ISRO: ವಿಕ್ರಮ್, ಪ್ರಜ್ಞಾನ್ ಎದ್ದೇಳದಿದ್ದರೆ?
Team Udayavani, Sep 23, 2023, 10:21 PM IST
ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸೂರ್ಯೋದಯವಾಗಿದ್ದರೂ, ಇನ್ನೂ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸುಷುಪ್ತ ಸ್ಥಿತಿಯಿಂದ ಮೇಲೆದ್ದಿಲ್ಲ. ಅವುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಇಸ್ರೋ ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ, ಇವೆರಡೂ ಎಚ್ಚರವಾಗದೇ ಇದ್ದರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಇನ್ನೂ ಸಿಗದ ಸಂಪರ್ಕ
ಸೆ.2ರಂದೇ ಲ್ಯಾಂಡರ್ ಮತ್ತು ರೋವರ್ ನಿದ್ರಾಸ್ಥಿತಿಗೆ ಜಾರಿವೆ. ಸೆ.22ರಂದು ಸೂರ್ಯೋದಯ ಆಗುತ್ತಿದ್ದಂತೆ, ಇವುಗಳಲ್ಲಿರುವ ಸೌರ ಫಲಕಗಳು ಬೆಳಕನ್ನು ಹೀರಿಕೊಂಡು ಮತ್ತೆ ಸಕ್ರಿಯಗೊಳ್ಳಬಹುದು ಎಂಬ ನಿರೀಕ್ಷೆ ಇಸ್ರೋ ವಿಜ್ಞಾನಿಗಳದ್ದು. ಹೀಗಾಗಿ, ಅವುಗಳೊಂದಿಗೆ ಸಂಪರ್ಕ ಬೆಳೆಸುವ ಎಲ್ಲ ಪ್ರಯತ್ನಗಳನ್ನೂ ಇಸ್ರೋ ಮಾಡುತ್ತಿದೆ. ಆದರೆ, ಇನ್ನೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಒಂದು ವೇಳೆ, ವಿಕ್ರಮ್ ಮತ್ತು ಪ್ರಜ್ಞಾನ್ ಎಚ್ಚರಗೊಳ್ಳದೇ ಇದ್ದರೆ, ಚಂದ್ರನಲ್ಲೇ “ಭಾರತದ ಶಾಶ್ವತ ರಾಯಭಾರಿ”ಗಳಾಗಿ ಉಳಿಯಲಿವೆ.
ಆಶಾಭಾವ ಏಕೆ?
2019ರಲ್ಲಿ ಚಂದ್ರನಲ್ಲಿನ ಸೂರ್ಯಾಸ್ತದ ವೇಳೆ ಸುಷುಪ್ತ ಸ್ಥಿತಿಗೆ ಹೋಗಿದ್ದ ಚೀನಾದ ಚೇಂಜ್-4 ಲ್ಯಾಂಡರ್ ಮತ್ತು ಯುಟು-2 ರೋವರ್ 14 ದಿನಗಳ ಬಳಿಕ ಸೂರ್ಯೋದಯವಾಗುತ್ತಿದ್ದಂತೆ, ಮತ್ತೆ ಪುನಶ್ಚೇತನಗೊಂಡು ಕಾರ್ಯಾರಂಭಿಸಿದ್ದವು. ಹೀಗಾಗಿ, ಭಾರತದ ವಿಕ್ರಮ್ ಮತ್ತು ಪ್ರಜ್ಞಾನ್ ಕೂಡ ಎಚ್ಚರಗೊಳ್ಳಲಿದೆ ಎಂಬ ಆಶಾಭಾವ ವಿಜ್ಞಾನಿಗಳದ್ದು.
ಎಚ್ಚೆತ್ತರೆ ಏನಾಗುತ್ತದೆ?
ವಿಕ್ರಮ್ ಮತ್ತು ಪ್ರಜ್ಞಾನ್ ಅನ್ನು ಕೇವಲ 14 ದಿನಗಳ ಕಾರ್ಯಾಚರಣೆಗೆಂದು ವಿನ್ಯಾಸಪಡಿಸಲಾಗಿದೆ. ಈಗಾಗಲೇ ಇವುಗಳು 14 ದಿನಗಳ ಕಾಲ ತಮ್ಮ ಕೆಲಸವನ್ನು ಪೂರ್ಣಗೊಳಿಸಿ, ದತ್ತಾಂಶಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಿವೆ. ಸದ್ಯ ನಿದ್ರಾಸ್ಥಿತಿಯಲ್ಲಿರುವ ಇವುಗಳು ಒಂದು ವೇಳೆ ಎಚ್ಚೆತ್ತುಕೊಂಡರೆ, ಚಂದಿರನ ಮತ್ತಷ್ಟು ರಾತ್ರಿಗಳನ್ನು ತಾಳಿಕೊಳ್ಳುವ ಸಾಮರ್ಥ್ಯ ಇವುಗಳಿಗಿವೆ ಎಂದರ್ಥ. ಇದು ಸಾಧ್ಯವಾದರೆ, ಲ್ಯಾಂಡರ್ ಮತ್ತು ರೋವರ್ ಸುಮಾರು 6 ತಿಂಗಳಿಂದ 1 ವರ್ಷ ಕಾಲ ಕೆಲಸ ಮಾಡಬಹುದು.
ಚಂದ್ರ, ಮಂಗಳನಲ್ಲಿ ವಾಸಿಸುವಂತಾಗಬೇಕು
ಮನುಷ್ಯರು ಭೂಮಿಯಾಚೆಗೆ ಪ್ರಯಾಣ ಬೆಳೆಸಬೇಕೆಂದರೆ, ಚಂದ್ರ, ಮಂಗಳ ಮತ್ತು ಇತರೆ ಬಾಹ್ಯ ಗ್ರಹಗಳನ್ನು ವಾಸಯೋಗ್ಯ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ಭಾರತೀಯರು ಇರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ. ಚಂದ್ರಯಾನ-3ರ ಕುರಿತು ಶನಿವಾರ ಎನ್‌ಡಿಟಿವಿ ಜತೆ ಮಾತನಾಡಿದ ಸೋಮನಾಥ್ ಅವರು, ಅಮೆರಿಕ, ಯುಎಸ್‌ಎಸ್‌ಆರ್‌ನಂಥ ದೇಶಗಳು ವಿಶ್ವಶಕ್ತಿಯಾಗುವ ಕನಸು ಕಾಣುತ್ತವೆ. ನಾನೂ ಭಾರತವನ್ನು ವಿಶ್ವಶಕ್ತಿಯನ್ನಾಗಲು ಬಯಸುತ್ತೇನೆ. ಆದರೆ, ನಾನು ಬಯಸುವುದು ಸೇನಾ ಶಕ್ತಿ, ಇತರೆ ದೇಶವನ್ನು ವಶಪಡಿಸಿಕೊಳ್ಳುವಂಥ ಶಕ್ತಿಯನ್ನಲ್ಲ. ಭಾರತವು ಭವಿಷ್ಯದಲ್ಲಿ ತಂತ್ರಜ್ಞಾನದ ನಾಯಕನಾಗಬೇಕು ಎಂದು ನಾನು ಇಚ್ಛಿಸುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.