Udupi: ನ.1ರಂದು ಅದಿತಿ ಗ್ಯಾಲರಿಯಲ್ಲಿ ವಸಂತಲಕ್ಷ್ಮೀ ಸಂಸ್ಮರಣ ಕಾರ್ಯಕ್ರಮ
Team Udayavani, Nov 1, 2023, 10:08 AM IST
ಉಡುಪಿ: ರಂಜನಿ ಮೆಮೋರಿಯಲ್ ಟ್ರಸ್ಟ್‌ನ ಆಶ್ರಯದಲ್ಲಿ ವಸಂತಲಕ್ಷ್ಮೀ ಸಂಸ್ಮರಣ ಚಿತ್ರಕಲೆ, ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನ. 1ರಿಂದ 5ರ ವರೆಗೆ ನಡೆಯಲಿದೆ.
ನ. 1ರಂದು ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ಬೆಳಗ್ಗೆ 11ರಿಂದ ದಿ| ವಸಂತಲಕ್ಷ್ಮೀ ಹೆಬ್ಟಾರ್ ಚಿತ್ರಿಸಿದ ಕಲಾ ಕೃತಿಗಳ ವಸಂತ ಕಲಾ ಪ್ರದರ್ಶನ ನಡೆಯಲಿದೆ. ನ. 2ರಂದು ಇಂದ್ರಾಳಿಯ ಲತಾಂಗಿಯಲ್ಲಿ ಸಂಜೆ 5.30ರಿಂದ ಚೆನ್ನೈಯ ಚಾರುಲತಾ ಚಂದ್ರಶೇಖರ್ ಅವರ ವೀಣಾ ವಾದನ ನಡೆಯಲಿದೆ.
ಇದನ್ನೂ ಓದಿ:Kannada Rajyotsava: ಕನ್ನಡ ನಮ್ಮೊಳಗೆ ಅಂತರ್ಗತವಾದಾಗಲೇ ನಿಜವಾದ ರಾಜ್ಯೋತ್ಸವ
ನ. 3ರಿಂದ 5ರ ವರೆಗೆ ಎಂಜಿಎಂನ ನೂತನ ರವೀಂದ್ರ ಮಂಟಪದಲ್ಲಿ ಸಂಜೆ 5.30ರಿಂದ ಸಂಗೀತ, ನೃತ್ಯ ಕಾರ್ಯಕ್ರಮ
ನಡೆಯಲಿದೆ. ನ. 3ರಂದು ಪ್ರಾರ್ಥನಾ ಅವರ ಸಂಗೀತ, ಆ ಬಳಿಕ ರಶ್ಮಿ ಉಡುಪ ಅವರಿಂದ ನೃತ್ಯ, ನ. 4ರಂದು ಸಿದ್ದಾರ್ಥ ಬೆಳ್ಮಣ್ ಅವರಿಂದ ಹಿಂದೂಸ್ಥಾನಿ ಗಾಯನ ಮತ್ತು ನ. 5ರಂದು ಚೆನ್ನೈಯ ರಾಮಕೃಷ್ಣನ್ ಮೂರ್ತಿ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಜರಗಲಿದೆ.
ವಸಂತಲಕ್ಷ್ಮೀ ಹೆಬ್ಬಾರ್:
ಬದುಕೆಂಬುದನ್ನು ಕಲೆಯಾಗಿ ತಿಳಿದು, ಕಲೆಯ ಬದುಕನ್ನೇ ಬಾಳಿದವರು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ (1960-2022) . ಕಾಲೇಜು ದಿನಗಳಿಂದಲೇ ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿ ಪರಿಣತಿ ಸಾಧಿಸಿ,ಯಾವ ಗುರುವಿನ ಆಶ್ರಯವಿಲ್ಲದೇ ಚಿತ್ರ ಕಲೆಗೂ ಕೈಯ್ಯಾಡಿಸಿದರು. ಖ್ಯಾತ ಸಂಗೀತ ಕಲಾವಿದೆ ಪುತ್ರಿ ರಂಜನಿಯ ಅಕಾಲ ಮೃತ್ಯುವಿನ ಬಳಿಕ (2013) ವಸಂತಲಕ್ಷ್ಮೀ ದುಃಖದ ಮಡುವಿನಿಂದ ಹೊರಬರಲು ಸಾಧನವಾಗಿ ಆಯ್ದುಕೊಂಡದ್ದು ಚಿತ್ರಕಲೆ.
ಆಯಿಲ್, ಅಕ್ರಿಲಿಕ್, ಪೆನ್ಸಿಲ್ ಡ್ರಾಯಿಂಗ್ ಮಾಧ್ಯಮಗಳನ್ನು ಬ್ರಷ್- ನೈಫ್ – ಸ್ಕ್ಯಾಲ್ಪೆಲ್ ಸಾಧನಗಳನ್ನು ಬಳಸಿ ಪೋರ್ಟ್ರೇಟ್, ಲ್ಯಾಂಡ್ ಸ್ಕೇಪ್, ಸ್ಥಿರ ಚಿತ್ರ, ಅಮೂರ್ತ ಶೈಲಿಯ ಹಲವಾರು ಕೃತಿಗಳನ್ನು ತನ್ನಷ್ಟಕ್ಕೆ ತಾನೇ ಹೆಣೆಯುತ್ತಾ ಬಂದರು. ಉಡುಪಿಯ ದೃಶ್ಯ ಕಲಾ ಶಾಲೆಯ ಹಿರಿಯ ಶಿಕ್ಷಕ ಶ್ರೀ ರಮೇಶ ರಾಯರಲ್ಲಿ ಮಾರ್ಗದರ್ಶನ ಪಡೆದು, ಮುಂದೆ ಮುಂಬೈ ಯ ಶ್ರೀಮತಿ ಶರ್ಮಿಳಾ ಗುಪ್ತೆ ಯವರಲ್ಲಿ ವಿದ್ಯುಕ್ತ ಕಲಾ ತರಬೇತಿಯನ್ನು ತನ್ನ 57 ರ ವಯಸ್ಸಿನಲ್ಲಿ ಪಡೆದ ಸಾಧನೆ ಇವರದು.
ವಸಂತಲಕ್ಷ್ಮೀ ಯವರು ಅಕಾಲಿಕವಾಗಿ ನಿಧನರಾದ ಒಂದು ವರ್ಷದಲ್ಲೇ ಅವರ ಚಿತ್ರ ಕಲಾ ನೈಪುಣ್ಯವನ್ನು ಸಾರುವ “ವಸಂತ ಕಲಾ” ಎಂಬ ಈ ಚಿತ್ರಕಲಾ ಪ್ರದರ್ಶನವು ಅವರಿಗೆ ಸಲ್ಲಿಸುವ ವಿನಯ ಪೂರ್ವಕ ಶ್ರದ್ಧಾಂಜಲಿಯೇ ಆಗಿದೆ. ಸುಮಾರು ಎಪ್ಪತ್ತು ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.