ಹಿಂದೆ ಋಷಿ ಪರಂಪರೆ ಇಂದು ಮಠ ಪರಂಪರೆ
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಸಂಯಮೀಂದ್ರತೀರ್ಥರು
Team Udayavani, Jan 8, 2022, 6:00 AM IST
ಉಡುಪಿ: ಮಠಗಳಿರುವುದೇ ಧರ್ಮಪ್ರಸಾರಕ್ಕೆ. ಹಿಂದೆ ಋಷಿ ಪರಂಪರೆ ಇದ್ದರೆ ಈಗ ಮಠ ಪರಂಪರೆ ಇದೆ ಎಂದು ಕಾಶೀ ಮಠ ಸಂಸ್ಥಾನಾಧಿಪತಿ ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ವಿಶ್ಲೇಷಿಸಿದರು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಆಶೀರ್ವಚನ ನೀಡಿದರು.
ವಿದ್ಯಾವಿನಯ ಸಂಪನ್ನರಾದ ವಿದ್ವಾಂಸರು ಇಲ್ಲಿ ತಯಾರಾಗುತ್ತಿರುವುದು ಸಂತೋಷದ ವಿಷಯ. ನಾವು ಹಿಂದೆ ಅಯೋಧ್ಯೆ ಮಂದಿರಕ್ಕೆ ಸಂಬಂಧಿಸಿ ಪೇಜಾವರ ಶ್ರೀಗಳವರನ್ನು ಭೇಟಿ ಮಾಡಿದ್ದೆವು. ನಮ್ಮ ಸಮಾಜದಿಂದ ಮಂದಿರಕ್ಕೆ ಸಹ ಕಾರವನ್ನು ಕೊಡುತ್ತೇವೆ ಎಂದು ಹೇಳಿದ್ದೆವು. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಯೋಧ್ಯೆ ಮಂದಿರಕ್ಕಾಗಿ ವಿಶೇಷ ಸೇವೆ ಸಲ್ಲಿಸಿರುವುದು ನಮಗೆ ಹೆಮ್ಮೆ. ನಮ್ಮ ಸಂಬಂಧ ಇದೇ ರೀತಿ ಮುಂದುವರಿಯಲಿ ಎಂದು ಶ್ರೀಸಂಯ ಮೀಂದ್ರತೀರ್ಥ ಶ್ರೀಪಾದರು ಹಾರೈಸಿದರು. ವಿದ್ಯಾಪೀಠದ ವಿದ್ವಾಂಸರಾದ ಕೇಶವ ಬಾಯರಿ, ಮಾಳಗಿ ರಾಮಾಚಾರ್ಯ, ಸತ್ಯನಾರಾಯ ಣಾಚಾರ್ಯರಲ್ಲಿ ಶಾಸ್ತ್ರ ಚಿಂತನೆಗಳನ್ನು ನಡೆಸಿದ ದಿನಗಳನ್ನು ಸ್ವಾಮೀಜಿಯವರು ಉಲ್ಲೇಖಿಸಿದರು.
ಅಯೋಧ್ಯೆ ರಾಮಮಂದಿರಕ್ಕೆ ಸಹಕಾರ ಕೋರಿ ಮೊದಲ ಭೇಟಿ ಉಡುಪಿ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. ಈಗ ಎರಡನೆಯ ಭೇಟಿ ನಮ್ಮ ಗುರು ಶ್ರೀವಿಶ್ವೇಶತೀರ್ಥರ ಉತ್ತರಾರಾಧನೆ ಬಳಿಕ ನಡೆಯುತ್ತಿದೆ. ನಮ್ಮ ಗುರುಗಳೇ ಕಾಶೀ ಮಠಾಧೀಶರನ್ನು ಆಹ್ವಾನಿಸಿದ್ದಾರೆಂದು ಭಾವಿಸುತ್ತಿದ್ದೇವೆ. ಕಾಶೀ ಮಠದ ಶಿಷ್ಯರು ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ವಿ ಗಳಿಸಲು ಗುರುಭಕ್ತಿಯೇ ಕಾರಣ. ನಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಜಿಎಸ್‌ಬಿ ಸಮಾಜದ ರಾಮಕೃಷ್ಣ ಭಟ್ ಶಾಸ್ತ್ರಪ್ರತಿಭೆಯನ್ನು ವಿದ್ವತ್ಸಭೆಯೇ ಕೊಂಡಾಡಿದೆ. ನಮ್ಮಿàರ್ವರ ಸಂಬಂಧ ಮತ್ತಷ್ಟು ಮುಂದುವರಿಯಲಿ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ಕಾಶೀ ಮಠಾಧೀಶರು ಪೇಜಾವರ ಮಠಾಧೀಶರನ್ನು, ಪೇಜಾವರ ಮಠಾಧೀಶರು ಕಾಶೀ ಮಠಾಧೀಶರನ್ನು ಗೌರವಿಸಿದರು. ಪೂರ್ಣಪ್ರಜ್ಞ ಮಂದಿರದಿಂದ ಪ್ರಕಟಗೊಂಡ ಗ್ರಂಥಗಳನ್ನು ಕಾಶೀ ಮಠಾಧೀಶರಿಗೆ ಸಮರ್ಪಿಸಲಾಯಿತು.
ಇದನ್ನೂ ಓದಿ:ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಕೃಷ್ಣಾಪುರ ಮಠಾಧೀಶರ ಭೇಟಿ
ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ| ಸತ್ಯನಾರಾಯಣಾಚಾರ್ಯ ವಂದಿಸಿದರು. ಪ್ರಾಧ್ಯಾಪಕ ಬದರಿನಾಥ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಮೂರು ಯೋಜನೆಗೆ ಅನುವು
ಕಾಶೀ ಮಠದಲ್ಲಿರುವ ಅಪೂರ್ವ ಪ್ರಾಚೀನ ಕೃತಿಗಳನ್ನು ನಮ್ಮ ಸಂಸ್ಥೆಗೆ ನೀಡಿ ಸ್ವಾಮೀಜಿಯವರು ಮೂರು ಸಂಶೋಧನ ಯೋಜನೆಗಳಿಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಪೂರ್ಣಪ್ರಜ್ಞ ಸಂಶೋ ಧನ ಕೇಂದ್ರದ ನಿರ್ದೇಶಕ ಡಾ| ಆನಂದತೀರ್ಥ ನಾಗಸಂಪಿಗೆ ಪ್ರಸ್ತಾವನೆಯಲ್ಲಿ ತಿಳಿಸಿದರು.
ಸಜೀವವೃಂದಾವನ, ನಿತ್ಯ ಗಂಗಾಸ್ನಾನ
ಶ್ರೀವಾದಿರಾಜರು, ಶ್ರೀರಾಘವೇಂದ್ರಸ್ವಾಮಿಗಳಂತೆ ಕಾಶೀ ಮಠ ಪರಂಪರೆಯ ಶ್ರೀಮಾಧವೇಂದ್ರತೀರ್ಥರ ಸಜೀವ ವೃಂದಾವನವು ಮುಂಬಯಿಯಲ್ಲಿದೆ. ಕಾಶೀ ಮಠಾಧೀಶರು ಗಂಗೆಯ ಜಲವನ್ನು ತರಿಸಿಟ್ಟುಕೊಂಡು ಪ್ರತಿನಿತ್ಯ ಗಂಗಾಸ್ನಾನ ಮಾಡುವುದು ಪರಂಪರೆಯ ವಿಶೇಷ ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಧ್ಯಾಪಕ ಮಾಳಗಿ ರಾಮಾಚಾರ್ಯ ಅಭಿನಂದನ ಭಾಷಣದಲ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.