ವಾಷಿಂಗ್ಟನ್‌: ಏರ್‌ಪೋರ್ಟ್‌ಗಳಿಗೆ ನವೀಕರಣ ಭಾಗ್ಯವಿಲ್ಲ!

Team Udayavani, Jun 11, 2020, 5:00 PM IST

ವಾಷಿಂಗ್ಟನ್‌: ಏರ್‌ಪೋರ್ಟ್‌ಗಳಿಗೆ ನವೀಕರಣ ಭಾಗ್ಯವಿಲ್ಲ!

ವಾಷಿಂಗ್ಟನ್‌: ಕೋವಿಡ್‌ನಿಂದಾಗಿ ವಿಮಾನಯಾನ ಸಂಸ್ಥೆಗಳು ಇನ್ನಿಲ್ಲದಂತೆ ನಷ್ಟ ಅನುಭವಿಸಿದ್ದು ಗೊತ್ತೇ ಇದೆ. ಇಷ್ಟು ಮಾತ್ರವಲ್ಲ ಜಗತ್ತಿನ ಪ್ರಮುಖ ವಿಮಾನ ನಿಲ್ದಾಣಗಳು ಈಗ ನವೀಕರಣವನ್ನೂ ಕಾಣದೆ ಇನ್ನಷ್ಟು ಮಂಕಾಗುವ ಸಾಧ್ಯತೆಯೂ ಇದೆ.

ಕೋವಿಡ್‌ ಸೋಂಕು ಹರಡುವ ಮುನ್ನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ರಿಪೇರಿ ಕಾಮಗಾರಿಗಳು, ಟರ್ಮಿನಲ್‌ ವಿಸ್ತರಣೆ, ಅನುಕೂಲಕರ ಒಳಾಂಗಣ ವಿಸ್ತರಣೆ ಇತ್ಯಾದಿಗಳಿಗೆ ಯೋಜಿಸಿದ್ದವು. ಆದರೆ ಕೋವಿಡ್‌ನಿಂದಾಗಿ ಪ್ರಯಾಣಿಕರ ಸಂಚಾರ ಸ್ಥಗಿತಗೊಂಡಿದ್ದರಿಂದ ವಿಮಾನ ನಿಲ್ದಾಣಗಳ ಪುನಶ್ಚೇತನಕ್ಕೆ ಗರಬಡಿದಿದೆ. ಅಲ್ಲದೇ ಸದ್ಯಕ್ಕೆ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಣ ವಿನಿಯೋಗಿಸುವುದು ಮತ್ತಷ್ಟು ನಷ್ಟಕ್ಕೆ ದಾರಿಯಾಗಬಹುದು ಎಂದು ಆತಂಕವಾಗಿದೆ.

ಅಮೆರಿದಲ್ಲೇ ಹಲವು ನಿಲ್ದಾಣಗಳ ಪುನಶ್ಚೇತನ ಕಾಮಗಾರಿಗಳ ಯೋಜನೆಯನ್ನು ನಿಲ್ಲಿಸಲಾಗಿದೆ. ಫ್ಲೋರಿಡಾದ ಓರ್ಲ್ಯಾಂಡೊ ನಿಲ್ದಾಣದಲ್ಲಿ ನಡೆಸಲುದ್ದೇಶಿಸಿದ ಟರ್ಮಿನಲ್‌ ರಿಪೇರಿ, ಸ್ಯಾನ್‌ಫ್ರಾನ್ಸಿಸ್ಕೋ ನಿಲ್ದಾಣದಲ್ಲಿ 7 ಸಾವಿರ ಕೋಟಿ ವೆಚ್ಚದಲ್ಲಿ ನಡೆಯಬೇಕಿದ್ದ ಕೆಲಸಗಳಿಗೆ ಗ್ರಹಣ ಬಡಿದಿದೆ. ಹಾಗೆಯೇ, ನ್ಯೂಜಿಲೆಂಡ್‌ನ‌ ಅಕ್ಲಾಂಡ್‌ ವಿಮಾನ ನಿಲ್ದಾಣ, ಮೆಕ್ಸಿಕೋದಲ್ಲಿನ ವಿಮಾನ ನಿಲ್ದಾಣ, ಸಿಡ್ನಿ ವಿಮಾನ ನಿಲ್ದಾಣ, ಜರ್ಮನಿಯ ಫ್ರಾಂಕ್‌ಫ‌ರ್ಟ್‌ ವಿಮಾನ ನಿಲ್ದಾಣದ ಕೆಲಸಗಳಿಗೂ ತಡೆ ಉಂಟಾಗಿದೆ.

