ವಾಲಿಬಾಲ್: ಜಿಲ್ಲಾಮಟ್ಟದಲ್ಲೂ ಜಯ ಸಾಧಿಸಿದ ಕಾಡುಕುಡಿಗಳು
ದೈಹಿಕ ಶಿಕ್ಷಕರಿಲ್ಲದೆಯೇ ನಾಗಾಪುರ ಆಶ್ರಮ ಶಾಲಾ ಆದಿವಾಸಿ ಮಕ್ಕಳ ಸಾಧನೆ
Team Udayavani, Sep 26, 2022, 9:23 PM IST
ಹುಣಸೂರು: ತಾಲೂಕು ಮಟ್ಟದ ವಾಲಿಬಾಲ್‌ನಲ್ಲಿ ಮಿಂಚಿದ್ದ ತಾಲೂಕಿನ ನಾಗಾಪುಯರ ಗಿರಿಜನ ಪುನರ್ವಸತಿ ಕೇಂದ್ರದ ಆಶ್ರಮ ಶಾಲೆಯ ಕಾಡುಕುಡಿಗಳು ಜಿಲ್ಲಾಮಟ್ಟದಲ್ಲೂ ವಿಜಯದುಂದುಬಿ ಬಾರಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಮೈಸೂರಿನ ಬೃಂದಾವನಾ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ಮೈಸೂರು ಜಿಲ್ಲಾಮಟ್ಟದ ಅಂತಿಮ ಪಂದ್ಯಾವಳಿಯಲ್ಲಿ ಗುಂಗ್ರಾಲ್‌ಛತ್ರದ ಬಿಜಿಎಸ್ ವಿದ್ಯಾ ಸಂಸ್ಥೆ ವಿರುದ್ದ ೨-೦ ನೇರ ಸೆಟ್‌ಗಳ ಜಯದ ಮೂಲಕ ಪ್ರಥಮ ಸ್ಥಾನ ಗಿಟ್ಟಿಸಿದರು.
ಇದಕ್ಕೂ ಮುನ್ನ ನಡೆದ ಪಂದ್ಯಾಟದಲ್ಲಿ ಸರಗೂರು ಶಾಲೆ ಹಾಗೂ ಕೆ.ಆರ್.ನಗರ ತಂಡದ ವಿರುದ್ದವೂ ೨-೦ ನೇರಸೆಟ್ ಮೂಲಕ ಜಯಭೇರಿ ಬಾರಿಸಿದ ಈ ಮಕ್ಕಳ ಆಕರ್ಷಕ ಹೊಡೆತದ ಆಟವನ್ನು ಕಣ್ತುಂಬಿಕೊಂಡ ಕ್ರೀಡಾಸಕ್ತರು ಈ ಆದಿವಾಸಿ ಮಕ್ಕಳನ್ನು ಕ್ರೀಡಾಂಗಣದಲ್ಲಿ ಪ್ರೋತ್ಸಾಹಿಸಿ ಅಭಿನಂದಿಸಿದರು.
ದೈಹಿಕ ಶಿಕ್ಷಕರಿಲ್ಲದ ನಾಗಾಪುರ ಗಿರಿಜನ ಆಶ್ರಮ ಶಾಲೆಯ ಮಕ್ಕಳು ಇತರೆ ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿತು, ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ವಿಜಯಿಗಳಾಗಿ ಇದೀಗ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಈ ಕಾಡು ಕುಡಿಗಳ ಅಮೋಘ ಸಾಧನೆಯನ್ನು ಪರಿಗಣಿಸಿ ಶೀರ್ಘರವೇ ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗುವುದೆಂದು ಬಿಇಓ ರೇವಣ್ಣ ಉದಯವಾಣಿಗೆ ತಿಳಿಸಿದರು.
ಶಾಸಕರ ಅಭಿನಂದನೆ
ಆದಿವಾಸಿ ಮಕ್ಕಳ ಸಾಧನೆಯನ್ನು ಕೊಂಡಾಡಿರುವ ಶಾಸಕ ಎಚ್.ಪಿ.ಮಂಜುನಾಥ್, ಬಿಇಓ ರೇವಣ್ಣ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್, ತಾಲೂಕು ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು, ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ್ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.