ದೇಶದ ಉಳಿವಿಗಾಗಿ ಕಾಂಗ್ರೆಸ್‌ ಗೆ ಮತ ನೀಡಿ: ಮಾಜಿ ಸಿಎಂ ಸಿದ್ದರಾಮಯ್ಯ

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲ್ಲು ಸಾಧ್ಯವಾಗದ ಜೆಡಿಎಸ್‌ನವರು ದೇಶವನ್ನು ಯಾವ ರೀತಿ ಉಳಿಸಿ ಕೊಳ್ಳುತ್ತಾರೆ

Team Udayavani, May 30, 2022, 6:04 PM IST

ದೇಶದ ಉಳಿವಿಗೆ ಕಾಂಗ್ರೆಸ್‌ ಗೆ ಮತ ನೀಡಿ: ಮಾಜಿ ಸಿಎಂ ಸಿದ್ದರಾಮಯ್ಯ

ಚನ್ನರಾಯಪಟ್ಟಣ: ರಾಜ್ಯದಲ್ಲಿ ಕೋಮುವಾದ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಬೆರಳೆಣಿಕೆಯಷ್ಟು ಮಂದಿ ಶಾಸಕರನ್ನು ಹೊಂದಿದ್ದ ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ಕೊಟ್ಟರು ಆಡಳಿತ ಮಾಡಲಾಗಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.

ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದದರು, ಕುಮಾರ ಸ್ವಾಮಿಗೆ ಕೊಟ್ಟ ಕುದುರೆಯನ್ನು ಏರಲಾಗದವರು ವೀರರೂ ಅಲ್ಲ ಶೂರರೂ ಅಲ್ಲ ಎಂಬತಾಗಿದೆ. 80 ಶಾಸಕರನ್ನು ಹೊಂದಿದ್ದರು ಅವರನ್ನು ಮುಖ್ಯಮಂತ್ರಿ ಮಾಡಿದೆವು. ಅವರಿಗೆ ಉತ್ತಮ ಆಡಳಿತ ಮಾಡಲಾಗದೆ ಮೈತ್ರಿ ಸರ್ಕಾರ ಪತನಗೊಳಿಸಿದರು ಎಂದು ಕಿಡಿಕಾರಿದರು.

ಶಾಸಕರ ವಿಶ್ವಾಸ ಗಳಿಸಲಿಲ್ಲ: ಕುಮಾರಸ್ವಾಮಿ ಸರ್ಕಾರ ರಚನೆಗೆ ಸಹಕಾರ ನೀಡಿದ ಎಲ್ಲ ಶಾಸಕರನ್ನು ಸಮನಾಗಿ ತೆಗೆದುಕೊಂಡು ಹೋಗಿದ್ದರೆ ಪಕ್ಷಾಂತರ ಆಗುತ್ತಿರಲಿಲ್ಲ. ಸರ್ಕಾರ ಬೀಳುತ್ತಿರಲಿಲ್ಲ. ಜೆಡಿಎಸ್‌ ಪಕ್ಷ 30 ರಿಂದ 40 ಶಾಸಕರೊಂದಿಗೆ ಸಭೆ ಮಾಡುವ ಅಭ್ಯಾಸ ಮೈತ್ರಿ ಸರ್ಕಾರ ರಚನೆಯಾದ ಮೇಲೂ ಅದೇ ರೀತಿ ಮಾಡುತ್ತಿದ್ದರು. ಇದರಿಂದ ಸರ್ಕಾರ ಹೆಚ್ಚು ದಿವಸ ಉಳಿಯಲಿಲ್ಲ ಎಂದರು.

ದೇಶದ ಉಳಿವಿಗೆ ಕೈಗೆ ಮತ ನೀಡಿ: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲ್ಲು ಸಾಧ್ಯವಾಗದ ಜೆಡಿಎಸ್‌ನವರು ದೇಶವನ್ನು ಯಾವ ರೀತಿ ಉಳಿಸಿ ಕೊಳ್ಳುತ್ತಾರೆ? ಬಿಜೆಪಿಯವರು ದೇಶದ ಸರ್ಕಾರಿ ಇಲಾಖೆಯಲ್ಲಿ ಖಾಸಗೀಕರಣ ಮಾಡುವ ಮೂಲಕ ಮಾರಾಟ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಈ ದೇಶ ಉಳಿಯಬೇಕೆಂದರೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಜನತೆ ಮನಸ್ಸು ಮಾಡಬೇಕು ಎಂದರು.

ಏತನೀರಾವರಿ 350 ಕೋಟಿ: ಚನ್ನರಾಯಪಟ್ಟಣ ತಾಲೂಕಿನ ಏತನೀರಾವರಿ ಯೋಜನೆ ನಾನು ಮುಖ್ಯ ಮಂತ್ರಿಯಾಗಿದ್ದಾಗ 350 ಕೋಟಿ ಹಣ ನೀಡಿದ್ದೆ. ಆದರೆ, ಇಲ್ಲಿನ ಜೆಡಿಎಸ್‌ ಶಾಸಕ ತಮ್ಮ ಕೊಡುಗೆ ಎಂದು ಹೇಳುತ್ತಿದ್ದಾರೆ. ನೀರಾ ವರಿ ಯೋಜನೆಗೆ ಯಾವ ಸರ್ಕಾರ ಹಣ ನೀಡಿತು ಎನ್ನು ವುದನ್ನು ಅರಸೀಕೆರೆ ಶಾಸಕ ಶಿವಲಿಂಗೇಗೌಡರನ್ನು ಕೇಳಿ ಎಂದರು.

