ರೈಲ್ವೆ ವಸ್ತು ಸಂಗ್ರಹಾಲಯ ವರ್ಚುವಲ್ ಟೂರ್‌ಗೆ ಚಾಲನೆ
Team Udayavani, Sep 3, 2020, 12:03 PM IST
ಮೈಸೂರು: ಕುಳಿತಲ್ಲೇ ಮೈಸೂರಿನ ರೈಲ್ವೆ ವಸ್ತು ಸಂಗ್ರಹಾಲಯ ವೀಕ್ಷಿಸಬಹುದಾದ ವರ್ಚುವಲ್ ಟೂರ್‌ಗೆ ಚಾಲನೆ ದೊರೆಯಿತು. ಮೈಸೂರು ರೈಲು ವಸ್ತು ಸಂಗ್ರಹಾಲಯ ವೀಕ್ಷಣೆಗೆ ಹೈಟೆಕ್ ಸ್ಪರ್ಷ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ವರ್ಚುವಲ್ ಟೂರ್ ವ್ಯವಸ್ಥೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ ಬುಧವಾರ ನೀಡಿದರು.
ಬಳಿಕ ಮಾತನಾಡಿದ ಅವರು, ಮೈಸೂರು ರೈಲ್ವೇ ಮ್ಯೂಸಿಯಂ ಬಹಳ ಪ್ರಖ್ಯಾತಿ ಪಡೆದಿತ್ತು. ಆದರೆ, ಇತ್ತೀಚೆಗೆ ಹಲವು ಕಾರಣಗಳಿಂದ ಹದಗೆಟ್ಟಿತ್ತು. ಅಪರ್ಣ ಗರ್ಗ್ ಅವರು ಡಿಆರ್ ಎಂ ಆದ ಬಳಿಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ನೋಡುವುದಕ್ಕೆ ಎಷ್ಟು ಜನರು ಬರುತ್ತಾರೋ ಅಷ್ಟೂ ಜನ ಇಲ್ಲಿಗೂ ಬರುತ್ತಾರೆ.
ಭಾರತೀಯ ರೈಲು ಬೆಳೆದುಬಂದ ರೀತಿಯನ್ನು ನೋಡುವ ಅವಕಾಶ ಇಲ್ಲಿದೆ ಎಂದು ಬಣ್ಣಿಸಿದರು.
ಉದ್ಘಾಟನೆಗಾಗಿ ಸಚಿವರಿಗೆ ಆಹ್ವಾನ:
ಸಚಿವರಾದ ಸುರೇಶ್ ಅಂಗಡಿ ಹಾಗೂ ಸಿ.ಟಿ.ರವಿ ಅವರೊಂದಿಗೆ ಮಾತನಾಡಿದ್ದೇನೆ. ಅಧಿಕೃತ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದೇನೆ. ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂದಾಗ
ಅವರನ್ನೂ ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಇಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡಿರುವುದಕ್ಕೆ ನಾನು ಡಿಆರ್‌ಎಂ ಅಪರ್ಣ ಗರ್ಗ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕೋವಿಡ್-19 ಕಾರಣದಿಂದಾಗಿ ಎಷ್ಟೋ ಜನರಿಗೆ ಹೊರಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗಷ್ಟೇ ಆರಂಭವಾಗಿರುವ ರೈಲ್ವೇ ವಸ್ತು ಸಂಗ್ರಹಾಲಯವನ್ನು ನೋಡಲು ಕೆಲವರು
ಉತ್ಸುಕರಾಗಿದ್ದಾರೆ. ಇಂತಹವರಿಗಾಗಿ ವಚ್ಯುìಯಲ್ ಟೂರ್ ವ್ಯವಸ್ಥೆ ಮಾಡಲಾಗಿದೆ.
ಇದರ ಮೂಲಕ ಆಸಕ್ತರು ತಮ್ಮ ಮೊಬೈಲ್/ ಕಂಪ್ಯೂಟರ್‌ನಲ್ಲಿ ರೈಲ್ವೇ ಮ್ಯೂಸಿಯಂನ ವೆಬ್ ಸೈಟ್‌ಗೆ ಭೇಟಿ ನೀಡಿ ಅಲ್ಲಿನ ವಿಶೇಷತೆಗಳನ್ನೆಲ್ಲಾ ಆಸ್ವಾದಿಸಿ ಅಲ್ಲಿಗೇ ಭೇಟಿ ನೀಡಿ ಬಂದ ಅನುಭವ ಪಡೆಯಬಹುದು.
ವಸ್ತುಸಂಗ್ರಹಾಲಯದ ವಿಶೇಷತೆಗಳು: ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ರೈಲು ಚಾಲನೆಯ ವಿವಿಧ ನಮೂನೆಯ ತಂತ್ರಜ್ಞಾನಗಳು, ಪುರಾತನ ರೈಲು ಎಂಜಿನ್‌ಗಳು, ಜೊತೆಗೆ ಅಂದಿನ ಮಹಾರಾಣಿಯರು ಓಡಾಡಲು ಬಳಸುತ್ತಿದ್ದ ಬೋಗಿ, ಅದರೊಳಗಿದ್ದ ಬಾಯ್ಲರ್, ಕೋಣೆಗಳು, ಅಡುಗೆ ಮನೆ, ವಿಶ್ರಾಂತಿ ಗೃಹ, ಮಲಗುವ ಕೋಣೆ ಎಲ್ಲವನ್ನೂ ಪ್ರದರ್ಶನಕ್ಕೆ ಇಡಲಾಗಿದೆ. ಪ್ರವಾಸಿಗರಿಗಾಗಿ ಟಾಯ್ ಟ್ರೈನ್, ಆರ್ಟ್ ಗ್ಯಾಲರಿ, ವಾಚ್ ಟವರ್, ರೈಲು ಕೋಚ್ ಕೆಫೆ ರೈಲು ವಸ್ತು ಸಂಗ್ರಹಾಲಯದ ವಿಶೇಷತೆಯಾಗಿದೆ. ಮೈಸೂರು ವಿಭಾಗದ ಡಿಆರ್‌ಎಂ ಅಪರ್ಣ ಗರ್ಗ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.