ಅವನತಿಯ ಅಂಚಿನಲ್ಲಿರುವ ನೇಕಾರ
Team Udayavani, Jan 6, 2022, 12:20 PM IST
ದೋಟಿಹಾಳ: ಬಟ್ಟೆ ನೇಯುವ ನೇಕಾರನಿಗೆ, ಗೇಣುದ್ದ ಬಟ್ಟೆ ಇಲ್ಲ ಎಂಬ ಮಾತು ಇದೆ, ಈ ಮಾತು ಗ್ರಾಮದ ಕೈಮಗ್ಗದ ಪ್ರಸಿದ್ದ ಇಲಕಲ್ ಸೀರೆ ನೇಯುವ ನೇಕಾರರ ಸ್ಥಿತಿಯಾಗಿದೆ.
ಗ್ರಾಮದ ಕೈಮಗ್ಗ ನೇಕಾರ ಉತ್ಪಾದನಾ ಮತ್ತು ಮಾರಾಟ ಸಂಘದ ನೇಕಾರರ ಬದುಕು ಇಂದು ಮೂರಾಬಟ್ಟೆಯಾಗಿದೆ ಕಾರಣ ಸುಮಾರು ಹದಿನೈದು ವರ್ಷಗಳಿಂದ ಕೂಡಿಟ್ಟ ಮಿತವ್ಯಯ ನಿಧಿಯನ್ನು ಸಹ ವಾಪಸ್ಸು ಪಡೆಯಲು ನೇಕಾರಿಗೆ ಆಗುತ್ತಿಲ್ಲ. ಕಾರಣ ಸರ್ಕಾರ ನಾಲ್ಕೈದು ವರ್ಷಗಳ ಹಿಂದೆ ಮಾಡಿದ ಖಜಾನೆ ಇಲಾಖೆಯನ್ನು ಡಿಜಟಿಲಕರಣ ಮಾಡಿದ ನಂತರ ನೇಕಾರರ ಮಿತವ್ಯಯ ನಿಧಿ ಇನ್ನು ನೇಕಾರರಕೈ ಸೇರುತ್ತಿಲ್ಲ. ಮೂರ್ನಾಲ್ಕು ವರ್ಷದಿಂದ ನೇಕಾರರು ಮಿತವ್ಯಯ ನಿಧಿಗಾಗಿ ನೌಕರರು ಹಾಗೂ ಸಂಘದ ಆಡಳಿತ ಮಂಡಳಿಯವರು ಅಲೆದಾಡುವಂತಾಗಿದೆ. ಇದರ ಬಗ್ಗೆ ಸರಕಾರ ನೇಕಾರರ ನೆರವಿಗೆ ಬರಬೇಕೆಂದು ನೇಕಾರರು ಆಗ್ರಹಿಸಿದ್ದಾರೆ.
ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಒಂದು ಕಾಲವಿತ್ತು, ಕೈಮಗ್ಗದಲ್ಲಿ ನೇಯ್ದ ಇಲಕಲ್ ಸೀರೆಗಳಿಗೆ ಭಾರಿ ಬೇಡಿಕೆ ಇತ್ತು. ಆ ದಿನಗಳಲ್ಲಿ ಕೈಮಗ್ಗಗಳದೆ ಕಾರುಬಾರು ಆಗಿದ್ದರಿಂದ ಕರ್ನಾಟಕ ರಾಜ್ಯದ ಮಟ್ಟಿಗೆ ನೇಕಾರಿಕೆಯೂ ಸಹ ಜನರ ಪ್ರಮುಖ ಉದ್ಯೋಗವಾಗಿತ್ತು. ಆದರೆ ಕಾಲ ಬದಲಾದಂತೆ ಕೈಮಗ್ಗಗಳ ಬದಲಿ ಈಗ ಯಂತ್ರಗಳು ಆವರಿಸಿವೆ. ಬೆಲೆ ಹೆಚ್ಚಳದಿಂದಾಗಿ ಇಲಕಲ್ ಸೀರೆಗಳನ್ನು ಉಟ್ಟುಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಲಕಲ್ ಸೀರೆ ಈಗ ಕೇವಲ ಫ್ಯಾಶನ್ ಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಇಲಕಲ್ ಸೀರೆ ನೇಯುಯವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳದ ನೇಕಾರರ ಸಹಕಾರ ಸಂಘದಲ್ಲಿ ನೇಕಾರರ ಸಂಖ್ಯೆ ಕಡಿಮೆಯಾಗಿದೆ. 1955 ರಲ್ಲಿ ಸ್ಥಾಪನೆಯಾಗಿರುವ ದೋಟಿಹಾಳದ ನೇಕಾರರ ಸಹಕಾರ ಸಂಘದಲ್ಲಿ ಈ ಹಿಂದೆ 600 ಕ್ಕೂ ಅಧಿಕ ಜನ ನೇಕಾರರು ಇದ್ದರು. ಈ ಸಂಘಕ್ಕೆ 1993-94 ರಲ್ಲಿ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಪುರಸ್ಕಾರ ಸಿಕ್ಕಿತ್ತು. ರಾಜ್ಯ ಸರಕಾರವು ಸಹ ಪುರಸ್ಕಾರ ನೀಡಿತ್ತು. ಆದರೆ ಈಗ ನೇಕಾರರಿಗೆ ಪ್ರೋತ್ಸಾಹವಿಲ್ಲದೆ ಇರುವದರಿಂದ ದೋಟಿಹಾಳದಲ್ಲಿ ನೇಕಾರರ ಸಂಖ್ಯೆ ಕೇವಲ 60 ಕ್ಕೆ ಇಳಿಕೆಯಾಗಿದೆ.
