏರಿಕೆ

ಚುನಾವಣೆ ಹಿನ್ನೆಲೆಯಲ್ಲಿ ತಡೆ ಹಿಡಿದಿದ್ದ ಪರಿಷ್ಕೃತ ವಿದ್ಯುತ್‌ ದರವು ಈಗಾಗಲೇ ಜಾರಿಗೊಂಡಿದ್ದು, ಕೆಇಆರ್‌ಸಿ ಆದೇಶದಿಂದಾಗಿ ವಿದ್ಯುತ್‌ ದರ ಹೆಚ್ಚಳವಾಗಿದೆ. ಈಗ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಕೆಎಂಎಫ್ ಹಾಲಿನ ದರ ಹೆಚ್ಚಿಸಲು ನಿರ್ಧರಿಸಿದ್ದು, ಆ. 1ರಿಂದ ಪ್ರತೀ ಲೀಟರ್‌ ಹಾಲಿನ ದರವು 3 ರೂ. ಏರಿಕೆ ಆಗಲಿದೆ. ಕೆಎಂಎಫ್ನ ಇತರ ಯಾವುದೇ ಉತ್ಪನ್ನಗಳ ಮೇಲಿನ ದರವನ್ನು ಹೆಚ್ಚಳ ಮಾಡಿಲ್ಲ. ಆದರೆ ಹಾಲಿನ ದರ ಹೆಚ್ಚಳ ಆಗಿರುವುದರಿಂದ ಕಾಫಿ, ಚಹಾದಂತಹ ಹಾಲು ಅವಲಂಬಿತ ಪೇಯಗಳ ದರ ಹೆಚ್ಚಳ ಆಗುವ ಸಾಧ್ಯತೆಗಳಿವೆ.

 “ಒಪ್ಪಂದದ ಮೇರೆಗೆ” ಬಸ್‌ ದರ ಪರಿಷ್ಕರಣೆ

ಶಕ್ತಿ ಯೋಜನೆಯಿಂದಾಗಿ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆ ವಾಹನಗಳ ಬೇಡಿಕೆ ಹೆಚ್ಚಾಗಿದ್ದು, ನಿಗಮದ ವಾಹನಗಳ ಕಾರ್ಯಾಚರಣ ವೆಚ್ಚವೂ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯುಟಿವ್‌, ರಾಜಹಂಸ, ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್‌, ಮಿಡಿ ಬಸ್‌, ನಾನ್‌-ಎಸಿ ಸ್ಲಿàಪರ್‌ ಬಸ್‌ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಪಡೆಯಬೇಕಿದ್ದರೆ ಹಿಂದಿಗಿಂತ ಸರಾಸರಿ 3 ರೂ.ಗಳರೆಗೆ ಹೆಚ್ಚುವರಿ ಹಣ ಪಾವತಿಸಬೇಕು.

ಫೈಲಿಂಗ್‌ ಗಡುವು ಅಂತ್ಯ

ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಲು ಇದ್ದ ಜು. 31ರ ಗಡುವು ಸೋಮವಾರ ಅಂತ್ಯವಾಗಲಿದೆ. ಹೀಗಾಗಿ ಆ. 1ರ ಅನಂತರ ರಿಟರ್ನ್Õ ಫೈಲ್‌ ಮಾಡುವುದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ವರ್ಷಕ್ಕೆ 5 ಲಕ್ಷರೂ.ಗಿಂತ ಹೆಚ್ಚು ಆದಾಯ ಇರುವವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ದೇಶಾದ್ಯಂತ ಆ. 30ರ ವರೆಗಿನ ಅವಧಿಯಲ್ಲಿ 6 ಕೋಟಿಗೂ ಅಧಿಕ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಿದ್ದಾರೆ.

ಜಿಎಸ್‌ಟಿ

5 ಕೋಟಿ ರೂ. ಗಳಿಗಿಂತ ಹೆಚ್ಚಿನ ವಹಿವಾಟು ಇರುವ ಉದ್ದಿಮೆ ಸಂಸ್ಥೆಗಳು ಆ. 1ರಿಂದ ಎಲೆಕ್ಟ್ರಾನಿಕ್‌ ಇನ್‌ವಾಯ್ಸ ಸಲ್ಲಿಸುವುದು ಕಡ್ಡಾಯವಾಗಲಿದೆ.

ಎಲ್‌ಪಿಜಿ ದರ ಪರಿಷ್ಕರಣೆ

ಪ್ರತೀ ತಿಂಗಳ ಮೊದಲ ದಿನದಂದು ಅಡುಗೆ ಅನಿಲ ಸಿಲಿಂಡರ್‌ ದರ ಪರಿಷ್ಕರಣೆಯಾಗುತ್ತದೆ. ಮಂಗಳವಾರ ಎಲ್‌ಪಿಜಿ ದರ ಏರಿಕೆಯಾಗಲೂಬಹುದು, ಇಳಿಕೆಯಾಗಲೂಬಹುದು. ಪಿಎನ್‌ಸಿ, ಸಿಎನ್‌ಜಿ ದರದಲ್ಲೂ ಪರಿಷ್ಕರಣೆಯಾಗಲಿದೆ.

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.