Politics: ಗ್ಯಾರಂಟಿ ಟೀಕೆಗಳಿಗೆ ತಲೆಕೆಡಿಸಿಕೊಳ್ಳೆವು: ಸಿಎಂ
Team Udayavani, Jan 13, 2024, 11:55 PM IST
ರಾಯಚೂರು: ನಮ್ಮ ಸರಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಟೀಕೆಗಳು ಬಂದವು. ಆದರೆ ಅದಕ್ಕೆಲ್ಲ ಕ್ಯಾರೇ ಎನ್ನುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದೇವದುರ್ಗ ತಾಲೂಕಿನ ತಿಂಥಣಿಯ ಕಾಗಿನೆಲೆ ಕನಕ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಹಾಲುಮತ ಸಾಂಸ್ಕೃತಿಕ ವೈಭವದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಶೋಷಿತ ವರ್ಗದ ಪರವಾಗಿದ್ದೇವೆ. ಜನರಿಗೆ ಖರೀದಿಸುವ ಶಕ್ತಿ ಬರಬೇಕೆಂಬ ಕಾರಣಕ್ಕೆ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.
ಜಾತಿ ಹೆಸರಲ್ಲಿ ವರ್ಗೀಕರಣ ಅಪಾಯ
ಇಂದಿಗೂ ಜಾತಿ ಹೆಸರಿನಲ್ಲಿ ವರ್ಗೀಕರಣ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅಂಥವರ ಬಗ್ಗೆ ಎಲ್ಲರೂ ಎಚ್ಚರಿಕೆ ಯಿಂದ ಇರಬೇಕು. ಈ ಜಾತಿ ವ್ಯವಸ್ಥೆಯನ್ನು ದೇವರು ಮಾಡಿದ್ದಲ್ಲ. ವಿದ್ಯಾವಂತರೇ ತಮ್ಮ ಸ್ವಾರ್ಥಕ್ಕಾಗಿ ಮೇಲು-ಕೀಳು ಎಂಬುದನ್ನೆಲ್ಲ ಸೃಷ್ಟಿಸಿದ್ದಾರೆ. ಜಾತಿಯನ್ನು ಸೃಷ್ಟಿಸಿದವರೇ ಇಂದು ಜಾತಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಹಿಂದುಳಿದ ಸಮಾಜಗಳು ಸಂಘಟನೆಗಾಗಿ ಒಗ್ಗೂಡಿದರೆ ಅದು ಜಾತಿ ಸಮಾವೇಶವಲ್ಲ ಎಂದು ಲೋಹಿಯಾ ಹೇಳಿದ್ದರು. ನೀವೆಲ್ಲ ಸಂವಿಧಾನ ಓದಬೇಕು. ಇತಿಹಾಸ ತಿಳಿದುಕೊಂಡವರು ಮಾತ್ರ ಭವಿಷ್ಯ ರೂಪಿಸಲು ಸಾಧ್ಯ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆದವರು ಮೇಲ್ಜಾತಿಯವ ರಾದರು. ಅನಕ್ಷರಸ್ಥರೇ ಕೆಳವರ್ಗ ದವರಾದರು. ಯಾರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರೋ ಅವರೇ ಶೂದ್ರರಾದರು. ಜಾತಿ ಹೆಸರಲ್ಲಿ ಸಮಾಜ ವಿಂಗಡಣೆ ಮಾಡಿದ್ದನ್ನು ನಾವು ಮರೆಯಬಾರದು. ಹಿಂದೆ ನಾವು ಏನಾಗಿದ್ದೆವು, ಇಂದು ಏನಾಗಿದ್ದೇವೆ, ಮುಂದೆ ಏನಾಗಬೇಕು ಎಂಬುದನ್ನು ತಿಳಿಯದ ಹೊರತು ಅಭಿವೃದ್ಧಿ ಹೊಂದುವುದು ಅಸಾಧ್ಯ. ಕುರುಬ ಸಮಾಜದವರು ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಒತ್ತು ಕೊಡ ಬೇಕು. ಸಂವಿಧಾನದಲ್ಲಿ ಎಲ್ಲರಿಗೂ ಶಿಕ್ಷಣ ಕಡ್ಡಾಯ ಎಂದಿದೆ ಎಂದರು.
ಪೂಜಾರಿಗಳಿಗೆ ಮಾಸಾಶನ ಪರಿಗಣನೆ
ಪೂಜಾರಿಗಳಿಗೆ ಮಾಸಾಶನ ನೀಡುವ ಬೇಡಿಕೆಯಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ ಹಾಗೂ ಪೀಠಾಧಿಪತಿ ಸಿದ್ಧರಾಮಾನಂದ ಸ್ವಾಮೀಜಿ ಸಹಿತ ವಿವಿಧ ಮಠಾ ಧೀಶರು ಪಾಲ್ಗೊಂಡಿದ್ದರು.
ಹೆಲಿಕಾಪ್ಟರ್‌ನಲ್ಲೇ ಸಿಎಂ ಊಟ
ತಿಂಥಿಣಿಯ ಕಾಗಿನೆಲೆ ಕನಕ ಗುರುಪೀಠದಲ್ಲಿ ನಡೆದ ಹಾಲುಮತ ಸಂಸ್ಕೃತಿ ಉತ್ಸವಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅಲ್ಲಿಂದ ಕೂಡಲಸಂಗಮಕ್ಕೆ ತೆರಳಬೇಕಿತ್ತು. ಮಧ್ಯಾಹ್ನ ತಡವಾಗಿದ್ದರಿಂದ ಹೆಲಿಪಾಡ್‌ನಲ್ಲಿ ನಿಂತಿದ್ದ ಹೆಲಿಕಾಪ್ಟರ್‌ನಲ್ಲೇ ಊಟ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.