ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಪ್ರಧಾನಿ ಹಸಿರು ನಿಶಾನೆ ? ಫೆ.25ರೊಳಗೆ ಉದ್ಘಾಟನೆ ಸಾಧ್ಯತೆ
Team Udayavani, Jan 26, 2021, 12:04 PM IST
ಬೆಂಗಳೂರು: ಹಲವು ಗಡುವುಗಳನ್ನು ಮೀರಿರುವ ಬಹುನಿರೀಕ್ಷಿತ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಬೈಯಪ್ಪನಹಳ್ಳಿ 3ನೇ ಕೋಚಿಂಗ್ ಟರ್ಮಿನಲ್) ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಫೆ. 20ರಿಂದ 25ರ ಒಳಗೆ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಳಿಸಲು ನೈರುತ್ಯ ರೈಲ್ವೆ ಸಿದ್ಧತೆ ನಡೆಸಿದೆ.
ನಗರದ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದ
ಮೇಲಿನ ಒತ್ತಡವನ್ನು ತಗ್ಗಿಸುವ ಜತೆಗೆ ರೈಲುಗಳ ದಟ್ಟಣೆಯನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಸುಮಾರು 192 ಕೋಟಿ ರೂ. ವೆಚ್ಚದಲ್ಲಿ ಬೈಯಪ್ಪನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಿಸಲಾಗಿದೆ. ಫೆಬ್ರವರಿ ಮೂರನೇ ವಾರದಲ್ಲಿ ಪ್ರಧಾನಮಂತ್ರಿಗಳು ಉದ್ಘಾಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೂರ್ಣವಾಗಿ ಸಜ್ಜುಗೊಳಿಸುವ ಕೆಲಸ ಭರದಿಂದ ಸಾಗಿದೆ.
“ರೈಲ್ವೆ ಮಂಡಳಿ ಅಧ್ಯಕ್ಷರು ಮತ್ತು ಸಿಇಒ ನೀಡಿದ ಸಲಹೆಯಂತೆ ಪ್ರಧಾನಮಂತ್ರಿಗಳು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಬಿ) ಅನ್ನು ಫೆ 20-25ರೊಳಗೆ ಉದ್ಘಾಟಿಸುವ ಸಾಧ್ಯತೆ ಇದೆ. ಅಷ್ಟರೊಳಗೆ ಬಾಕಿ ಇರುವ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿ, ಲೋಕಾರ್ಪಣೆಗೆ ಅಣಿಗೊಳಿಸಬೇಕು’ ಎಂದು ಬೆಂಗಳೂರಿನ ಮುಖ್ಯ ಆಡಳಿತ ಅಧಿಕಾರಿ (ನಿರ್ಮಾಣ ವಿಭಾಗ) ಗಳಿಗೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್ ಅವರು ಲಿಖೀತವಾಗಿ ಸೂಚಿಸಿದ್ದಾರೆ ಎಂದು ರೈಲ್ವೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಇದನ್ನೂ ಓದಿ:ರೈತರ ಹೆಸರಿನಲ್ಲಿ ಕಾಂಗ್ರೆಸ್ ಡೋಂಗಿ ರಾಜಕಾರಣ ಮಾಡುತ್ತಿದೆ: ಶ್ರೀರಾಮುಲು
ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಅಂತಿಮ ಸ್ಪರ್ಶ ನೀಡುವ ಕೆಲಸ ನಡೆದಿದೆ. ದೇಶದ ಅತಿದೊಡ್ಡ ಹವಾನಿಯಂತ್ರಿತ
ಕಾಂಕರ್ಸ್ ಒಳಗೊಂಡ ರೈಲ್ವೆ ಟರ್ಮಿನಲ್ ಇದಾಗಿದೆ. ಏಳು ಪ್ಲಾಟ್ ಫಾರಂಗಳು ಇದರಲ್ಲಿ ಬರಲಿದ್ದು, ಪ್ರತಿ ಪ್ಲಾಟ್‌ಫಾರಂ 15 ಮೀ. ಅಗಳ ಮತ್ತು 600 ಮೀ. ಉದ್ದ ಇವೆ. ಎರಡು ಸಬ್‌ವೇಗಳು ಮತ್ತು ಎತ್ತರಿಸಿದ ಪಾದಚಾರಿ ಮಾರ್ಗಗಳೂ ಇವೆ. ಡಿಜಿಟಲ್ ನಾಮಫಲಕಗಳು ಹಾಗೂ ಗರಿಷ್ಠ ಮೊಬೈಲ್ ಚಾರ್ಜಿಂಗ್ ಪಾಡ್‌ಗಳನ್ನು ಅಳವಡಿ ಸಲಾಗಿದೆ. ಟರ್ಮಿನಲ್ ಹೊರಗಿನ ವಿನ್ಯಾಸ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೋಲುವಂತಿದೆ. ಪಿಟ್ ಲೈನ್ ಮತ್ತು ಬೋಗಿಗಳ ನಿರ್ವಹಣೆಗೂ ವ್ಯವಸ್ಥೆ ಇಲ್ಲಿದೆ.
