Cricket: ವಿಜಯ ಹಜಾರೆ ಟ್ರೋಫಿ ಕ್ರಿಕೆಟ್- ಕರ್ನಾಟಕ ತಂಡಕ್ಕೆ ಆರನೇ ಗೆಲುವು
Team Udayavani, Dec 5, 2023, 11:39 PM IST
ಅಹ್ಮದಾಬಾದ್: ಉತ್ತಮ ಫಾರ್ಮ್ನಲ್ಲಿರುವ ಕರ್ನಾಟಕ ತಂಡವು ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಕೂಟದ “ಸಿ’ ಬಣದ ಪಂದ್ಯದಲ್ಲಿ ಮಂಗಳವಾರ ಮಿಜೋರಾಂ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಇದು ಕರ್ನಾಟಕ ಈ ಕೂಟದಲ್ಲಿ ಆಡಿದ ಏಳು ಪಂದ್ಯಗಳಿಂದ ದಾಖಲಿಸಿದ ಆರನೇ ಗೆಲುವು ಆಗಿದೆ.
ಒಟ್ಟಾರೆ 24 ಅಂಕ ಪಡೆದಿರುವ ಕರ್ನಾಟಕವಲ್ಲದೇ ಹರಿಯಾಣ (28 ಅಂಕ), ರಾಜಸ್ಥಾನ (24), ವಿದರ್ಭ (20), ಮುಂಬಯಿ (20) ಮತ್ತು ತಮಿಳುನಾಡು (20) ನೇರವಾಗಿ ಕ್ವಾರ್ಟರ್‌ಫೈನಲಿಗೆ ಪ್ರವೇಶಿಸಿವೆ. “ಸಿ’ ಬಣದಲ್ಲಿರುವ ಹರಿಯಾಣ ಆಡಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿ ಗರಿಷ್ಠ 28 ಅಂಕ ಪಡೆದ ಸಾಧನೆ ಮಾಡಿದೆ.
ಕರ್ನಾಟಕಕ್ಕೆ ಗೆಲುವು
ಅಹ್ಮದಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ ತಂಡವು ಮಿಜೋರಾಂ ತಂಡವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮಿಜೋರಾಂ ತಂಡವು ವಾಸುಕಿ ಕೌಶಿಕ್ ಮತ್ತು ಕೃಷ್ಣಪ್ಪ ಗೌತಮ್ ಅವರ ದಾಳಿಗೆ ಕುಸಿದು 37.2 ಓವರ್‌ಗಳಲ್ಲಿ 124 ರನ್ನಿಗೆ ಆಲೌಟಾಯಿತು. ಕೌಶಿಕ್ ಕೇವಲ 7 ರನ್ನಿಗೆ 4 ವಿಕೆಟ್ ಹಾರಿಸಿದರೆ ಗೌತಮ್ 49 ರನ್ನಿಗೆ 3 ವಿಕೆಟ್ ಪಡೆದರು.
ಗೆಲ್ಲಲು ಸುಲಭ ಸವಾಲು ಪಡೆದ ಕರ್ನಾಟಕ ತಂಡವು 17.1 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ 126 ರನ್ ಗಳಿಸಿ ಜಯಭೇರಿ ಬಾರಿಸಿತು. 46 ರನ್ನಿಗೆ 4 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ತಂಡವನ್ನು ನಾಯಕ ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಆಧರಿಸಿದರು. ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 80 ರನ್ ಪೇರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಅಗರ್ವಾಲ್ ಅಂತಿಮವಾಗಿ 48 ರನ್ ಗಳಿಸಿ ಅಜೇಯರಾಗಿ ಉಳಿದರು.
ದಿಲ್ಲಿ ಹೊರಕ್ಕೆ
ಈ ಕೂಟದಲ್ಲಿ ನಾಲ್ಕನೇ ಬಾರಿ ಸೋಲನ್ನು ಕಂಡ ದಿಲ್ಲಿ ತಂಡವು ಹೊರಬಿತ್ತು. ದಿಲ್ಲಿ ಆಡಿದ 7 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು 12 ಅಂಕಗಳೊಂದಿಗೆ “ಸಿ’ ಬಣದಲ್ಲಿ ಐದನೇ ಸ್ಥಾನ ಪಡೆಯಿತು. ಮಂಗಳವಾರದ ಪಂದ್ಯದಲ್ಲಿ ದಿಲ್ಲಿ ತಂಡವು ಉತ್ತರಖಂಡ ತಂಡದೆದುರು 51 ರನ್ನುಗಳಿಂದ ಸೋಲನ್ನು ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಉತ್ತರಖಂಡ 45.5 ಓವರ್‌ಗಳಲ್ಲಿ 221 ರನ್ನಿಗೆ ಆಲೌಟಾಯಿತು. ನವದೀಪ್ ಸೈನಿ 23 ರನ್ನಿಗೆ 3 ವಿಕೆಟ್ ಪಡೆದರೆ ಹರ್ಷ ತ್ಯಾಗಿ 30 ರನ್ನಿಗೆ 3 ವಿಕೆಟ್ ಪಡೆದರು. ಇದಕ್ಕುತ್ತರವಾಗಿ ದಿಲ್ಲ ತಂಡವು ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ 46.2 ಓವರ್‌ಗಳಲ್ಲಿ 170 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.
ಮುಂಬಯಿಗೆ ಸೋಲು
“ಎ’ ಬಣದ ಪಂದ್ಯದಲ್ಲಿ ಮುಂಬಯಿ ತಂಡವು ಒಡಿಶಾ ವಿರುದ್ಧ 86 ರನ್ನುಗಳಿಂದ ಸೋಲನ್ನು ಕಂಡರೂ ಕ್ವಾರ್ಟರ್‌ಫೈನಲ್ ಹಂತಕ್ಕೇರಲು ಯಶಸ್ವಿಯಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಒಡಿಶಾ ತಂಡವು 50 ಓವರ್‌ಗಳಲ್ಲಿ 9 ವಿಕೆಟಿಗೆ 199 ರನ್ ಗಳಿಸಿತ್ತು. ಕಾರ್ತಿಕ್ ಬಿಸ್ವಾಲ್ 64 ರನ್ ಗಳಿಸಿದ್ದರೆ ಮೋಹಿತ್ ಅವಾಸ್ತಿ 30 ರನ್ನಿಗೆ 3 ವಿಕೆಟ್ ಪಡೆದ್ದಿದರು. ಗೆಲ್ಲಲು 200 ರನ್ ಗಳಿಸುವ ಸವಾಲು ಪಡೆದ ಮುಂಬಯಿ ತಂಡವು ಒಡಿಶಾದ ದಾಳಿಗೆ ಕುಸಿದು 32.2 ಓವರ್‌ಗಳಲ್ಲಿ 113 ರನ್ನಿಗೆ ಆಲೌಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.