ಒಂದು ಸೀರೆ ನೇಯಲು ನೇಕಾರನ ಕುಟುಂಬದಲ್ಲಿ ಎಲ್ಲರು ಕೆಲಸ ಮಾಡಿದರೆ ಎರಡು ದಿನ ಬೇಕಾಗುತ್ತದೆ. ಒಂದು ಸೀರೆಗೆ 400-500 ರೂಪಾಯಿ ಮಾತ್ರ ದರ ಸಿಗುತ್ತಿದೆ. ಈ ಮಧ್ಯೆ ಇತ್ತೀಚಿಗೆ ಸೀರೆ ತಯಾರಿಕೆಯ ಕಚ್ಚಾ ಸಾಮಗ್ರಿಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಏರಿಕೆಯಾದ ಕಚ್ಚಾ ಸಾಮಗ್ರಿಯಿಂದ ಸೀರೆ ತಯಾರಿಸಿ ಕೊಟ್ಟರೂ ಸರಿಯಾದ ದರ ಸಿಗುತ್ತಿಲ್ಲ. ಇದರಿಂದಾಗಿ ನೇಕಾರ ನೇಯ್ಗೆಯ ಉದ್ಯೋಗ ಬಿಟ್ಟು ಬೇರೆ ಉದ್ಯೋಗದತ್ತ ಹೋಗಿದ್ದಾನೆ ಇದರಿಂದಾಗಿ ಬರುವ ದಿನಗಳಲ್ಲಿ ಕೈಮಗ್ಗ ನೇಕಾರರ ಸಂಪೂರ್ಣವಾಗಿ ಇಲ್ಲವಾಗುವ ಸಾಧ್ಯತೆ ಇದೆ.
ಕೊಪ್ಪಳ ಜಿಲ್ಲೆಯಲ್ಲಿ ಈ ಮೊದಲು ನೇಕಾರಿಕೆ ಮಾಡುವ ಹಲವಾರು ಕುಟುಂಬಗಳಿದ್ದವು. ಹಿಂದೆ ನೇಕಾರರ 11 ಕೈಮಗ್ಗ ನೇಕಾರರ ಸಹಕಾರ ಸಂಘಗಳಿದ್ದವು. ಈಗ ಉಳಿದಿದ್ದು ಕೇವಲ 5. ಅದರಲ್ಲಿ ಈಗ ಚಾಲ್ತಿಯಲ್ಲಿರುವವು ಕೇವಲ 3. ಇನ್ನೂ ನೇಕಾರರು ತಾವು ನೇಯ್ದ ಸೀರೆಯನ್ನು ಬೇರೆ ವ್ಯಾಪಾರಿಗಳಿಗೂ ಮಾರಾಟ ಮಾಡುತ್ತಾರೆ. ಅಲ್ಲಿಯೂ ಸರಿಯಾದ ದರ ಸಿಗುತ್ತಿಲ್ಲ. ಸಹಕಾರ ಸಂಘಗಳಲ್ಲಿ ಮಾರಾಟ ಮಾಡಿದರೆ ಸರಕಾರದಿಂದ ಶೇ 20 ರಿಯಾಯಿತಿ ಹಣವು ನೇಕಾರನಿಗೆ ಸಿಗುತ್ತದೆ. ರಿಯಾಯಿತಿಯನ್ನು ಹೆಚ್ಚಿಸಬೇಕು. ಕಚ್ಚಾ ಸಾಮಗ್ರಿ ಖರೀದಿಸಲು ಸರಕಾರ ಸಹಾಯ ಮಾಡಬೇಕು. ಇಲ್ಲವೇ ಇನ್ನಷ್ಟು ಉತ್ತೇಜನ ನೀಡಿದರೆ ಮಾತ್ರ ನೇಕಾರ ಉಳಿಯಲು ಸಾಧ್ಯವೆಂದು ನೇಕಾರರು ಹೇಳಿದ್ದಾರೆ.