ಹಲವು ಬಾರಿ ಗಡುವು ಉಲ್ಲಂಘನೆ: 2015-16ರಲ್ಲಿ ಮಂಜೂರಾದ ಈ ಯೋಜನೆಯು ಈಗಾಗಲೇ ಹಲವು ಗಡುವುಗಳನ್ನು ಮೀರಿದೆ. 2019ರ ಆಗಸ್ಟ್‌ನಲ್ಲಿ ಖುದ್ದು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಈ ವೇಳೆ 2020ರ ಮಾರ್ಚ್ ಗಡುವು ನೀಡಿದ್ದರು. ತದನಂತರ ದೀಪಾವಳಿಗೆ ಉದ್ಘಾಟಿಸಲು ಉದ್ದೇಶಿಸಲಾಗಿತ್ತು. ಆದರೆ, ಕೊರೊನಾ ಹಾವಳಿ ಸೇರಿದಂತೆ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತು. ನಗರದ ಹೃದಯಭಾಗವಾಗಿದ್ದರೂ, ಎಲ್ಲ ರೈಲುಗಳು ಕಾರ್ಯಾಚರಣೆ ಆರಂಭಿಸುವುದು ಇದೇ ಬೈಯಪ್ಪನಹಳ್ಳಿಯಿಂದ. ಈ
ನಿಟ್ಟಿನಲ್ಲಿ 3ನೇ ಕೋಚಿಂಗ್ ಟರ್ಮಿನಲ್ ತುಂಬಾ ಮುಖ್ಯವಾಗಿದೆ.
ಅಂತಾರಾಜ್ಯ ಸಂಪರ್ಕ: ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಹೈದರಾಬಾದ್ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾನಾ ಭಾಗಗಳಿಗೆ ರೈಲುಗಳ ನಿರ್ಗಮನ ಮತ್ತು ಆಗಮನ ಆಗಲಿವೆ. ಪ್ರಸ್ತುತ ವ್ಯವಸ್ಥೆಯಲ್ಲಿ ಮೆಜೆಸ್ಟಿಕ್‌ನ ಕೆಎಸ್‌ಆರ್ (ಸಿಟಿ ರೈಲು ನಿಲ್ದಾಣ) ಅಥವಾ ಯಶವಂತಪುರದಿಂದ ಆಗಮನ-ನಿರ್ಗಮನ ಮಾಡುತ್ತಿವೆ. ಇದರಿಂದ ಪ್ಲಾಟ್‌ಫಾರಂಗಳ ಲಭ್ಯತೆ ಸಮರ್ಪಕವಾಗಿ ಇಲ್ಲದ್ದರಿಂದ ಸಮಸ್ಯೆ ಆಗುತ್ತಿತ್ತು. ಉಪನಗರ ರೈಲುಗಳು ಕಾರ್ಯಾಚರಣೆ ಜತೆಗೆ ಮೈಸೂರು, ಮಂಗಳೂರು ಮತ್ತಿತರ ಮಾರ್ಗಗಳಿಗೂ ಕಾರ್ಯಾಚರಣೆ ಮಾಡಲಿವೆ. ಆದರೆ, ಕರ್ನಾಟಕದ ವಿವಿಧ ಭಾಗಗಳಿಗೆ ಈ ಟರ್ಮಿನಲ್‌ನಿಂದ ರೈಲುಗಳ ಕಾರ್ಯಾಚರಣೆ ಮಾಡಲು ಆದ್ಯತೆ ನೀಡಬೇಕು ಎನ್ನುವುದು ಜನರ ಒತ್ತಾಯ.
ಮೇಲ್ಸೇತುವೆ ಇಲ್ಲದಿದ್ರೆ ಅಪೂರ್ಣ!
ಪ್ರಸ್ತುತ ಈ ಹೊಸ ಟರ್ಮಿನಲ್ ತಲುಪಲು ಕಸ್ತೂರಿನಗರ, ಕಲ್ಯಾಣನಗರ, ಬಾಣಸವಾಡಿ ಮೂಲಕ ಜನ ಹೋಗಬೇಕಾಗುತ್ತದೆ. ಇದರಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಈ ಹಿನ್ನೆಲೆಯಲ್ಲಿ ಹಳೆಯ ಮದ್ರಾಸ್ ರಸ್ತೆಯಿಂದ ಟರ್ಮಿನಲ್ ನಡುವೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಈ ಕಾರ್ಯ ಪ್ರಗತಿಯಲ್ಲಿದ್ದು, ತ್ವರಿತ ಗತಿಯಲ್ಲಿ ಪೂರ್ಣಗೊಂಡರೆ ಅನುಕೂಲ ಆಗುತ್ತದೆ ಎಂದು ನಗರ ರೈಲು ತಜ್ಞ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.