Telangana ದಲ್ಲಿ ಇಂದು ಮತದಾನ- 119 ಕ್ಷೇತ್ರಗಳಿಗೆ ಒಂದೇ ಹಂತದ ಹಕ್ಕು ಚಲಾವಣೆ
ಡಿ.3ಕ್ಕೆ ಎಣಿಕೆ
Team Udayavani, Nov 30, 2023, 7:00 AM IST
ಹೈದರಾಬಾದ್: ಪಂಚರಾಜ್ಯಗಳ ಪೈಕಿ ಕೊನೆಯ ರಾಜ್ಯ ತೆಲಂಗಾಣದಲ್ಲಿ ನ.30ರಂದು ಎಲ್ಲ 119 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅದಕ್ಕೆ ಬೇಕಾಗಿರುವ ಸಿದ್ಧತೆಗಳೂ ಪೂರ್ಣಗೊಂಡಿವೆ. ರಾಜ್ಯದ 3.6 ಕೋಟಿ ಮತದಾರರು 2,290 ಅಭ್ಯರ್ಥಿ ಗಳ ಭವಿಷ್ಯ ಬರೆಯಲಿದ್ದಾರೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಅವರ ಪುತ್ರ- ಸಚಿವ ಕೆ.ಟಿ. ರಾಮರಾವ್, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ರೇವಂತ್ ರೆಡ್ಡಿ, ಬಿಜೆಪಿಯ ಲೋಕಸಭಾ ಸದಸ್ಯ ಬಂಡಿ ಸಂಜಯ ಕುಮಾರ್ ಮತ್ತು ಡಿ.ಅರವಿಂದ ಪ್ರಮುಖರು ಕಣದಲ್ಲಿದ್ದಾರೆ. ಆಡಳಿತಾರೂಢ ಬಿಆರ್‌ಎಸ್ 119 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ಮತ್ತು ಚಿತ್ರನಟ ಪವನ್ ಕಲ್ಯಾಣ್‌ರ ಜನಸೇನಾ ಕ್ರಮವಾಗಿ 111 ಮತ್ತು 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ 118ರಲ್ಲಿ ಸ್ಪರ್ಧಿಸಿ, ಸಿಪಿಐಗೆ 1 ಸ್ಥಾನ ಬಿಟ್ಟುಕೊಟ್ಟಿದೆ.
ಸತತ 3ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಆರ್‌ಎಸ್ ಪ್ರಯತ್ನ ಮಾಡುತ್ತಿದ್ದರೆ, ಅದಕ್ಕೆ ತಡೆ ಯೊಡ್ಡಲು ಬಿಜೆಪಿ ಮತ್ತು ಕಾಂಗ್ರೆಸ್ ಮುಂದಾ ಗಿವೆ. ಸಿಎಂ ಕೆ. ಚಂದ್ರ ಶೇಖರ ರಾವ್ ಕಾಮ ರೆಡ್ಡಿ ಮತ್ತು ಗಜ್ವೆಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕಾಮ ರೆಡ್ಡಿ ಕ್ಷೇತ್ರದಿಂದ ಅವರಿಗೆದುರಾಗಿ ಟಿಪಿಸಿಸಿ ಅಧ್ಯಕ್ಷ ರೇವಂತ ರೆಡ್ಡಿ, ಗಜ್ವೆಲ್ ಕ್ಷೇತ್ರದಿಂದ ಬಿಜೆಪಿಯ ಎಟಾಲ ರಾಜೇಂದ್ರ ಸಡ್ಡು ಹೊಡೆದಿದ್ದಾರೆ. 2014ರಲ್ಲಿ ಅಸ್ತಿತ್ವಕ್ಕೆ ಬಂದಿರುವ ತೆಲಂಗಾಣಕ್ಕೆ ಇದು ಮೂರನೇ ವಿಧಾನಸಭೆ ಚುನಾವಣೆಯಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಬಿಆರ್‌ಎಸ್ ವತಿಯಿಂದ ನ. 28ರ ವರೆಗೆ ಬಿರುಸಿನ ಪ್ರಚಾರ, ವಾಗ್ಧಾಳಿಗಳೂ ನಡೆದಿದ್ದವು.
