Cheetah: ಪಶುವೈದ್ಯರಿಗೆ ಅನುಭವವೇ ಇಲ್ಲ- ಚೀತಾ ಸಾವಿನ ಬಗ್ಗೆ ಸುಪ್ರೀಂಗೆ ಪತ್ರ
- ಕುನೋ ಆಡಳಿತದ ಬಗ್ಗೆ ಆಫ್ರಿಕಾ ತಜ್ಞರ ಅಸಮಾಧಾನ
Team Udayavani, Aug 4, 2023, 7:35 AM IST
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಾವಿನ ಸರಣಿ ಮುಂದುವರಿದಿರುವ ಬಗ್ಗೆ ದಕ್ಷಿಣ ಆಫ್ರಿಕಾದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಭಯಾರಣ್ಯದಲ್ಲಿ ಚೀತಾಗಳ ನಿರ್ವಹಣೆಯಲ್ಲಾಗುತ್ತಿರುವ ಲೋಪಗಳ ಬಗ್ಗೆ ಸುಪ್ರೀಂಕೋರ್ಟ್‌ಗೆ 2 ಪತ್ರಗಳನ್ನು ಬರೆದಿದ್ದು, ಅದರಲ್ಲಿ ಅರಣ್ಯದ ಪಶು ವೈದ್ಯಾಧಿಕಾರಿಗಳಿಗೆ ಸೂಕ್ತ ಅನುಭವವೇ ಇಲ್ಲವೆಂಬುದನ್ನೂ ಉಲ್ಲೇಖೀಸಿದ್ದಾರೆ.
ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞರಾದ ಪ್ರೊಫೆಸರ್ ಆರ್ಡಿಯನ್ ಟ್ರೋಡಿಫ್, ನಮೀಬಿಯಾ ಚೀತಾ ಸಂರಕ್ಷಣಾ ನಿಧಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಲಾರಿ ಮಾರ್ಕ್ ಸೇರಿ ನಾಲ್ವರ ಸಹಿ ಇರುವ ಪತ್ರದಲ್ಲಿ ಕುನೋದಲ್ಲಿರುವ ಚೀತಾ ಯೋಜನೆಯ ನಿರ್ವಹಣಾ ತಂಡಕ್ಕೆ ವೈಜ್ಞಾನಿಕ ತರಬೇತಿ ಹಾಗೂ ಅನುಭವಗಳೇ ಇಲ್ಲ. ತಜ್ಞರು ಹೇಳಿದರೂ ತಂಡ ಅವುಗಳನ್ನು ನಿರ್ಲಕ್ಷಿಸುತ್ತಿದೆ. ಚೀತಾಗಳಿಗೆ ಏನೇ ಆದರೂ ಅದನ್ನು ತಜ್ಞರ ಗಮನಕ್ಕೆ ಸಿಬ್ಬಂದಿ ತರುವುದೇ ಇಲ್ಲ ಎಂದಿದೆ. ಇನ್ನು ಪತ್ರಕ್ಕೆ ಸಹಿ ಹಾಕಿರುವ ನಾಲ್ವರಲ್ಲಿ ಇಬ್ಬರು ತಜ್ಞರು ಇದಕ್ಕೆ ತಮ್ಮ ಸಹಮತವಿಲ್ಲವೆಂದು ಹೇಳಿದ್ದಾರೆ.
ಮರಿ ಚೀತಾಗಳನ್ನು ಸಾಕಿ:
ಇನ್ನು ಇತ್ತೀಚೆಗೆಷ್ಟೇ ಸರ್ಕಾರಕ್ಕೂ ತಜ್ಞರ ತಂಡ ವರದಿ ಸಲ್ಲಿಸಿದ್ದು, ದೊಡ್ಡ ಚೀತಾಗಳಿಗೆ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ ಸಾಧ್ಯ. ಈ ಹಿನ್ನೆಲೆ ಮರಿ ಚೀತಾಗಳನ್ನು ಹೊಂದುವ ಬಗ್ಗೆ ಸರ್ಕಾರ ಗಮನಹರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಬುಧವಾರವಷ್ಟೇ ಕುನೋದಲ್ಲಿ ನಮೀಬಿಯಾದಿಂದ ತಂದಿದ್ದ 9ನೇ ಚೀತಾ ಮೃತಪಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.