ವಿಜಯ್ ಹಜಾರೆ ಟ್ರೋಫಿ-2021 : ಬರೋಡವನ್ನು ಬಗ್ಗುಬಡಿದ ಕರ್ನಾಟಕ
Team Udayavani, Dec 13, 2021, 5:30 AM IST
ತಿರುವನಂತಪುರ: ರವಿವಾರ ವಿಜಯ್ ಹಜಾರೆ ಟ್ರೋಫಿ-2021 : ಬರೋಡವನ್ನು ಬಗ್ಗುಬಡಿದ ಕರ್ನಾಟಕರದ ಮಳೆಪೀಡಿತ ಪಂದ್ಯದಲ್ಲಿ ಬರೋಡವನ್ನು ವಿಜೆಡಿ ನಿಯಮದಂತೆ 6 ವಿಕೆಟ್‌ಗಳಿಂದ ಬಗ್ಗುಬಡಿದ ಕರ್ನಾಟಕ, “ವಿಜಯ್ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ 3ನೇ ಗೆಲುವು ದಾಖಲಿಸಿದೆ.
ವಿ. ಕೌಶಿಕ್ ಮತ್ತು ಕೆ.ಸಿ. ಕಾರ್ಯಪ್ಪ ಬೌಲಿಂಗಿಗೆ ಉತ್ತರಿಸಲಾಗದೆ ಚಡಪಡಿಸಿದ ಬರೋಡ 48.3 ಓವರ್‌ಗಳಲ್ಲಿ 176 ರನ್ನಿಗೆ ಕುಸಿಯಿತು. ಜವಾಬು ನೀಡತೊಡಗಿದ ಕರ್ನಾಟಕ 37 ಓವರ್‌ಗಳಲ್ಲಿ 4ಕ್ಕೆ 134 ರನ್ ಗಳಿಸಿದ ವೇಳೆ ಮಳೆ ಸುರಿಯಿತು.
ಹೀಗಾಗಿ ಗುರಿಯನ್ನು ಮರು ನಿಗದಿಗೊಳಿಸಲಾಯಿತು. 42 ಓವರ್‌ಗಳಲ್ಲಿ 147 ರನ್ ತೆಗೆಯುವ ಟಾರ್ಗೆಟ್ ಲಭಿಸಿತು. 38.4 ಓವರ್‌ಗಳಲ್ಲಿ 4ಕ್ಕೆ 150 ರನ್ ಬಾರಿಸುವ ಮೂಲಕ ಕರ್ನಾಟಕ ಗೆದ್ದು ಬಂದಿತು.
ಇದು “ಬಿ’ ವಿಭಾಗದ 4 ಪಂದ್ಯಗಳಲ್ಲಿ ಕರ್ನಾಟಕಕ್ಕೆ ಒಲಿದ 3ನೇ ಗೆಲುವು. ತಮಿಳುನಾಡು ಕೂಡ ಇಷ್ಟೇ ಪಂದ್ಯ ಗಳನ್ನಾಡಿ 12 ಅಂಕ ಹೊಂದಿದೆ. ರನ್‌ರೇಟ್‌ನಲ್ಲಿ ಮುಂದಿ ರುವ ಕಾರಣ “ಬಿ’ ವಿಭಾಗದ ಅಗ್ರಸ್ಥಾನಿಯಾಗಿದೆ. ತಮಿಳುನಾಡು +1.634, ಕರ್ನಾಟಕ +1.046 ರನ್‌ರೇಟ್ ಹೊಂದಿದೆ. ಮಂಗಳವಾರದ ಅಂತಿಮ ಗ್ರೂಪ್ ಪಂದ್ಯದಲ್ಲಿ ಕರ್ನಾಟಕ-ಬಂಗಾಲ ಮುಖಾಮುಖೀ ಆಗಲಿವೆ. ಅಂದೇ ತಮಿಳುನಾಡು ಬರೋಡವನ್ನು ಎದುರಿಸಲಿದೆ.
ಬರೋಡ ಬ್ಯಾಟಿಂಗ್ ಕುಸಿತ
ಬರೋಡದ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಕೇದಾರ್ ದೇವಧರ್ (31)-ಆದಿತ್ಯ ವಾಗೊ¾àಡೆ (27) ಮೊದಲ ವಿಕೆಟಿಗೆ 12 ಓವರ್‌ಗಳಿಂದ 59 ರನ್ ಒಟ್ಟುಗೂಡಿಸಿದರು. ವಿ. ಕೌಶಿಕ್ ಆರಂಭಿಕರಿಬ್ಬರನ್ನೂ ಔಟ್ ಮಾಡುವ ಮೂಲಕ ಬರೋಡ ಕುಸಿತವನ್ನು ತೀವ್ರಗೊಳಿಸಿದರು. 117 ರನ್ ಅಂತರದಲ್ಲಿ ಬರೋಡದ ಎಲ್ಲ ವಿಕೆಟ್ ಉದುರಿ ಹೋಯಿತು. ಕೌಶಿಕ್ 38ಕ್ಕೆ 3, ಕೆ.ಸಿ. ಕಾರ್ಯಪ್ಪ 28ಕ್ಕೆ 3, ಪ್ರವೀಣ್ ದುಬೆ 31ಕ್ಕೆ 2 ವಿಕೆಟ್ ಉರುಳಿಸಿದರು. 40 ರನ್ ಮಾಡಿದ ಭಾನು ಪನಿಯ ಬರೋಡ ತಂಡದ ಟಾಪ್ ಸ್ಕೋರರ್.
