ನಾನು ಈ ತನಕ ಇಂತಹ ಕತ್ತಲೆಯ ದಿನಗಳನ್ನು ನೋಡೇ ಇಲ್ಲ
Team Udayavani, Apr 21, 2020, 4:45 PM IST
ಇದು ಲೆಬನಾನ್‌ನ 50 ವರ್ಷದ ತಾಯಿ ಒಬ್ಬರು ಹೇಳುವ ಮಾತು. ದಕ್ಷಿಣ ಬೈರುತ್‌ನಿಂದ ಮಧ್ಯಪ್ರಾಚ್ಯದ ಮಾಧ್ಯಮವೊಂದಕ್ಕೆ ಕರೆ ಮಾಡಿರುವ ಸೌಝನ್ ಎಂಬವರು ತಮ್ಮ ಅಸಾಯಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಈ ಉಪನಗರದಲ್ಲಿ ತಾನು ಮತ್ತು ಸಾವಿರಾರು ಲೆಬನಾನಿನ ಜನರು ಎದುರಿಸುತ್ತಿರುವ ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಈ ಕೋವಿಡ್-19 ಮತ್ತು ಲಾಕ್‌ಡೌನ್ ಯುದ್ಧದ ಪರಿಸ್ಥಿತಿಗಿಂತ ಕೆಟ್ಟದು ಎಂದಿದ್ದಾರೆ.
ಬಡತನ ಮತ್ತು ಆರೋಗ್ಯ ವ್ಯವಸ್ಥೆ ತಾಂಡವ
15 ವರ್ಷಗಳ ಕಾಲ ನಡೆದಿದ್ದ ಲೆಬನಾನ್‌ನಲ್ಲಿನ ನಾಗರಿಕ ಸಂಘರ್ಷಗಳು 1990ರಲ್ಲಿ ಕೊನೆಗೊಂಡಿತ್ತು. ಆ 15 ವರ್ಷಗಳಲ್ಲಿ ಕಾಣದ ಕಹಿ ದಿನಗಳನ್ನು ಈ ಕೋವಿಡ್ 19 ಪರಿಸ್ಥಿತಿ ಸೃಷ್ಟಿಸಿದೆ.ಯುದ್ಧ ಮತ್ತು ಬಳಿಕ ನಡೆದ ಭ್ರಷ್ಟಾಚಾರಗಳಿದ ದೇಶದ ಆರ್ಥಿಕತೆ ತತ್ತರಿಸಿತ್ತು. ಕ್ರಮೇಣ ರಾಷ್ಟ್ರ ಈ ಸಂಕಷ್ಟಗಳಿಂದ ಪಾರಾಗುತ್ತಿದೆ ಎನ್ನುತ್ತಿದ್ದಾಗಲೇ ಕೋವಿಡ್ ಬಡಿದಿದೆ. ಬಡತನ ಮತ್ತು ಆರೋಗ್ಯ ವ್ಯವಸ್ಥೆ ಆ ಪ್ರದೇಶಗಳಲ್ಲಿ ತಾಂಡವವಾಡುತ್ತಿದೆ.
ಹ್ಯೂಮನ್ ರೈಟ್ಸ್ ವಾಚ್ ವರದಿಯು ಲಕ್ಷಾಂತರ ಲೆಬನಾನಿನ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಎಚ್ಚರಿಸಿದೆ. ನೆರವು ಕಾರ್ಯಕ್ರಮವನ್ನು ಸ್ಥಾಪಿಸದೇ ಇದ್ದಲ್ಲಿ ಕ್ಷಾಮ ಆವರಿಸಬಹುದು ಎಂದು ಹೇಳಿದೆ. ಅಂತಾರಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈ ವರ್ಷ ಲೆಬನಾನ್‌ನ ಆರ್ಥಿಕತೆಯು ಶೇ. 12ರಷ್ಟು ಕುಗ್ಗುತ್ತದೆ ಎಂದಿದೆ.
