ಪರಿಸರ ಸಮೃದ್ಧಿಗೆ ವಿನಯ್‌ ರಾಮಕೃಷ್ಣ ಸಂಕಲ್ಪ

ಮುಂದಿನ ತಲೆಮಾರಿಗಾಗಿ ಪರಿಸರ ಪೋಷಣೆ ಈಗಾಗಲೇ ಸಾವಿರಾರು ಗಿಡ ನೆಟ್ಟು ಪೋಷಣೆ; ಪ್ರಾಣಿ, ಪಕ್ಷಿಗಳಿಗೆ ಆಸರೆ

Team Udayavani, Aug 11, 2021, 5:25 PM IST

ಪರಿಸರ ಸಮೃದ್ಧಿಗೆ ವಿನಯ್‌ ರಾಮಕೃಷ್ಣ ಸಂಕಲ್ಪ

ಭಾರತೀನಗರ: ತಮ್ಮ ತಮ್ಮಕುಟುಂಬ ಚೆನ್ನಾಗಿದ್ದರಾಯಿತು, ಬೇರೆಯವರ ಉಸಾಬರೀ ನಮಗೇಕೆ ಎನ್ನುವ ಸ್ವಾರ್ಥ ಮನೋಭಾವವೇ ತುಂಬಿರುವ ಇಂದಿನ ಸಮಾಜದಲ್ಲಿ ನಮ್ಮ ನೆರೆ-ಹೊರೆಯವರು, ನಮ್ಮ ಊರಿನವರು ಮಾತ್ರವಲ್ಲ ನಾಡಿನ ಸಮಸ್ತರು ಬದುಕಿ ಬಾಳಬೇಕಾದರೆ ಪರಿಸರ ಅಗತ್ಯ ಎಂದು ಗಿಡಮರ ಬೆಳೆಸುತ್ತಾ ಎಲೆಮರೆಕಾಯಿಯಂತೆ ಇರುವ ವ್ಯಕ್ತಿಯೊಬ್ಬರು ಇಂದು ಪರಿಸರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.

ಪರಿಸರ ಪ್ರೇಮಿ: ಆರ್‌.ಕೆ.ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾಗಿರುವ ವಿನಯ್‌ ರಾಮಕೃಷ್ಣ ಅವರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುತ್ತಲೇ ಪರಿಸರ ಕುರಿತು ಜಾಗೃತಿ ಮೂಡಿಸಿಕೊಂಡು ಬಂದ ಇವರು ಅಪರೂಪದ ವ್ಯಕ್ತಿ. ಇಂದು ಪರಿಸರ ಪ್ರೇಮಿಯಾಗಿ ನಮ್ಮೊಡನಿದ್ದಾರೆ.

ಪ್ರಾಣಿ, ಪಕ್ಷಿಗಳಿಗೆ ಆಸರೆ: ಮೂಲತಃ ಮದ್ದೂರು ತಾಲೂಕಿನ ಎಸ್‌.ಐ.ಹೊನ್ನಲಗೆರೆ ಗ್ರಾಮದ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ರಾಮಕೃಷ್ಣ ಮತ್ತು ಚಂದ್ರಕಲಾ ಅವರ ಸುಪುತ್ರರಾಗಿ ಜನಿಸಿದ ವಿನಯ್‌ ರಾಮಕೃಷ್ಣ, ಇಂದು ಮದ್ದೂರು ತಾಲೂಕಿನಾದ್ಯಂತ ತಮ್ಮ ಸೇವೆ ಮಾಡುತ್ತಾ ಜೊತೆಗೆ ಪರಿಸರ ವೇದಿಕೆಯಿಂದ ಸಾವಿರಾರು ಗಿಡಗಳನ್ನು ನೆಟ್ಟಿದ್ದು, ಅವುಗಳು ಈಗ ತಂಪನ್ನೀಯುತ್ತಿವೆ. ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಆಸರೆಯಾಗಿದೆ.

ಹಸಿರಿನಿಂದ ಕಂಗೊಳಿಸುವಿಕೆ: ವಿನಯ್‌ ರಾಮಕೃಷ್ಣರವರ ಕಾಳಜಿಯ ಕ್ಷೇತ್ರ ಪರಿಸರ. ಸುಮಾರು 50 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ಸಂಸ್ಥೆಯ ಆರಣದಲ್ಲಿ ಮೊನ್ನೆಯಷ್ಟೇ 500 ಸಸಿಗಳನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದ್ದಿಗಳೊಂದಿಗೆ ನೆಟ್ಟಿದ್ದಾರೆ. ಗಿಡ ನೆಡುವ ಮೂಲಕ ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದ್ದು, ಸಂಸ್ಥೆಯನ್ನು ಹಸಿರಿನಿಂದಕಂಗೊಳಿಸಿವಂತೆ ಮಾಡಲಾಗಿದೆ.

ರಾಜಕೀಯ ಸೇವೆಗೂ ಸೈ: ವಿನಯ್‌ ರಾಮಕೃಷ್ಣ ಅವರು ತಮ್ಮ ತಂದೆ ಬಿ. ರಾಮಕೃಷ್ಣರವರ ಹಾದಿಯಲ್ಲೇ ಜನರ ಸೇವೆಗೆ ಮುಂದಾಗಿದ್ದಾರೆ.
ರಾಜಕೀಯಕ್ಕೆ ಪ್ರವೇಶ ನೀಡಿಜನರ ಸೇವೆಮಾಡುವುದಕ್ಕೂ ಸೈ ಎಂದಿದ್ದಾರೆ.

