ಸೂರ್ಯನಮಸ್ಕಾರ; ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ
ಹೆಚ್ಚು ಚುರುಕಾಗಿರಲು ಸಹಕಾರಿ. ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ.
Team Udayavani, Jan 15, 2021, 1:15 PM IST
ಬೇಗ ಮಲಗಿ, ಬೇಗ ಏಳುವ ಅಭ್ಯಾಸ ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬಹುತೇಕ ಕಾಯಿಲೆಗಳನ್ನು ಇದರಿಂದ
ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಅದರಲ್ಲೂ ಬೇಗನೆ ಎದ್ದು ಸೂರ್ಯನಮಸ್ಕಾರ ಮಾಡಿದರೆ ಹಲವು ಲಾಭಗಳಿವೆ. ಸೂರ್ಯ ನಮಸ್ಕಾರ 12 ಯೋಗ ಭಂಗಿಯಾಗಿದ್ದು, ಪ್ರತಿಯೊಂದು ಭಂಗಿಯೂ ಆರೋಗ್ಯಕ್ಕೆ ಸಾಕಷ್ಟು ಲಾಭ ತಂದುಕೊಡುವಂಥದ್ದಾಗಿದೆ.
ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ ತಲೆಯಿಂದ ಪಾದದವರೆಗೆ ಇಡೀ ದೇಹಕ್ಕೆ ಪ್ರಯೋಜನವಿದೆ. ಸೂರ್ಯ ನಮಸ್ಕಾರವು ದೇಹದಲ್ಲಿ
ರಕ್ತ ಪರಿಚಲನೆಯನ್ನು ಸುಧಾರಿಸುವುದು ಮಾತ್ರವಲ್ಲದೆ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿರಿಸುತ್ತದೆ. ಸೂರ್ಯ ನಮಸ್ಕಾರದಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮತ್ತು ನರ ಮಂಡಲವನ್ನು ಸುಧಾರಿಸುತ್ತದೆ.
ಮನಸ್ಸನ್ನು ಶಾಂತಗೊಳಿಸಿ ಆತಂಕವನ್ನು ನಿವಾರಿಸುತ್ತದೆ. ಇದರಿಂದ ಹೆಚ್ಚು ಚುರುಕಾಗಿರಲು ಸಹಕಾರಿ. ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಹೊಟ್ಟೆಯ ಕೊಬ್ಬನ್ನು ನಿವಾರಿಸಲು ಸಾಧ್ಯವಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಿ ಮುಖದ ಮೇಲೆ ಹೊಳಪು ತರುತ್ತದೆ. ಸುಕ್ಕು ಉಂಟಾಗದಂತೆ ತಡೆದು ಚರ್ಮ ಕಾಂತಿಯುತವಾಗಿರುವಂñ ಮಾಡುತ್ತದೆ. ಶ್ವಾಸಕೋಶಕ್ಕೆ ಶುದ್ಧ ಗಾಳಿ ಸಿಗುವುದರಿಂದ ರಕ್ತವು ಆಮ್ಲಜನಕ ಯುಕ್ತವಾಗಿರುತ್ತದೆ. ಇಂಗಾಲದ ಡೈ ಆಕ್ಸೆ„ಡ್ ಮತ್ತು ಇತರ ವಿಷಕಾರಿ ಅನಿಲಗಳನ್ನು ದೇಹದಿಂದ ಹೊರ ಹಾಕಲು ಈ ಆಸನ ಸಹಕಾರಿ.
ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಸ್ನಾಯು, ಕೀಲು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಹಿಗ್ಗಿಸಲು, ಬಲಪಡಿಸಲು ಇದು ಅತ್ಯುತ್ತಮ ಯೋಗ ಭಂಗಿಯಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಯೋಗ ಭಂಗಿ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಸುಸ್ಥಿತಿಯಲ್ಲಿಡಬಹುದು.
ಅನಿಯಮಿತ ಮುಟ್ಟಿನ ಚಕ್ರವನ್ನು ತೊಡೆದುಹಾಕುವ ಸೂರ್ಯನಮಸ್ಕಾರ ಸುಲಭ ಹೆರಿಗೆಗೂ ಸಹಾಯ ಮಾಡುತ್ತದೆ. ಸೂರ್ಯನಮಸ್ಕಾರದಿಂದ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ ಮಾತ್ರವಲ್ಲ, ಸಕಾರಾತ್ಮಕ ಭಾವನೆ ಬೆಳೆಸಲು ಸಹಕಾರಿಯಾಗಿದೆ.
ಯಾರು ಮಾಡಬಾರದು ರ್ಭಧಾರಣೆಯ ಮೂರನೇ ತಿಂಗಳ ಅನಂತರ ಸೂರ್ಯನಮಸ್ಕಾರವನ್ನು ಮಾಡಬಾರದು. ಅಂಡವಾಯು, ಅಧಿಕ ರಕ್ತದೊತ್ತಡವಿರುವವರು, ಬೆನ್ನುನೋವಿನಿಂದ ಬಳಲುತ್ತಿರುವವರು, ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಈ ಆಸನ ಮಾಡಬೇಕಾದರೆ ವೈದ್ಯರ ಸಲಹೆ ಪಡೆಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.