ವೀಡ್ ಕಟ್ಟರ್: ಮಣ್ಣು ಹೊನ್ನು ಮೆಶಿನ್ನು
Team Udayavani, Jun 1, 2020, 4:31 AM IST
ಎಲ್ಲೆಂದರಲ್ಲಿ ಬೆಳೆದುಬಿಡುವ ಕಳೆಯನ್ನು ಕೀಳುವುದೆಂದರೆ ತ್ರಾಸದಾಯಕ ಕೆಲಸ. ಕಳೆ ಕೀಳಲು ಮಾರುಕಟ್ಟೆಯಲ್ಲಿ ಹಲವಾರು ಮಾನವಚಾಲಿತ ಸಲಕರಣೆಗಳು ಮತ್ತು ಸ್ವಯಂಚಾಲಿತ ಯಂತ್ರಗಳೂ ಸಿಗುತ್ತವೆ. ಅವನ್ನು ವೀಡ್ ಅಥವಾ ಬುಶ್ ಕಟ್ಟರ್ ಎನ್ನಲಾಗುತ್ತದೆ. ಇವುಪೆಟ್ರೋಲ್ ಇಂಧನ ಆಧರಿಸಿ ಕಾರ್ಯಾಚರಿಸುತ್ತವೆ.
ಕೋಲಿನಂತೆ ಉದ್ದವಾಗಿರುವ ಈ ಸಾಧನದಲ್ಲಿ, ಸೈಕಲ್ ಹ್ಯಾಂಡಲ್ ಮಾದರಿಯ ಹ್ಯಾಂಡಲ್ ಇರುತ್ತದೆ. ಅದಕ್ಕೂ ಮೇಲೆ, ಯಂತ್ರದ ಬಹುಮುಖ್ಯಭಾಗವಾದ ಮೋಟಾರ್ ಅನ್ನು ಅಳವಡಿಸಿರುತ್ತಾರೆ. ಮೋಟಾರ್ ಅನ್ನು ಚಾಲೂ ಮಾಡಲು ಸಾಮಾನ್ಯವಾಗಿ ಪುಲ್ಲೀಯನ್ನು ನೀಡಿರುತ್ತಾರೆ. ಅದನ್ನು ಎಳೆಯುವ ಮೂಲಕ, ಕಟ್ಟರ್ ಅನ್ನು ಆನ್ ಮಾಡಬಹುದು. ಕೋಲಿನ ಭಾಗದ ಇನ್ನೊಂದು ತುದಿಯಲ್ಲಿ, ಕಟ್ ಮಾಡುವ ಸಾಧನವಿರುತ್ತದೆ.
ಇದರಲ್ಲೊಂದು ನೈಲಾನ್ ದಾರ ಇರುತ್ತದೆ. ಬ್ಲೇಡಿನಂತೆ ಕೆಲಸ ಮಾಡುವ ಇದನ್ನು, ತಿರುಗುವ ಚಕ್ರಕ್ಕೆ ಫಿಕ್ಸ್ ಮಾಡಿರುತ್ತಾರೆ. ಚಕ್ರ, ನಿಮಿಷಕ್ಕೆ 10,000 ಆರ್‌ಪಿಎಂ ವೇಗದಲ್ಲಿ ತಿರುಗುತ್ತದೆ. ತನ್ನ ದಾರಿಗೆ ಎದುರಾಗುವ ಹುಲ್ಲು, ಗಿಡಗಂಟಿ, ಮುಳ್ಳು, ಚಿಕ್ಕ ಮರಗಳನ್ನೂ ಕತ್ತರಿಸಿ ಹಾಕುವ ಸಾಮರ್ಥ್ಯ ಇದಕ್ಕಿರುತ್ತದೆ. 8- 9 ಕೆ.ಜಿ. ತೂಕವಿರುವ ಈ ಸಾಧನವನ್ನು, ಬೆಲ್ಟ್ ಸಹಾಯದಿಂದ ಹೆಗಲಿಗೆ ನೇತು ಹಾಕಿಕೊಂಡು ಕಾರ್ಯನಿರ್ವಹಿಸಬಹುದು.
ವಿಡಿಯೊ: tinyurl.com/yabkaydv
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.