ವಿಜಯ್ ಹಜಾರೆ ಟ್ರೋಫಿ: ಪಡಿಕ್ಕಲ್ ಹ್ಯಾಟ್ರಿಕ್ ಶತಕ, ಸಮರ್ಥ್ 2ನೇ ಸೆಂಚುರಿ
Team Udayavani, Mar 1, 2021, 12:30 AM IST
ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಏಕದಿನ ಸರಣಿಯಲ್ಲಿ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ “ನಾನ್‌ಸ್ಟಾಪ್’ ಪಡಿಕ್ಕಲ್ ಮತ್ತು ನಾಯಕ ಆರ್. ಸಮರ್ಥ್ ಕರ್ನಾಟಕವನ್ನು ಕ್ವಾರ್ಟರ್ ಫೈನಲ್‌ಗೆ ಕೊಂಡೊಯ್ದಿದ್ದಾರೆ. ಇವ ರಿಬ್ಬರ ಸಾಹಸದಿಂದ ರೈಲ್ವೇಸ್ ನೀಡಿದ 285 ರನ್ ಗುರಿಯನ್ನು ಕರ್ನಾಟಕ ವಿಕೆಟ್ ನಷ್ಟವಿಲ್ಲದೆ ಸಾಧಿಸಿತು. ಕರ್ನಾಟಕ ಸತತ 4 ಜಯದೊಂದಿಗೆ “ಸಿ’ ವಿಭಾಗದ ಅಗ್ರಸ್ಥಾನದ ಗೌರವ ಸಂಪಾದಿಸಿತು.
ಈ ಆರಂಭಿಕದ್ವಯರ ಅಜೇಯ ಶತಕ ಕರ್ನಾಟಕ ಸರದಿಯ ಆಕ ರ್ಷಣೆಯಾಗಿತ್ತು. ಅಮೋಘ ಫಾರ್ಮ್ ನಲ್ಲಿರುವ ಎಡಗೈ ಬ್ಯಾಟ್ಸ್ ಮನ್ ಪಡಿಕ್ಕಲ್ ಅಜೇಯ 145 ರನ್ ಬಾರಿಸಿ ಹ್ಯಾಟ್ರಿಕ್ ಶತಕದ ದಾಖಲೆ ಬರೆದರು. ಸಮರ್ಥ್ ಅಜೇಯ 130 ರನ್ ಬಾರಿಸಿದರು.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸ ಲ್ಪಟ್ಟ ರೈಲ್ವೇಸ್ 9 ವಿಕೆಟಿಗೆ 284 ರನ್ ಗಳಿಸಿ ಸವಾಲೊಡ್ಡಿತ್ತು. ಆರಂಭಕಾರ ಪ್ರಥಮ್ ಸಿಂಗ್ 129 ರನ್ ಬಾರಿಸಿ ರಾಜ್ಯ ಬೌಲರ್‌ಗಳಿಗೆ ಸವಾಲಾದರು. ಕರ್ನಾಟಕ ಕೇವಲ 40.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 285 ರನ್ ಹೊಡೆದು ವಿಜಯೋತ್ಸವ ಆಚರಿಸಿತು.
ಪಡಿಕ್ಕಲ್ ಪರಾಕ್ರಮ
ಈ ಕೂಟದ ಆರಂಭದಿಂದಲೂ ಬ್ಯಾಟಿಂಗ್ ಅಬ್ಬರ ತೋರ್ಪಡಿಸುತ್ತ ಬಂದ ದೇವದತ್ತ ಪಡಿಕ್ಕಲ್ 5 ಪಂದ್ಯಗಳಿಂದ 190.66ರಷ್ಟು ಉತ್ಕೃಷ್ಟ ಸರಾಸರಿಯಲ್ಲಿ 572 ರನ್ ಪೇರಿಸಿ ದರು. ಒಡಿಶಾ ವಿರುದ್ಧ ಜೀವನಶ್ರೇಷ್ಠ 152 ರನ್ ಬಾರಿಸಿ ಶತಕದ ಅಭಿಯಾನ ಆರಂಭಿಸಿದ್ದ ಅವರು ಕೇರಳ ಎದುರು 126 ರನ್ ಹೊಡೆದು ಔಟಾಗದೆ ಉಳಿದಿದ್ದರು. ಈಗ ರೈಲ್ವೇಸ್ ವಿರುದ್ಧ ಮತ್ತೆ ಅಜೇಯ ಶತಕದಾಟ. ಬಿಹಾರ ವಿರುದ್ಧ ಪಡಿಕ್ಕಲ್ ಕೇವಲ 3 ರನ್ನಿನಿಂದ ಶತಕ ವಂಚಿತರಾಗಿದ್ದರು.
ಪಡಿಕ್ಕಲ್ ಅವರ 145 ರನ್ ಕೇವಲ 125 ಎಸೆತಗಳಿಂದ ಬಂತು. ಸಿಡಿಸಿದ್ದು 9 ಸಿಕ್ಸರ್ ಹಾಗೂ 9 ಬೌಂಡರಿ. ಈ ಸಾಧನೆಯಿಂದ ಪಡಿಕ್ಕಲ್‌ಗೆ ಟೀಮ್ ಇಂಡಿಯಾದ ಬಾಗಿಲು ತೆರೆದೀತೇ ಎಂಬುದೊಂದು ನಿರೀಕ್ಷೆ.
ನಾಯಕನಾದ ಬಳಿಕ ರನ್ ಪ್ರವಾಹವನ್ನೇ ಹರಿಸುತ್ತ ಬರುತ್ತಿರುವ ರವಿಕುಮಾರ್ ಸಮರ್ಥ್ 118 ಎಸೆತಗಳಿಂದ ಅಜೇಯ 130 ರನ್ ರಾಶಿ ಹಾಕಿದರು. ಇದರಲ್ಲಿ 17 ಬೌಂಡರಿ ಒಳಗೊಂಡಿತ್ತು. ಸಮರ್ಥ್ ಬಿಹಾರ ವಿರುದ್ಧ 158 ರನ್ ಕೊಡುಗೆ ಸಲ್ಲಿಸಿದ್ದರು.
ಸಂಕ್ಷಿಪ್ತ ಸ್ಕೋರ್: ರೈಲ್ವೇಸ್-9 ವಿಕೆಟಿಗೆ 284 (ಪ್ರಥಮ್ ಸಿಂಗ್ 129, ಘೋಷ್ 36, ಅಮಿತ್ ಮಿಶ್ರಾ ಔಟಾಗದೆ 25, ಗೋಪಾಲ್ 41ಕ್ಕೆ 3). ಕರ್ನಾಟಕ-40.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 285 (ಪಡಿಕ್ಕಲ್ ಔಟಾಗದೆ 145, ಆರ್. ಸಮರ್ಥ್ ಔಟಾಗದೆ 130).
3 ತಂಡಗಳಿಗೆ 16 ಅಂಕ
“ಸಿ’ ವಿಭಾಗದಲ್ಲಿ ಕರ್ನಾಟಕ, ಉತ್ತರಪ್ರದೇಶ ಮತ್ತು ಕೇರಳ ತಲಾ 4 ಜಯದೊಂದಿಗೆ 16 ಅಂಕ ಸಂಪಾದಿಸಿದವು. ಆದರೆ ರನ್‌ರೇಟ್‌ನಲ್ಲಿ ಮುಂದಿದ್ದ (+1.879) ಕರ್ನಾಟಕಕ್ಕೆ ಅಗ್ರಸ್ಥಾನ ಒಲಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.