ಸದ್ಯದ ಪರಿಸ್ಥಿತಿ ಪ್ರಕಾರ, ವಿಮಾನ ಯಾನ ಬೇಡಿಕೆ ಪಡೆಯಬೇಕಾದರೆ 2023ರವರೆಗೆ ಕಾಯಬೇಕಾಗಬಹುದು ಎಂದು ಹೇಳಲಾಗಿದೆ.
ಸಿಇಪಿಎ- ಸೆಂಟರ್‌ ಫಾರ್‌ ಏವಿಯೇಷನ್‌ ಪ್ರಕಾರ, 1.48 ಲಕ್ಷ ಕೋಟಿ ರೂ. ಗಳಿಗೆ ಮಿಕ್ಕಿ ಮೊತ್ತದ ಪುನಶ್ಚೇತನ ಕಾಮಗಾರಿಗಳು ಈ ವರ್ಷ ವಿಶ್ವದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪೂರ್ಣಗೊಳ್ಳಬೇಕಿದೆ. ಆದರೆ ಇಷ್ಟೊಂದು ವೆಚ್ಚ ಮಾಡಿದ್ದು ಮತ್ತೆ ಗಳಿಸಲು ಸಾಧ್ಯವಾಗಬಹುದೇ ಎಂಬುದರ ಬಗ್ಗೆ ಅನಿಶ್ಚಿತತೆ ಕಾಡಿದೆ. ವಿಮಾನ ನಿಲ್ದಾಣ ಪುನಶ್ಚೇತನ ಕಾಮಗಾರಿ ಸುದೀರ್ಘ‌ ಅವಧಿಯದ್ದು. ಸೂಕ್ತ ರೀತಿಯ ಪ್ಲ್ರಾನಿಂಗ್‌, ಅದರ ಕೆಲಸಗಳು, ಅಂತಿಮ ಹಂತದ ಕೆಲಸಗಳಿಗೆ ಬಹಳಷ್ಟು ಸಮಯ ತಗಲುತ್ತದೆ. ಆದ್ದರಿಂದ ಕೋವಿಡ್‌ ಮುಗಿದು ಪರಿಸ್ಥಿತಿ ತಿಳಿಯಾಗಬಹುದು ಎಂಬ ಆಶಾವಾದವೂ ಇದೆ ಎಂದು ಏವಿಯೇಷನ್‌ ಅಧಿಕಾರಿಯೊಬ್ಬರು ಹೇಳಿತ್ತಾರೆ.

ಕೆಲವು ವಿಮಾನ ನಿಲ್ದಾಣಗಳು ಈಗ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ವಿಮಾನ ನಿಲ್ದಾಣ ಸಿಬಂದಿಯ ವೇತನ ನೀಡಲೂ ಅವುಗಳ ಬಳಿ ಹಣವಿಲ್ಲ. ಇನ್ನು ಬಾಡಿಗೆ, ನಿರ್ವಹಣೆಗೂ ಹಣ ಬರುತ್ತಿಲ್ಲ. ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದೆರಡು ತಿಂಗಳು ಶೇ.50ರಷ್ಟು ಕಡಿಮೆಯಾಗಿದ್ದು, ಭವಿಷ್ಯದಲ್ಲೂ ಕಡಿಮೆ ಇರಬಹುದು ಎಂದು ಹೇಳಲಾಗಿದೆ. ಅಲ್ಲದೇ ವಿಮಾನ ನಿಲ್ದಾಣಗಳ ಆದಾಯದಲ್ಲಿ ಶೇ.56ರಷ್ಟು ಕುಸಿತ ಕಂಡುಬಂದಿದೆ ಎಂದು ಅಂ.ರಾ. ಏರ್‌ಪೋರ್ಟ್‌ ಕೌನ್ಸಿಲ್‌ ಅಸೋಸಿಯೇಷನ್‌ ಹೇಳಿದೆ. ಮತ್ತೆ ವಿಮಾನ ಯಾನ ಶುರುವಾದರೆ ವಿಮಾನ ನಿಲ್ದಾಣಗಳು ಚೇತರಿಸಿಕೊಳ್ಳುತ್ತವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅದನ್ನು ನಿರೀಕ್ಷಿಸುವುದೂ ಕಷ್ಟವಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಪ್ರತಿ ಪ್ರಯಾಣಿಕನ ಟಿಕೆಟ್‌ನಿಂದ ಪಡೆಯುವ ವಿಮಾನ ನಿಲ್ದಾಣ ಫೀಸು, ಪಾರ್ಕಿಂಗ್‌ ಚಾರ್ಜು, ಬಾಡಿಗೆ ಪಡೆಯುವುದು ವಿಮಾನ ನಿಲ್ದಾಣಗಳ ಆದಾಯದ ಮೂಲ. ಕೆಲವೇ ಕೆಲವು ಪ್ರಯಾಣಿಕರು ಬಂದರೆ ವಿಮಾನ ನಿಲ್ದಾಣಗಳಿಗೆ ಪ್ರಯೋಜನವಿಲ್ಲ. ಅಲ್ಲಿ ನಿರಂತರ ಜನರ ಓಡಾಟವಿದ್ದಾಗಲೇ ಪ್ರಯೋಜನಕಾರಿ. ಸದ್ಯ ವಿಶ್ವದ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲೇ ವಿಮಾನ ಟ್ರಾಫಿಕ್‌ ಶೇ.90ರಷ್ಟು ಕುಸಿತ ಕಂಡಿದೆ. ಇದರಿಂದ ವಿಮಾನ ನಿಲ್ದಾಣಗಳ ಆದಾಯಕ್ಕೆ ಇನ್ನಿಲ್ಲದಂತೆ ಪೆಟ್ಟು ಬಿದ್ದಿದೆ. ಇದನ್ನು ಸರಿಪಡಿಸಲು ಬಹಳಷ್ಟು ಸಮಯ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಲಿವೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.