Byndoor ಕುಸಿಯುತ್ತಿರುವ ಸೋಮೇಶ್ವರ ಗುಡ್ಡ ಸ್ಥಳಕ್ಕೆ ಭೇಟಿ

ಉದಯವಾಣಿ ವರದಿ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು

Team Udayavani, Jul 17, 2024, 11:51 PM IST

Byndoor ಕುಸಿಯುತ್ತಿರುವ ಸೋಮೇಶ್ವರ ಗುಡ್ಡ ಸ್ಥಳಕ್ಕೆ ಭೇಟಿ

ಬೈಂದೂರು: ಹಲವು ದಿನದಿಂದ ಸುರಿಯುತ್ತಿರುವ ಮಳೆಗೆ ಬೈಂದೂರಿನ ಪಡುವರಿ ಗ್ರಾಮದ ಸೋಮೇಶ್ವರ ಗುಡ್ಡ ಕುಸಿಯುತ್ತಿರುವ ಬಗ್ಗೆ ಉದಯವಾಣಿ ಜು. 17ರಂದು ವರದಿ ಪ್ರಕಟಿಸಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಬುಧವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ವ್ಯಕ್ತಿಯೊಬ್ಬರು ರಸ್ತೆ ನಿರ್ಮಿಸಿದ ಪರಿಣಾಮ ಇಲ್ಲಿನ ಸೋಮೇಶ್ವರ ಗುಡ್ಡದಿಂದ ಅಪಾರ ಪ್ರಮಾಣದ ಮಣ್ಣು ರಸ್ತೆಗೆ ಬೀಳುತ್ತಿದೆ. ಈ ಮಣ್ಣು ಚರಂಡಿ ಹಾಗೂ ಸೋಮೇಶ್ವರ ದೊಂಬೆ ರಸ್ತೆಗೆ ನೀರಿನೊಂದಿಗೆ ಸಾಗುತ್ತಿದ್ದು, ಯಾವುದೇ ಕ್ಷಣದಲ್ಲೂ ಇಲಿಲ ಕುಸಿತವಾಗುವ ಸಾಧ್ಯತೆ ಇದೆ. ಒಂದೊಮ್ಮೆ ಕುಸಿದರೆ ಬಾರಿ ಅಪಾಯ ಉಂಟಾಗುವ ಸಾದ್ಯತೆ ಇದೆ.

ಇಲ್ಲಿನ ಅಪಾಯ ಸಾಧ್ಯತೆ ಬಗ್ಗೆ ಬೈಂದೂರು ಪಟ್ಟಣ ಪಂಚಾಯತ್‌ ಆಡಳಿತ ಗಮನಹರಿಸಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಸ್ಥಳೀಯರ ಆಕ್ರೋಶ
ಜನಸಾಮಾನ್ಯರಿಗೆ ಒಂದು ಸಣ್ಣ ಮನೆ ಕಟ್ಟಲು ನೂರು ದಾಖಲೆ ಕೇಳುವ ಅಧಿಕಾರಿಗಳು ಗುಡ್ಡ ಕೊರೆದು ರಸ್ತೆ ನಿರ್ಮಿಸಲು ಹೇಗೆ ಅನುಮತಿ ಹೇಗೆ ನೀಡಿದರು? ಮುಖ್ಯ ರಸ್ತೆಯಿಂದ ಕನಿಷ್ಠ 8 ಮೀಟರ್‌ ಅಂತರ ಇರಬೇಕೆಂಬ ನಿಯಮ ಇದೆ. ಆದರೆ ಈ ರಸ್ತೆ ನಿರ್ಮಾಣಕ್ಕೆ 3 ಮೀಟರ್‌ ಕೂಡ ಅಂತರ ಇಲ್ಲ. ಹಣವಂತರಿಗೊಂದು, ಜನಸಾಮಾನ್ಯರಿಗೆ ಇನ್ನೊಂದು ನ್ಯಾಯವೇ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳಿಗೆ ತರಾಟೆ
ಗುಡ್ಡ ಕುಸಿಯುತ್ತಿರುವ ಮಾಹಿತಿ ತಿಳಿದು ಕಂದಾಯ ಇಲಾಖೆ, ಪೊಲೀಸ್‌ ಸಹಿತ ಇತರ ಅಧಿಕಾರಿಗಳು ಸ್ಥಳಕ್ಕಾಮಿಸಿದರು. ಕುಸಿಯುವ ಭೀತಿ ಇರುವುದರಿಂದ ದೊಂಬೆ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲು ಮುಂದಾದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಈಗ ಮುಖ್ಯರಸ್ತೆ ಮುಚ್ಚಿದರೆ ಸಾರ್ವಜನಿಕರು ನಿತ್ಯ ಸುತ್ತು ಬಳಸಿ ಬರಲು ಸಾಧ್ಯವಿಲ್ಲ. ಮೊದಲು ಗುಡ್ಡ ಕೊರೆದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಸ್ಥಳೀಯರನ್ನು ಸಮಾಧಾನಪಡಿಸಿದ ಬಳಿಕ ಬ್ಯಾರಿಕೇಡ್‌ ಹಾಗೂ ಎಚ್ಚರಿಕೆ ಫಲಕ ಅಳವಡಿಸಿ ದೊಂಬೆ ರಸ್ತೆಯಲ್ಲಿ ಸಂಚಾರ ಸ್ಥಗಿತ ಮಾಡಲಾಗಿದೆ.

