6 ಕೋ. ಜನರು ಕಡು ಬಡತನದ ಕೂಪಕ್ಕೆ
Team Udayavani, May 21, 2020, 12:52 PM IST
ವಾಷಿಂಗ್ಟನ್: ಕೋವಿಡ್-19ರ ಪರಿಣಾಮವಾಗಿ ಜಾಗತಿಕ ಆರ್ಥಿಕತೆ ಪ್ರಸಕ್ತ ಸಾಲಿನಲ್ಲಿ ಶೇ. 5ರಷ್ಟು ಕುಸಿಯಲಿದೆ ಮತ್ತು ವಿಶ್ವಾದ್ಯಂತ 6 ಕೋಟಿ ಜನರು ಕಡು ಬಡತನಕ್ಕೆ ತಳ್ಳಲ್ಪಡಲಿದ್ದಾರೆ ಎಂದು ವಿಶ್ವ ಬ್ಕಾಂಕ್ ಎಚ್ಚರಿಸಿದೆ.
ಕೋವಿಡ್‌ನಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಹಾಗೂ ವ್ಯಾಪಾರವನ್ನು ಕಳಕೊಂಡಿದ್ದಾರೆ. ಬಡ ರಾಷ್ಟ್ರಗಳು ಇದರಿಂದ ಗರಿಷ್ಠ ಪೀಡಿತವಾಗಿವೆ. ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆ ಮೇಲೆ ಭಾರೀ ಒತ್ತಡ ಬಿದ್ದಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್‌ಪಾಸ್ ಹೇಳಿದ್ದಾರೆ.ನಮ್ಮ ಅಂದಾಜಿನ ಪ್ರಕಾರ 6 ಕೋಟಿಯಷ್ಟು ಮಂದಿ ಕಡು ಬಡವರಾಗಲಿದ್ದಾರೆ.
ಇದರಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನ ನಿಟ್ಟಿನಲ್ಲಿ ಸಾಧಿಸಲಾದ ಎಲ್ಲ ಪ್ರಗತಿ ಅಳಿದುಹೋಗಲಿದೆ. ಜಾಗತಿಕ ಅರ್ಥವ್ಯವಸ್ಥೆ ಹಲವು ವರ್ಷಗಳ ಕಾಲ ನರಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೋರ್ವ ದಿನಕ್ಕೆ 1.90 ಡಾಲರ್‌ಗಿಂತ ಕಡಿಮೆ ದುಡ್ಡಲ್ಲಿ ಜೀವಿಸುವುದನ್ನು ಕಡು ಬಡತನವೆಂದು ವಿಶ್ವ ಬ್ಯಾಂಕ್ ವ್ಯಾಖ್ಯಾನಿಸುತ್ತದೆ.
ವಿಶ್ವಬ್ಯಾಂಕ್ ಬಡರಾಷ್ಟ್ರಗಳಿಗೆ 160 ಶತಕೋಟಿ ಡಾಲರ್ ಅನುದಾನ ಹಾಗೂ ರಿಯಾಯಿತಿ ಬಡ್ಡಿದರದ ಸಾಲಗಳನ್ನು ಕೊಡಲು ಮುಂದಾಗಿದೆ. ವಿಶ್ವದ ಶೇ. 70ರಷ್ಟು ಜನಸಂಖ್ಯೆ ಹೊಂದಿರುವ 100 ರಾಷ್ಟ್ರಗಳಿಗೆ ಈಗಾಗಲೇ ತುರ್ತು ಹಣಕಾಸು ನೆರವು ನೀಡಲಾಗಿದೆ ಎಂದು ಮಲ್‌ಪಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.