ಸಾವಿರಾರು ಮಂದಿಗೆ ಉದ್ಯೋಗ ನಷ್ಟ
ಭ್ರಷ್ಟಾಚಾರ, ಮತ್ತು ನಾಗರಿಕ ಯುದ್ಧಗಳು ಲೆಬನಾನ್‌ನ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳಿದೆ. ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉಳಿದ ಕಾರ್ಮಿಕರ ವೇತನಗಳು ಅರ್ಧದಷ್ಟು ಕಡಿತಗೊಳಿಸಲಾಗಿದೆ. ಬ್ಯಾಂಕುಗಳೂ ಯುಎಸ್ ಡಾಲರ್‌ಗಳನ್ನು ನೀಡುತ್ತಿಲ್ಲ.
ರಾಜಕೀಯ-ಭ್ರಷ್ಟಾಚಾರ
ಒಂದೆಡೆ ಕೋವಿಡ್ ಜೀವಗಳನ್ನು ಹಿಂಡುತ್ತಿದ್ದರೆ, ಅತ್ತ ರಾಜಕೀಯ ಜೋರಾಗಿದೆ. ಕಡು ಬಡವರಿಗೆ ಸಹಾಯ ಮಾಡಲು ವಿಶ್ವ-ಬ್ಯಾಂಕ್ ಅಂಗಸಂಸ್ಥೆ ಯೋಜನೆಯೊಂದನ್ನು ರೂಪಿಸಿತ್ತು. ಇದರನ್ವಯ ಸುಮಾರು 1.50 ಲಕ್ಷ ಕುಟುಂಬಗಳು ತಮ್ಮ ಹೆಸರುಗಳನ್ನು ರಾಷ್ಟ್ರೀಯ ಬಡತನ ಗುರಿ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳಲಾಗಿತ್ತು. ಅವರಿಗೆ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ನಗದು ಪಾವತಿಸಲಾಗುತ್ತಿತ್ತು. ಆದರೆ ಈಗ ಅದು ದುರ್ಬಳಕೆಯಾಗುತ್ತಿದೆ.
ಪ್ರಧಾನ ಮಂತ್ರಿ ಹಸನ್ ಡಯಾಬ್ ಅವರು ಗುರುವಾರ ರಾಜಕೀಯ ಮತ್ತು ಚುನಾವಣೆಗಾಗಿ ಇವರನ್ನು ಬಳಸುವ ಸೂಚನೆ ನೀಡಿದೆ. ಅರ್ಹ ಬಡವರಿಗೆ ಅಗತ್ಯಗಳನ್ನು ನೀಗಿಸಲು ಧನ ಸಹಾಯ ಮಾಡುವ ಬದಲು, ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಈ ಯೋಜನೆಗೆ ಸೇರಿಸಿಕೊಂಡಿದೆ. ಇದರ ಪರಿಣಾಮವಾಗಿ 1 ಲಕ್ಷ ಕುಟುಂಬಗಳು ನಗದು ಪಾವತಿಗಳಿಂದ ಹೊರಬಿದ್ದಿವೆ ಎನ್ನಲಾಗುತ್ತಿದೆ.
ತಿನ್ನಲು ಆಹಾರ ಇಲ್ಲ, ಕುಡಿಯಲು ನೀರಿಲ್ಲ
ಈಗ ಜನರಿಗೆ ಕೋವಿಡ್ ಸೋಂಕಿನ ಭಯ ಒಂದೆಡೆಯಾದರೆ, ಅತ್ತ ಸರಕಾರ ನೀಡುತ್ತಿದ್ದ ಪ್ರೋತ್ಸಾಹಕ ಮೊತ್ತದಿಂದಲೂ ವಂಚಿತರಾಗಬೇಕಾದ ವಿಷಮ ಪರಿಸ್ಥಿತಿ. ತಿನ್ನಲು ಆಹಾರ ಇಲ್ಲ, ಕುಡಿಯಲು ನೀರಿಲ್ಲ. ಕೆಲಸ ಮಾಡಲು ಉತ್ಸಾಹವಿದ್ದರೂ ಉದ್ಯೋಗವಿಲ್ಲ. ಒಟ್ಟಿನಲ್ಲಿ ಲೆಬೆನಾನ್ ನ ಪರಿಸ್ಥಿತಿ ಯುದ್ಧದ ಕರಿನೆರಳಿನಿಂದ ಹೊರಬಂದಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.