ಪ್ರಕರಣ ದಾಖಲಿಸುತ್ತೇವೆ
ಈ ಕುರಿತು ಪ್ರತಿಕ್ರಿಯಿಸಿದ ಪ.ಪಂ. ಅಧಿಕಾರಿ ಅಜಯ್‌ ಭಂಡಾರ್‌ಕರ್‌ ಅವರು, ಈ ಬಗ್ಗೆ ಪರಿಶೀಲಿಸಿ, ಯಾರಿಂದಾದರೂ ತಪ್ಪಾಗಿದ್ದರೆ ಪ್ರಕರಣ ದಾಖಲಿಸಿಕೊಂಡು ಅನುಮತಿ ರದ್ದುಪಡಿಸುವುದಾಗಿ ತಿಳಿಸಿದರು.

ಸ್ಥಳಕ್ಕೆ ಬೈಂದೂರು ತಹಶೀಲ್ದಾರ್‌ ಪ್ರದೀಪ್‌ ಆರ್‌., ಕಂದಾಯ ಇಲಾಖೆಯ ಪ್ರಥಮ ದರ್ಜೆ ನಿರೀಕ್ಷಕ ದೀಪಕ್‌, ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್‌, ಉಪ ವಲಯ ಅರಣ್ಯಾಧಿಕಾರಿ ಹರ್ಷ ವಿ., ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್‌, ಠಾಣಾಧಿಕಾರಿ ತಿಮ್ಮೇಶ್‌ ಬಿ.ಎನ್‌., ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಅಜಯ್‌ ಭಂಡಾರ್‌ಕರ್‌, ಕಿರಿಯ ಆರೋಗ್ಯ ನಿರೀಕ್ಷಕ ಸತೀಶ್‌ ಆರ್‌.ಚಂದನ್‌, ಗಸ್ತು ಅರಣ್ಯ ಪಾಲಕರಾದ ಶಂಕರ ಡಿ.ಎಲ್‌., ಮಂಜುನಾಥ ನಾಯ್ಕ ಮೊದಲಾದವರು ಭೇಟಿ ನೀಡಿದರು.

ಗುಡ್ಡ ಕುಸಿದರೆ ಅಧಿಕಾರಿಗಳೇ ಹೊಣೆ: ಗಂಟಿಹೊಳೆ
ಉಪ್ಪುಂದ: ಬೈಂದೂರಿನ ಪಡುವರಿಯ ಸೋಮೇಶ್ವರ ಬೀಚ್‌ಗೆ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಈ ಸಂಬಂಧ ಅಗತ್ಯ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮಳೆಗೆ ಗುಡ್ಡ ಕುಸಿದರೆ ಅದಕ್ಕೆ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ತತ್‌ಕ್ಷಣವೇ ತುರ್ತು ಕಾಮಗಾರಿ ನಡೆಸಬೇಕು ಎಂದು ಶಾಸಕ ಗುರುರಾಜ್‌ ಗಂಟಿಹೊಳೆ ಸೂಚಿಸಿದ್ದಾರೆ.

ಟಾಪ್ ನ್ಯೂಸ್

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Gangolli: Disgusted person commits suicide

Gangolli: ಜುಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು

Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udupi: ‘ಕಲ್ಜಿಗ’ ಸಿನೆಮಾ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ

Udupi: ‘ಕಲ್ಜಿಗ’ ಸಿನೆಮಾದಲ್ಲಿ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.