ತೆಲಂಗಾಣಕ್ಕೆ ಮತದಾನ ನಡೆಯುವ ಮೂಲಕ ಅ.9ರಿಂದ ಶುರುವಾಗಿದ್ದ ಪಂಚರಾಜ್ಯಗಳ ಚುನಾವಣ ಪ್ರಕ್ರಿಯೆ ಒಂದು ಹಂತಕ್ಕೆ ಮುಕ್ತಾಯಗೊಳ್ಳಲಿದೆ. ಡಿ. 3ರಂದು ಫಲಿತಾಂಶ ಪ್ರಕಟವಾಗಲಿದೆ. ಅದು ಎಪ್ರಿಲ್-ಮೇಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ವಿಶ್ಲೇಷಣೆ ನಡೆದಿದೆ.
ಸಿಎಎ ಜಾರಿ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ
ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಕೋಲ್ಕತಾದಲ್ಲಿ ಬುಧವಾರ ಬಿಜೆಪಿ ಪರ ಲೋಕಸಭೆ ಚುನಾವಣ ರ್ಯಾಲಿ ಉದ್ಘಾಟಿಸಿ ಮಾತನಾಡಿದ ಅವರು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ರಾಜಕೀಯ ಕಾರಣಗಳಿಗಾಗಿ ತಮ್ಮ ರಾಜ್ಯದಲ್ಲಿ ಸಿಎಎ ಜಾರಿ ಮಾಡುವುದನ್ನು ವಿರೋಧಿಸುತ್ತಿದ್ದಾರೆ. ಅವರು ಒಳನುಸುಳುಕೋರರಿಗೆ ಬೆಂಬಲ ನೀಡುತ್ತಿದ್ದಾರೆ. ಮಮತಾ ಬ್ಯಾನರ್ಜಿಯವರು ಲೋಕಸಭಾ ಸದಸ್ಯರಾಗಿದ್ದ ವೇಳೆ ಒಳನುಸುಳುವಿಕೆ ಹೆಚ್ಚಾಗುತ್ತಿರುವ ಬಗ್ಗೆ ಕೋಲಾಹಲ ಎಬ್ಬಿಸಿದ್ದರು. ಈಗ ಅವರು ಮೌನವಾಗಿದ್ದಾರೆ ಎಂದು ಅಮಿತ್ ಶಾ ಟೀಕಿಸಿದರು. ಅಸ್ಸಾಂ ಸರಕಾರ ಒಳನುಸುಳುವಿಕೆಯನ್ನು ತಡೆಗಟ್ಟಿ ಅದ್ಭುತ ಕೆಲಸ ಮಾಡಿದೆ. ಆದರೆ ಪಶ್ಚಿಮ ಬಂಗಾಲದಲ್ಲಿನ ಟಿಎಂಸಿ ಸರಕಾರ ಮತಬ್ಯಾಂಕ್ ದೃಷ್ಟಿಕೋನದಿಂದಾಗಿ ಅದಕ್ಕೆ ಬೆಂಬಲ ನೀಡಿ, ಸಿಎಎಗೆ ವಿರೋಧ ಮಾಡುತ್ತಿದೆ ಎಂದರು. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದಿತ್ತು.
ವಯನಾಡಿನಿಂದಲೇ ರಾಹುಲ್ ಸ್ಪರ್ಧೆ?
ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪೂರಕವಾಗಿ ಬುಧವಾರ ನಡೆದ ಬೆಳವಣಿಗೆಯಲ್ಲಿ ಹಾಲಿ ಕ್ಷೇತ್ರ ವಯನಾಡ್‌ನಿಂದಲೇ ಮತ್ತೆ ಕಣಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಮಾತನಾಡಿದ ಅವರು “ಕೇರಳದಲ್ಲಿರುವ ನನ್ನ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಮತ್ತೆ ಭೇಟಿಯಾಗಲು ಬರುವೆ. ಕೇರಳಕ್ಕೆ ಮತ್ತು ವಯನಾಡಿಗೆ ಪದೇಪದೆ ಭೇಟಿ ನೀಡುವುದರಿಂದ ಇದು ನನ್ನ ಮನೆ ಎಂದು ಭಾವಿಸುವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.