ಇದನ್ನೂ ಓದಿ:ರಾಜ್ಯಗಳಿಗೆ ಒಬಿಸಿ ಪಟ್ಟಿ ಅಧಿಕಾರ ಮರುಸ್ಥಾಪನೆ : ಸಚಿವ ಶ್ರೀರಾಮುಲು ಧನ್ಯವಾದ

ಗ್ರಾಮೀಣ ಪ್ರತಿಭೆಗಳ ಆಶಾಕಿರಣ ಆರ್‌ಕೆ ವಿದ್ಯಾಸಂಸ್ಥೆ
ಮಂಡ್ಯ ಜಿಲ್ಲೆಯು, ಶೈಕ್ಷಣಿಕ ಪ್ರಗತಿಯಿಂದ ದೂರ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ಹೊರಬರುತ್ತಿದೆ.ಇದಕ್ಕೆಇಲ್ಲಿನ ಶಿಕ್ಷಣ ಸಂಸ್ಥೆಗಳು ಕಾರಣ, ಜಿಲ್ಲೆಯಲ್ಲಿರುವ ಕೆಲವೇ ಪರಿಣಾಮಕಾರಿ ವಿದ್ಯಾಸಂಸ್ಥೆಗಳಲ್ಲಿ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯಲ್ಲಿರುವ ಆರ್‌ಕೆ ವಿದ್ಯಾ ಸಂಸ್ಥೆಯೂ ಒಂದು. ಆರ್‌ಕೆ ಶಿಕ್ಷಣ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಈ ಭಾಗದ ನೂರಾರು ಗ್ರಾಮಗಳ ವಿದ್ಯಾರ್ಥಿಗಳ ಭವಿಷ್ಯದ ಆಶಾದೀಪವಾಗಿ ಕಾರ್ಯ ನಿರ್ವಹಿಸುತ್ತಿರುವುದು ತಾಲೂಕಿಗೆ ಹೆಮ್ಮೆಯ ವಿಚಾರ.

ಸಾವಯವ ಕೃಷಿಗೆ ಉತ್ತೇಜನ
ವಿನಯ್‌ ರಾಮಕೃಷ್ಣ ಅವರು, ಜನರ ಆರೋಗ್ಯವೇ ಮುಖ್ಯ ಎಂಬುದನ್ನು ಮನಗಂಡು ಪರಿಸರದಜೊತೆಗೆ ಸಾವಯವ ಕೃಷಿಗೆ ಉತ್ತೇಜನ ನೀಡಲು ಮಂಡ್ಯ ಆರ್ಗ್ಯಾನಿಕ್ ಸಂಸ್ಥೆಯ ಪಾಲುದಾರರಾಗಿದ್ದಾರೆ. ಅಲ್ಲದೆ, ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮದ ರೂವಾರಿಯಾಗಿದ್ದಾರೆ.
ಗ್ರಾಮೀಣ ರೈತರಿಗೆ ಸಾವಯವ ಕೃಷಿ ಬಗ್ಗೆ ತರಬೇತಿ ಆಯೋಜಿಸಿ ಕೃಷಿಕರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ, ಮದ್ದೂರು ತಾಲೂಕಿನಲ್ಲಿ ಶಿಕ್ಷಣದ ಜೊತೆಗೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಆರೋಗ್ಯಕರ ಬೆಳವಣಿಗೆಗೆ ಇವರು ಶ್ರಮಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.

ಸಾವಿರಾರು ಗಿಡ ನೆಟ್ಟು ಪೋಷಣೆ
ಬಾಲ್ಯದಿಂದಲೇ ಗಿಡಮರಗಳ ಕುರಿತು ಆಪ್ತಸಂಬಂಧ ಹೊಂದಿದ್ದ ವಿನಯ್‌ ರಾಮಕೃಷ್ಣ ಬೆಳೆಯುತ್ತ ಪರಿಸರ ಪ್ರೇಮಿಯಾಗಿ, ಈಗ ಮಂಡ್ಯ ಆರ್ಗ್ಯಾನಿಕ್ ಸಂಸ್ಥೆಯ ಪಾಲುದಾರರಾಗಿದ್ದಾರೆ. ಜೊತೆಗೆ ಆರ್‌.ಕೆ.ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ತಲೆಮಾರು ಕಾಲಕಾಲಕ್ಕೆ ಮಳೆ, ಬೆಳೆಯನ್ನು ಕಾಣುವಂತಾಗ ಬೇಕೆಂದು ಪರಿಸರ ಪ್ರಜ್ಞೆ ಮೂಡಿಸಲು ಶ್ರಮಿಸುತ್ತಿದ್ದಾರೆ. ಆರ್‌. ಕೆ.ವಿದ್ಯಾಸಂಸ್ಥೆಯು 50 ಎಕರೆ ವಿಸ್ತೀರ್ಣದಲ್ಲಿದ್ದು, ಅಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಸ್ನೇಹಿತರ ನೆರವನ್ನು ಪಡೆದುಕೊಂಡು ಗಿಡಮರಗಳನ್ನು ಜೋಪಾನ ಮಾಡಿದ ಪರಿಣಾಮ
ಇಂದು ಆ ಗಿಡಗಳು ಮರಗಳಾಗಿ ನೆರಳು ನೀಡುತ್ತಿವೆ. ಇವರ ಪರಿಶ್ರಮವನ್ನು ಕಂಡ ಅರಣ್ಯ ಇಲಾಖೆಯು ವಿನಯ್‌ ರಾಮಕೃಷ್ಣ
ಅವರಿಗೆ ಬೆನ್ನುತಟ್ಟಿದ್ದಾರೆ.

-ಅಣ್ಣೂರು ಸತೀಶ್‌

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.