ಸಾಲ ಮಾಡುತ್ತಿರುವ ಮೋದಿ: ಮನಮೋಹನ ಸಿಂಗ್‌ ಪ್ರಧಾನ ಮಂತ್ರಿಯಾಗಿದ್ದಾಗ ದೇಶದ ಸಾಲ 53 ಲಕ್ಷ ಕೋಟಿ ಇತ್ತು, ಮೋದಿ ಪ್ರಧಾನಿಯಾದ ಮೇಲೆ 155 ಲಕ್ಷ ಕೋಟಿಗೆ ಸಾಲವಾಗಿದೆ. ದೇಶದ ಪ್ರತಿಯೊಬ್ಬ 1.68 ಲಕ್ಷ ಸಾಲಗಾರರನ್ನಾಗಿ ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ.

ವಿಧಾನಸೌಧದ ಗೋಡೆಗಳು ಲಂಚಾ ಎನ್ನುತ್ತಿವೆ: ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಮಾಡುವಾಗ ವಿಧಾನಸೌಧದದ ಗೋಡೆಗಳು ಲಂಚ, ಲಂಚ ಎನ್ನುತ್ತಿತ್ತು. ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ ಪರೀಕ್ಷೆ ಬರೆಯಲು ಲಂಚ, ಸಹಪ್ರದ್ಯಾಪಕರ ಹುದ್ದಗೆ ಪರೀಕ್ಷೆ ಬರೆಯಲು ಲಂಚ ಇನ್ನು ಸರ್ಕಾರಿ ಇಲಾಖೆ ಅಧಿಕಾರಿಗಳು ವರ್ಗಾವಣೆಗೂ ಲಂಚವನ್ನು ಜಾರಿ ಮಾಡಿದ್ದಾರೆ. ಪಿಎಸ್‌ಐ ಪರೀಕ್ಷೆಯಲ್ಲಿ ಮುಖ್ಯ ಮಂತ್ರಿ, ಸಂಬಂಧಪಟ್ಟ ಸಚಿವ ಹಾಗೂ ಪೊಲೀಸ್‌ ಅಧಿಕಾರಿಗಳಿಗೂ ಲಂಚ ಹೋಗಿದೆ. ಇಂತಹ ಭ್ರಷ್ಟ ಸರ್ಕಾರ ಕಿತ್ತು ಹಾಕುವ ತಾಕತ್ತು ನಿಮ್ಮ ಕೈಲಿದೆ. ನೀವು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತನ್ನಿ ಲಂಚ ಮುಕ್ತ ಅಧಿಕಾರ ಮಾಡುತ್ತೇವೆ ಎಂದರು.

ಪದವೀಧರ ಕ್ಷೇತ್ರದ ಅಭ್ಯರ್ಥಿ ಮಧು ಜಿ. ಮಾದೇಗೌಡ, ದೃವನಾರಾಯಣ್‌, ಮಾಜಿ ಸಚಿವ ಬಿ.ಶಿವರಾಮ್‌, ಚಲುವರಾಯಸ್ವಾಮಿ, ಮಾಜಿ ಎಂಎಲ್ಸಿ ಗೋಪಾಸ್ವಾಮಿ, ಎಚ್‌.ಕೆ.ಮಹೇಶ್‌, ಮಂಜೇಗೌಡ, ಮಂಜುನಾಥ್‌ ಮೊದಲಾದವರಿದ್ದರು.

ಹಾಸನ ಜಿಲ್ಲೆಗೆ ಹಿಡಿದಿರುವ ಜೆಡಿಎಸ್‌ ಭೂತ ಬಿಡಿಸುತ್ತೇನೆ
ರಾಜ್ಯದಲ್ಲಿ ಯಾವುದೇ ಜಿಲ್ಲೆಗೆ ಇಲ್ಲದ ಭೂತ ಹಾಸನ ಜಿಲ್ಲೆಗೆ ಹಿಡಿದಿದೆ. ಅದು ಜೆಡಿಎಸ್‌ ಭೂತ. ಇದನ್ನು ಬಿಡಿಸುವ ಶಕ್ತಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ತುಂಬಬೇಕು. ಮುಂದಿನ ಚುನಾವಣೆಗೆ ಹಾಸನ ಜಿಲ್ಲೆಗೆ ಬರುತ್ತೇನೆ. ಜೆಡಿಎಸ್‌ ಭೂತವನ್ನು ಬಿಡಿಸುವುದಾಗಿ ಕಾಂಗ್ರೆಸ್‌ ಶಕ್ತಿ ಮಂತ್ರ ಜಪಿಸಿದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.