Karkala: ಕೆಲಸಗಾರ ಶಾಸಕ ಸುನಿಲ್ ಬೇಕು ಹೊರತು ಜಾತಿವಾದಿ ಶಾಸಕನಲ್ಲ – ವಿಕ್ರಮ್ ಹೆಗ್ಡೆ
ನೀರೆ ಬೈಲೂರು ಬಿಜೆಪಿ ಕಾರ್ಯಕರ್ತರ ಸಭೆ
Team Udayavani, Apr 26, 2023, 4:18 PM IST
ಕಾರ್ಕಳ: ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕಷ್ಟೇ ಒತ್ತು ನೀಡದೆ ಜನರ ನಾಡಿ ಮಿಡಿತ ಅರಿತು ಜನಸಾಮಾನ್ಯರ ಜೊತೆಗೆ ನಿಂತವರು. ಕಾರ್ಕಳ ಕ್ಷೇತ್ರಕ್ಕೆ ಇಂತಹ ಕೆಲಸಗಾರ ಶಾಸಕ ಬೇಕೆ ಹೊರತು ಜಾತಿವಾದಿ ಶಾಸಕ ಬೇಡ ಎಂದು ತಾ.ಪಂ ಮಾಜಿ ಅಧ್ಯಕ್ಷ ವಿಕ್ರಮ ಹೆಗ್ಡೆ ಹೇಳಿದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದ ನೀರೆ- ಬೈಲೂರು ಭಾಗದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾರ್ಕಳ ಕ್ಷೇತ್ರವನ್ನು ಕಳೆದ 5 ವರ್ಷದ ಅವಧಿಯಲ್ಲಿ ಅವರು ಪ್ರಗತಿಯ ಉತ್ತುಂಗ ಶಿಖರಕ್ಕೆ ಏರಿಸಿದ್ದಾರೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಅಂತರ್ಜಲದಂತಹ ಅಭಿವೃದ್ಧಿಗೆ ಒತ್ತು ನೀಡಿದಷ್ಟೇ ಅಲ್ಲ, ಪ್ರತಿ ಸಾಮಾನ್ಯನ ಸುಖ-ಕಷ್ಟಗಳಲ್ಲಿ ಅವರು 5 ವರ್ಷಗಳ ಪ್ರತಿ ದಿನವೂ ನಿಂತು ಕೆಲಸ ಮಾಡಿದವರು. ಎರಡೆರಡು ಖಾತೆಯ ಜವಾಬ್ದಾರಿ ಇದ್ದರೂ ಕ್ಷೇತ್ರದ ಜನರ ಸಮಸ್ಯೆಗೆ ಸಮಯ ಮೀಸಲಿಟ್ಟ ಇಂತಹ ಶಾಸಕರೇ ನಮಗೆ ಮುಂದೆಯೂ ಶಾಸಕನಾಗಿ ಇರಬೇಕು. ಜಾತಿ, ಮತ ಎನ್ನುವುದೆಲ್ಲ ಚುನಾವಣೆ ಸಂದರ್ಭ ಮಾತ್ರ ಬಳಕೆಯಾಗುತ್ತದೆ. ಆದರೆ ಸುನಿಲರವರು ಜಾತಿ-ಧರ್ಮದ ಆಧಾರದಲ್ಲಿ ಎಂದೂ ಜನರನ್ನು ಕಂಡವರಲ್ಲ. ಕೊರೊನಾ ಸಂದರ್ಭ, ಕ್ವಾರಂಟೈನ್ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆ ಕಲ್ಪಿಸಿ ಎಲ್ಲ ಸಮುದಾಯದ ರಕ್ಷಣೆ ನಿಂತದ್ದು ಬಿಜೆಪಿ ಪಕ್ಷ ಮತ್ತು ಇಲ್ಲಿನ ಶಾಸಕ, ಸಚಿವ ಸುನಿಲ್ ರವರು ಎಂದ ಅವರು ಕಾರ್ಕಳದಲ್ಲಿ 5 ವರುಷವೂ ಗಲಾಟೆ, ಗದ್ದಲಗಳಿಲ್ಲದೆ ಶಾಂತಿ ನೆಲೆಸಿರುವುದೆ ಅದಕ್ಕೆ ಸಾಕ್ಷಿ.
ಎಲ್ಲ ಜಾತಿ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ ಶಾಸಕರಿದ್ದರೆ ಅದು ಸುನಿಲ್ ಕುಮಾರ್. ಹಾಗಾಗಿ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುವ, ಎಲ್ಲ ಜಾತಿಯನ್ನು ಪ್ರೀತಿಸುವ ಶಾಸಕ ಸುನಿಲರನ್ನೆ ಮತ್ತೆ ಗೆಲ್ಲಿಸೋಣ. ಜಾತಿವಾದಿಗಳನ್ನು ದೂರವಿಡೋಣ ಎಂದರು. ಜಿ.ಪಂ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಮಾತನಾಡಿ ಬಿಜೆಪಿ ಒಂದು ಜಾತಿಗೆ ಮೀಸಲಿಟ್ಟ ಪಕ್ಷ ಅಲ್ಲ. ಎಲ್ಲರನ್ನು ಸಮಾನವಾಗಿ ಕಾಣುವ ಪಕ್ಷ. ಪಕ್ಷ ಸಿದ್ಧಾಂತದಂತೆ ನಡೆಯುವ ಸುನಿಲ್ ಕುಮಾರ್ ಅವರನ್ನು ಮತ್ತೊಮ್ನೆ ಶಾಸಕರಾಗಿ ಆರಿಸುವುದು ನಮ್ಮ ಕರ್ತವ್ಯ ಎಂದರು. ಪ್ರಮುಖರಾದ ರವೀಂದ್ರ ನಾಯಕ್, ಮಾಲಿನಿ ಶೆಟ್ಟಿ, ಜಗದೀಶ ಪೂಜಾರಿ, ಸಂತೋಷ್ ವಾಗ್ಲೆ, ಪ್ರಶಾಂತ್ ಶೆಟ್ಟಿ ಸಹಿತ ಹಲವು ಮಂದಿ ಗಣ್ಯರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಮತಯಾಚಿಸಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.