ದ್ವಿತೀಯ ಟೆಸ್ಟ್‌ಗೆ ವಿರಾಟ್ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು
Team Udayavani, Dec 1, 2021, 6:50 AM IST
ಮುಂಬಯಿ: ನ್ಯೂಜಿ ಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಭಾರತವೀಗ ಮುಂಬಯಿಯಲ್ಲಿ ನಡೆ ಯಲಿರುವ ದ್ವಿತೀಯ ಟೆಸ್ಟ್‌ಗೆ ಸಿದ್ದತೆ ಆರಂಭಿಸಿದೆ. ಆದರೆ ತಂಡದ ಆಡಳಿತ ಮಂಡಳಿ ಜಟಿಲವಾದ ಸಮಸ್ಯೆಗೆ ಸಿಲುಕಿದೆ. ವಿರಾಟ್ ಕೊಹ್ಲಿಗಾಗಿ ಯಾರನ್ನು ಬಿಡುವುದು ಎಂಬುದೇ ಇಲ್ಲಿನ ಪ್ರಶ್ನೆ!
ಹೌದು, ಟಿ20 ವಿಶ್ವಕಪ್ ಬಳಿಕ ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ದ್ವಿತೀಯ ಟೆಸ್ಟ್‌ಗೆ ತಂಡ ಸೇರಿಕೊಂಡು ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆದ್ದರಿಂದ ಕೊಹ್ಲಿಗಾಗಿ ಯಾರನ್ನು ತಂಡದಿಂದ ಕೈಬಿಡಬೇಕು ಎನ್ನುವುದು ತಲೆನೋವಾಗಿ ಪರಿಣಮಿಸಿದೆ.
ಅಯ್ಯರ್ ಸ್ಥಾನ ಗಟ್ಟಿ
ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ ಸ್ಥಾನದಲ್ಲಿ ಆಡಲಿಳಿದ ಶ್ರೇಯಸ್ ಅಯ್ಯರ್ ತಮ್ಮ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದರು. ಚೊಚ್ಚಲ ಟೆಸ್ಟ್‌ನಲ್ಲೇ ಶತಕ, ಅರ್ಧ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು. ಆದ್ದರಿಂದ ಅವರನ್ನು ತಂಡದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಇನ್ನು ಉಪನಾಯಕ ರಹಾನೆ ಮತ್ತು ಚೇತೇಶ್ವರ್ ಪೂಜಾರ. ಇವರಿಬ್ಬರೂ ಸದ್ಯ ಬ್ಯಾಟಿಂಗ್ ಲಯದಲ್ಲಿಲ್ಲ. ಆದರೆ ಅನುಭವದ ಆಧಾರದಲ್ಲಿ ಉಳಿದುಕೊಳ್ಳಬಹುದು.
ಉಳಿದಂತೆ ಸ್ಪಿನ್ ವಿಭಾಗದಲ್ಲಿ ಅಶ್ವಿನ್, ಜಡೇಜ, ಅಕ್ಷರ್ ಉತ್ತಮ ಲಯದಲ್ಲಿರುವುದರಿಂದ ಮತ್ತು ಭಾರತದಲ್ಲಿ ಸ್ಪಿನ್ ಸ್ನೇಹಿ ಪಿಚ್‌ಗಳಿರುವ ಕಾರಣ ಮೂವರು ಸ್ಪಿನ್ನರ್‌ಗಳು ಕಣಕ್ಕಿಳಿಯುವುದ ಬಹುತೇಕ ಖಚಿತ.
ಇದನ್ನೂ ಓದಿ:ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!
ಇಬ್ಬರು ವೇಗಿಗಳಾದ ಇಶಾಂತ್ ಶರ್ಮ, ಉಮೇಶ್ ಯಾದವ್ ಕೂಡ ಪರಿಣಾಮ ಬೀರಿಲ್ಲ. ಇವರಲ್ಲೊಬ್ಬರನ್ನು ಕೈಬಿಡಬಹುದಾದರೂ ಸ್ಟ್ರೈಕ್ ಬೌಲರ್ ಒಬ್ಬರ ಕೊರತೆ ಎದುರಾಗುತ್ತದೆ.
ಮಾಯಾಂಕ್ ಅಗರ್ವಾಲ್ ಸ್ಥಾನಕ್ಕೆ ಕುತ್ತು?
ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಅವರನ್ನು ಕೈ ಬಿಟ್ಟು ಕೊಹ್ಲಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ಮಾರ್ಗವೊಂದಿದೆ. ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ಆಗ ಕತ್ತು ನೋವಿನಿಂದಾಗಿ ಬಳಲುತ್ತಿರುವ ಭಾರತದ ಪ್ರಧಾನ ಕೀಪರ್ ವೃದ್ಧಿಮಾನ್ ಸಾಹಾ ಅವರನ್ನು ಹೊರಗುಳಿಸಬೇಕಾಗುತ್ತದೆ. ಅವರ ಸ್ಥಾನಕ್ಕೆ ಬರುವ ಶ್ರೀಕರ್ ಭರತ್ ಅವರನ್ನು ಗಿಲ್ ಜತೆಗೆ ಆರಂಭಿಕನಾಗಿ ಇಳಿಸಬಹುದು. ಆಗ ವಿರಾಟ್ ಆಯ್ಕೆ ಸುಲಭ. ಆದರೆ ಇನ್ನೂ ಸ್ಥಿರವಾದ ಓಪನಿಂಗ್ ಕಾಣದ ಭಾರತ ಪದೇಪದೆ ಆರಂಭಿಕರನ್ನು ಬದಲಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಕೊನೆ ಗಳಿಗೆಯಲ್ಲಿ ಒಂದು ಅಸ್ತ್ರವಂತೂ ಇದೆ. ಪೂಜಾರ ಅಥವಾ ರಹಾನೆ ಅವರನ್ನು “ಅನ್‌ಫಿಟ್’ ಎಂದು ಘೋಷಿಸಿ ಹೊರಗಿರಿಸಿ ಕೊಹ್ಲಿಯನ್ನು ಸೇರಿಸಿಕೊಳ್ಳುವುದು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.