ಈ ಮಧ್ಯೆ ನೇಕಾರರ ಭದ್ರತೆಗಾಗಿ ಮಿತವ್ಯಯ ನಿಧಿಯನ್ನು ಸಹಕಾರ ಸಂಘಗಳು ನೇಕಾರರಿಂದ ಪಡೆದು ಜವಳಿ ಇಲಾಖೆಯ ಖಜಾನೆಗೆ ಜಮಾ ಮಾಡುತ್ತಾರೆ. ಪ್ರತಿ ಸೀರೆಗೆ 28 ರೂಪಾಯಿ. 28 ರೂಪಾಯಿ ಇಲಾಖೆಯಿಂದ ನೇಕಾರರ ಖಾತೆಗೆ ಜಮಾ ಆಗುತ್ತದೆ. ಈ ಹಣವನ್ನು 15 ವರ್ಷಗಳ ನಂತರ ನೇಕಾರ ತನಗೆ ಅವಶ್ಯವಿರುವಾಗ ಮರಳಿ ಪಡೆಯಬಹುದು. ಆದರೆ ಕಳೆದ ಮೂರು ವರ್ಷಗಳಿಂದ ಮಿತವ್ಯಯ ನಿಧಿಯನ್ನು ನೇಕಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಕಾರಣ ಇಲಾಖೆಯಿಂದ ಖಜಾನೆ 1 ರಲ್ಲಿದ್ದ ಹಣವನ್ನು ಖಜಾನೆ 2 ಗೆ ವರ್ಗಾಯಿಸಬೇಕು. ಆದರೆ ಇದು ವಿಳಂಭವಾಗಿರುವುದರಿಂದ ಇಡೀ ರಾಜ್ಯದಲ್ಲಿಯೇ ನೇಕಾರರ ಪಾವತಿಸಿದ ಮಿತವ್ಯಯ ಹಣವನ್ನು ವಾಪಸ್ಸು ಪಡೆಯಲು ಆಗುವುದಿಲ್ಲ. ಕಷ್ಟ ಕಾಲದಲ್ಲಿ ಸಹಾಯವಾಗುವ ಮಿತವ್ಯಯ ಹಣ ಪಡೆಯಲು ನೇಕಾರರು ಪರದಾಡಬೇಕಾಗಿದೆ. ಕೆ1 ನಿಂದ ಕೆ2 ಗೆ ನೇಕಾರರ ಮಿತವ್ಯಯ ಹಣ ವರ್ಗಾವಣೆಗೆ ಇಲಾಖೆಯು ಇನ್ನೂ ಹಲವಾರು ಫಾರ್ಮೆಟ್ ಗಳನ್ನು ತಯಾರಿಸಿದ್ದರಿಂದ ಈಗ ಹಣ ಪಡೆಯಲು ಆಗುತ್ತಿಲ್ಲ. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ನೇಕಾರರು ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ನೇಕಾರರಿಂದ ಸುಮಾರು 21 ಲಕ್ಷ ರೂಪಾಯಿಯು ಮಿತವ್ಯಯ ಹಣ ಖಜಾನೆಯಲ್ಲಿದೆ, ಅದು ನೇಕಾರರ ಕೈಗೆ ಸೇರುತ್ತಿಲ್ಲ. ಈ ಕುರಿತ ಸರಕಾರ ಬೇಗನೆ ಕ್ರಮ ಕೈಗೊಳ್ಳಬೇಕು ನೇಕಾರರ ನೆರವಿಗೆ ಸರಕಾರ ಬರಬೇಕೆಂದು ಆಗ್ರಹಿಸಿದ್ದಾರೆ.
– ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.