ಸಂಸದ ಶಶಿತರೂರ್ ಸಂವಾದಕ್ಕೆ ಡಿಕ್ಷನರಿ ತಂದ ಪ್ರೇಕ್ಷಕ!
Team Udayavani, Feb 28, 2023, 7:35 AM IST
ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ಶಶಿತರೂರ್ ಅವರ ಇಂಗ್ಲಿಷ್ ಪಾಂಡಿತ್ಯ ಬಹುತೇಕ ಎಲ್ಲರಿಗೂ ತಿಳಿದೇ ಇದೆ. ಅಂತರ್ಜಾಲದ ಸರ್ಚ್ ಇಂಜಿನ್‌ಗಳಿಗೂ ಗೊತ್ತಿರದಂಥ ಇಂಗ್ಲಿಷ್ ಪದಗಳ ಶಬ್ದಕೋಶ ತರೂರ್‌ಗೆ ಕರಗತ.
ತರೂರ್ ಪದಪುಂಜವನ್ನು ಅರ್ಥೈಸಿಕೊಳ್ಳಲು ಡಿಕ್ಷನರಿಯೇ ಬೇಕು ಎಂದು ಹಲವರು ಛೇಡಿಸಿದ್ದೂ ಇದೆ. ಅದರಂತೆಯೇ ಪ್ರೇಕ್ಷಕರೊಬ್ಬರು ತರೂರ್ ಭಾಷಣಕ್ಕೆ ಡಿಕ್ಷನರಿ ಕೊಂಡೊಯ್ದಿದ್ದು, ಈ ವಿಚಾರ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಗಾಲ್ಯಾಂಡ್‌ನಲ್ಲಿ ಖ್ಯಾತ ನಿರೂಪಕ ಆರ್.ಲಂಗ್ಲೆಂಗ್ ಅವರ ನಿರೂಪಣೆಯಲ್ಲಿ ಸಂವಾದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಂಸದ ತರೂರ್, ರಾಜ್ಯದ ಯುವಜನರ ಜತೆಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ವ್ಯಕ್ತಿಯೊಬ್ಬರು ಡಿಕ್ಷನರಿ ತಂದಿದ್ದಾರೆ.
Someone in Nagaland literally brought Oxford Dictionary to my show to listen to Dr. @ShashiTharoor. 😅
Bringing Dictionary along was just a joke statement until I saw this. pic.twitter.com/Qiz3E2sv3i
— R Lungleng (@rlungleng) February 26, 2023
ಡಿಕ್ಷನರಿ ಫೋಟೋ ಹಂಚಿಕೊಂಡಿರುವ ಆರ್.ಲಂಗ್ಲೆಂಗ್, ಈವರೆಗೆ ಜನರು ತರೂರ್ ಅವರ ಪದಪುಂಜ ಅರ್ಥೈಸಿಕೊಳ್ಳಲು ಡಿಕ್ಷನರಿ ಬೇಕು ಎನ್ನುತ್ತಿದ್ದದ್ದು ತಮಾಷೆ ಎಂದುಕೊಂಡಿದ್ದೆ. ಈಗ ಈ ವಿಚಾರ ಸ್ಪಷ್ಟವಾಯಿತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
Ambedkar; ಅವಮಾನ ಖಂಡಿಸಿ ಕಾಂಗ್ರೆಸ್ ಆಂದೋಲನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.