ಅಯ್ಯಪ್ಪ ವ್ರತಧಾರಿಗಳಿಗೂ ತೊಡಕು
Team Udayavani, Jan 10, 2022, 5:50 AM IST
ಉಡುಪಿ: ವಾರಾಂತ್ಯ ಕರ್ಫ್ಯೂ ವರ್ತಕರಿಗೆ, ಉದ್ಯಮಗಳಿಗೆ, ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗೂ ಸಮಸ್ಯೆ ನೀಡುತ್ತಿದೆ.
ಸಾಮಾನ್ಯವಾಗಿ ನವಂಬರ್‌ನಿಂದ ಜ.15ರ ವರೆಗೆ ರಾಜ್ಯದಿಂದ ಸಹಸ್ರಾರು ವ್ರತಧಾರಿಗಳು ಶಬರಿಮಲೆಗೆ ಹೋಗುತ್ತಾರೆ. ಅದರಲ್ಲೂ ಮಕರಜ್ಯೋತಿ ನೋಡಲು ಹೋಗುವವರ ಸಂಖ್ಯೆ ಇನ್ನು ಹೆಚ್ಚಿರುತ್ತದೆ. ರಾಜ್ಯದ ವಿವಿಧ ಭಾಗಗಳ ಭಕ್ತರು ಕರಾವಳಿ ಮಾರ್ಗವಾಗಿಯೇ ಹೋಗುವ ವೇಳೆ ಸಿಗುವ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ವಾಡಿಕೆ. ಆದರೆ ಕಳೆದ ವರ್ಷ ಕೊರೊನಾ ಲಾಕ್‌ಡೌನ್ ಮತ್ತು ಕಠಿನ ನಿಯಮದಿಂದ ವಿವಿಧ ಕ್ಷೇತ್ರಗಳ ದರ್ಶನ ಸಾಧ್ಯವಾಗಿಲ್ಲ. ಈ ವರ್ಷವೂ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿರುವುದರಿಂದ ಅನೇಕ ರೀತಿಯ ಸಮಸ್ಯೆ ಯಾಗುತ್ತಿದೆ ಎಂದು ವ್ರತಧಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ದರ್ಶನ ಮಾತ್ರ; ಪ್ರಸಾದ ಇಲ್ಲ
ಬಹುತೇಕ ದೇವಸ್ಥಾನಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಇರುವುದರಿಂದ ಪ್ರಸಾದ ನೀಡುತ್ತಿಲ್ಲ. ಸಾಮಾನ್ಯವಾಗಿ ದರ್ಶನದ ಜತೆಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ಪ್ರಸಾದಕ್ಕೆ ಸರಿ ಹೊಂದುವಂತೆ ಯೋಜನೆ ರೂಪಿಸಿಕೊಂಡು ಯಾತ್ರೆ ಆರಂಭಿಸುತ್ತೇವೆ. ವಾರಾಂತ್ಯ ಕರ್ಫ್ಯೂನಿಂದ ಪ್ರಸಾದ ಊಟಕ್ಕೂ ಸಮಸ್ಯೆಯಾಗುತ್ತಿದೆ. ಜತೆಗೆ ಹೊಟೇಲ್ ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ ಇರುವುದರಿಂದ ಹೊಟೇಲ್ ಊಟ ಮಾಡುವುದು ಕಷ್ಟವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಕರಾವಳಿಯ ಪ್ರಮುಖ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದು ಶಬರಿಮಲೆ ಹೋಗುತ್ತಾರೆ. ಆದರೆ ವಾರಾಂತ್ಯ ಕರ್ಫ್ಯೂ ಹಾಗೂ ಕಠಿನ ನಿಯಮದಿಂದ ಅಯ್ಯಪ್ಪ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರೊಬ್ಬರು ಮಾಹಿತಿ ನೀಡಿದರು.
ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ ವಾರಾಂತ್ಯ ಕರ್ಫ್ಯೂ ಹಾಗೂ ಕಠಿನ ನಿಯಮ ಇರುವುದರಿಂದ ಮಧ್ಯಾಹ್ನ ಹಾಗೂ ಸಂಜೆ ನಾವೇ ಊಟ ಸಿದ್ಧಮಾಡಿಕೊಳ್ಳುತ್ತೇವೆ. ಎಂದು ಬಾಗಲಕೋಟೆ ಮೂಲಕ ಅಯ್ಯಪ್ಪ ವ್ರತಧಾರಿಗಳ ತಂಡ ಉದಯವಾಣಿಗೆ ಮಾಹಿತಿ ನೀಡಿತು.
ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಉಲ್ಬಣ : 340 ಮಂದಿಗೆ ಪಾಸಿಟಿವ್; ಶೇ.3.86 ಪಾಸಿಟಿವಿಟಿ ದರ
ಅಲ್ಲಲ್ಲಿ ತಪಾಸಣೆ
ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗೆ ಜಿಲ್ಲೆಯ ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಆರ್‌ಟಿಪಿಸಿಆರ್ ಟೆಸ್ಟ್ ಮಾಹಿತಿ, ಎರಡು ಡೋಸ್ ಪಡೆದಿರುವ ಮಾಹಿತಿ ಸೇರಿ ವಿವಿಧ ದಾಖಲೆ ಕೇಳುತ್ತಾರೆ. ಇದು ಕೂಡ ಕಿರಿಕಿರಿಯಾಗುತ್ತಿದೆ ಎಂದು ಅಯ್ಯಪ್ಪ ವ್ರತಧಾರಿಗಳು ಹೇಳಿದರು.
ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಹೇರಿರುವುದು ಸರಿಯಲ್ಲ. ಇದರಿಂದ ಅಯ್ಯಪ್ಪ ವ್ರತಧಾರಿಗಳಿಗೆ ತೀರ್ಥಕ್ಷೇತ್ರ ಸಂದರ್ಶನ ಹಾಗೂ ಕೆಲವು ಕಡೆ ದೇವರ ದರ್ಶನಕ್ಕೂ ಸಮಸ್ಯೆಯಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸೂಕ್ತ ನಿಯಮ ಅನುಷ್ಠಾನ ಮಾಡಬೇಕು. ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್ ಪರಿಹಾರ ಅಲ್ಲ. ಇದರಿಂದ ಎಲ್ಲ ವರ್ಗಕ್ಕೂ ಸಮಸ್ಯೆಯಾಗಲಿದೆ.
-ರಾಧಾಕೃಷ್ಣ ಮೆಂಡನ್, ಜಿಲ್ಲಾಧ್ಯಕ್ಷ,
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.