ಚೇಸಿಂಗ್ ವೇಳೆ ವನೌಡೌನ್ ಬ್ಯಾಟ್ಸ್‌ಮನ್ ಕೆ. ಸಿದ್ಧಾರ್ಥ್ 46 ರನ್ ಮಾಡಿ ಅಜೇಯರಾಗಿ ಉಳಿದರು. ಮುಂಬಯಿಯನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಕಾರ ಆರ್. ಸಮರ್ಥ್ 35 ರನ್ ಮಾಡಿ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದರು.
ನಾಯಕ ಮನೀಷ್ ಪಾಂಡೆ 19 ರನ್ ಮಾಡಿದರೆ, ಕರುಣ್ ನಾಯರ್ ಖಾತೆಯನ್ನೇ ತೆರೆಯಲಿಲ್ಲ. ಇಬ್ಬರೂ ರನೌಟ್ ಆಗಿ ನಿರ್ಗಮಿಸಿದರು. ರೋಹನ್ ಕದಂ 14 ರನ್, ಎಸ್. ಶರತ್ ಅಜೇಯ 21 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಬರೋಡ-48.3 ಓವರ್‌ಗಳಲ್ಲಿ 176 (ಭಾನು ಪನಿಯ 40, ದೇವಧರ್ 31, ವಾಗೊ¾àಡೆ 27, ಕಾರ್ಯಪ್ಪ 28ಕ್ಕೆ 3, ಕೌಶಿಕ್ 38ಕ್ಕೆ 3, ದುಬೆ 31ಕ್ಕೆ 2). ಕರ್ನಾಟಕ-38.4 ಓವರ್‌ಗಳಲ್ಲಿ 4 ವಿಕೆಟಿಗೆ 150 (ಕೆ. ಸಿದ್ಧಾರ್ಥ್ ಔಟಾಗದೆ 46, ಆರ್. ಸಮರ್ಥ್ 35, ಎಸ್. ಶರತ್ ಔಟಾಗದೆ 21).
ಕೊನೆಯ ಸ್ಥಾನಕ್ಕೆ
ಕುಸಿದ ಮುಂಬಯಿ
ದಿನದ ಮತ್ತೊಂದು ಮಳೆ ಪಂದ್ಯದಲ್ಲಿ ಬಂಗಾಲ ವಿರುದ್ಧ ಮುಂಬಯಿ 67 ರನ್ನುಗಳ ಸೋಲಿಗೆ ತುತ್ತಾಯಿತು. ಈ ಫಲಿತಾಂಶಕ್ಕೂ ವಿಜೆಡಿ ನಿಯಮವನ್ನು ಅಳವಡಿಸಲಾಯಿತು. 4 ಪಂದ್ಯಗಳಲ್ಲಿ 3ನೇ ಸೋಲನುಭವಿಸಿದ ಮುಂಬಯಿ “ಬಿ’ ವಿಭಾಗದ ಅಂತಿಮ ಸ್ಥಾನಕ್ಕೆ ಕುಸಿದಿದೆ.
ಅನುಸ್ತೂಪ್ ಮಜುಮಾªರ್ (110) ಮತ್ತು ಶಬಾಜ್ ಅಹ್ಮದ್ (106) ಅವರ ಶತಕ ಸಾಹಸದಿಂದ ಬಂಗಾಲ 7 ವಿಕೆಟಿಗೆ 318 ರನ್ ಪೇರಿಸಿತು. ಮುಂಬಯಿ 41 ಓವರ್‌ಗಳಲ್ಲಿ 8 ವಿಕೆಟಿಗೆ 223 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ 49, ಅರ್ಮಾನ್ ಜಾಫರ್ 47 ರನ್ ಮಾಡಿದರು.
ಇದನ್ನೂ ಓದಿ:ಬಾಂಗ್ಲಾ ವನಿತಾ ಕ್ರಿಕೆಟ್ ತಂಡದಲ್ಲಿ 2 ಒಮಿಕ್ರಾನ್ ಕೇಸ್
ಕೇರಳಕ್ಕೆ ಮೂರನೇ ಜಯ
ರವಿವಾರದ ಪಂದ್ಯದಲ್ಲಿ ಛತ್ತೀಸ್‌ಢವನ್ನು 5 ವಿಕೆಟ್‌ಗಳಿಂದ ಉರುಳಿಸುವ ಮೂಲಕ ಕೇರಳ 3ನೇ ಗೆಲುವನ್ನು ದಾಖಲಿಸಿತು. ಸಿಜೊಮೋನ್ ಜೋಸೆಫ್ ಬೌಲಿಂಗ್ ದಾಳಿಗೆ (33ಕ್ಕೆ 5) ತತ್ತರಿಸಿದ ಛತ್ತೀಸ್‌ಗಢ 46.2 ಓವರ್‌ಗಳಲ್ಲಿ 189 ರನ್ನಿಗೆ ಕುಸಿಯಿತು. ಜವಾಬಿತ್ತ ಕೇರಳ 34.3 ಓವರ್‌ಗಳಲ್ಲಿ 5 ವಿಕೆಟಿಗೆ 193 ರನ್ ಮಾಡಿತು. ವಿನೂಪ್ ಮನೋಹರನ್ ಔಟಾಗದೆ 54, ಮೊಹಮ್ಮದ್ ಅಜರುದ್ದೀನ್ 45 ರನ್ ಬಾರಿಸಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಜೋಸೆಫ್ 27 ರನ್ ಮಾಡಿದರು.
ಇದಕ್ಕೂ ಮೊದಲು ಚಂಡೀಗಢ, ಮಹಾರಾಷ್ಟ್ರ ವಿರುದ್ಧ ಕೇರಳ ಜಯ ಸಾಧಿಸಿತ್ತು. ಮಧ್ಯಪ್ರದೇಶ ವಿರುದ್ಧ 40 ರನ್ನುಗಳಿಂದ ಎಡವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.