ನಿರ್ವಹಣೆಯಿಲ್ಲದೆ ಕೊರಗುತ್ತಿರುವ ವೆಟ್‌ವೆಲ್‌ಗಳಿಗೆ ಕಾಯಕಲ್ಪ
ಜನರೇಟರ್ ಖರೀದಿಸಲು ಮುಂದಾದ ನಗರಸಭೆ
Team Udayavani, Jun 20, 2020, 5:29 AM IST
ಸಾಂದರ್ಭಿಕ ಚಿತ್ರ..
ಉಡುಪಿ: ನಗರದಲ್ಲಿ ಸರಿಯಾದ ನಿರ್ವಹಣೆಯಿಲ್ಲದೆ ಕೊರಗ ತ್ತಿದ್ದ ವೆಟ್‌ವೆಲ್‌ಗಳಿಗೆ ಹಾಗೂ ಮ್ಯಾನ್ ಹೋಲ್‌ಗಳಿಗೆ ಹೊಸ ಕಾಯಕಲ್ಪ ದೊರಕಿದ್ದು, ಸಾರ್ವಜನಿಕರಿಗೆ ಕೊಂಚ ನೆಮ್ಮದಿಯಿಂದ ಬದುಕುವಂತಾಗಿದೆ.
ವೆಟ್‌ವೆಲ್‌ಗಳ ಹಿಂದಿನ ಸ್ಥಿತಿ!
ಉಡುಪಿ ನಗರಸಭೆ 4 ವೆಟ್‌ವೆಲ್‌ಗಳನ್ನು ಹೊಂದಿವೆ. ಕಿನ್ನಿಮೂಲ್ಕಿ, ನಾಯರ್‌ಕೆರೆ, ಶಾರದ ಇಂಟರ್ ನ್ಯಾಶನಲ್ ಮುಂಭಾಗ ಹಾಗೂ ಮಠದಬೆಟ್ಟುವಿನಲ್ಲಿ ಅನುಕ್ರಮವಾಗಿ 25 ಎಚ್‌ಪಿ, 35 ಎಚ್‌ಪಿ, 170 ಎಚ್‌ಪಿ ಹಾಗೂ 180 ಎಚ್‌ಪಿ ಸಾಮರ್ಥ್ಯದ ಮೋಟಾರ್ ಆಳವಡಿಸಲಾಗಿದೆ. ಈ ನಾಲ್ಕು ವೆಟ್‌ವೇಲ್‌ಗಳಲ್ಲಿ ಕೇವಲ ಕಿನ್ನಿಮೂಲ್ಕಿ ಹಾಗೂ ನಾಯರ್‌ಕೆರೆ ಸ್ಟೇಷನಗಳಲ್ಲಿ ಮಾತ್ರ ಜನರೇಟ್‌ಗಳು ಇದ್ದವು.
ಜನರೇಟರ್ ಖರೀದಿಗೆ ಆಸಕ್ತಿ
ಪ್ರಸ್ತುತ ನಗರಸಭೆ ವ್ಯಾಪ್ತಿಯ ವೆಟ್‌ವೆಲ್‌ಗಳಿಗೆ ಹೊಸ ರೂಪ ನೀಡಲು ಮುಂದಾಗಿದೆ. ಅನೇಕ ವರ್ಷಗಳಿಂದ ವಿದ್ಯುತ್ ವ್ಯತ್ಯಯವಾದ ಸಂದರ್ಭದಲ್ಲಿ ಜನರೇಟರ್ ಇಲ್ಲದ ಕಾರಣ ನೇರವಾಗಿ ಇಂದ್ರಾಣಿಗೆ ಬಿಡಲಾಗುತ್ತಿದೆ. ಇದಕ್ಕೆ ನಗರಸಭೆ ಅಧಿಕಾರಿಗಳು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಸುಮಾರು 10 ವರ್ಷಗಳ ಬಳಿಕ ಮಠದಬೆಟ್ಟು ಹಾಗೂ ಶಾರದಾ ಇಂಟರ್ ನ್ಯಾಶನಲ್ ಮುಂಭಾಗದ ವೆಟ್‌ವೆಲ್‌ಗಳಿಗೆ ಜನರೇಟರ್ ಖರೀದಿಸಲು ಮುಂದಾಗಿದ್ದಾರೆ.
45 ಲ.ರೂ. ವರ್ಕ್ ಆರ್ಡರ್
180 ಎಚ್‌ಪಿ ಸಾಮರ್ಥ್ಯದ ಮೋಟಾರ್‌ನ ಮಠದಬೆಟ್ಟು ವೆಟ್‌ವೆಲ್‌ಗೆ 320 ಕೆವಿಎ (ಡಿಜಿ)ನ 26 ಲ.ರೂ. ಹಾಗೂ 170 ಎಚ್‌ಪಿ ಸಾಮರ್ಥ್ಯದ ಶಾರದಾ ಇಂಟರ್‌ನ್ಯಾಷನಲ್‌ನ ಎದುರಿನ ವೆಟ್‌ವೆಲ್‌ಗೆ 250 ಕೆವಿಎ 19 ಲ.ರೂ. ಸೇರಿದಂತೆ 45 ಲ.ರೂ. ಮೊತ್ತದ ಜನರೇಟರ್ ಆಳವಡಿಸುವ ಕುರಿತು ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗಿದೆ. ಮುಂದಿನ
15ದಿನಗಳೊಳಗಾಗಿ ಕೆಲಸ ಮುಗಿಯುವ ಸಾಧ್ಯತೆಗಳಿವೆ.
ಹೊಸ ಪೈಪ್‌ಲೈನ್ ಅಳವಡಿಕೆ
ನಗರಸಭೆ ವ್ಯಾಪ್ತಿಯ ಗುಂಡಿಬೈಲು ವಾರ್ಡ್‌ನ ದೊಡ್ಡಣಗುಡ್ಡೆ ಮುಖ್ಯ ರಸ್ತೆಯಲ್ಲಿನ ಮ್ಯಾನ್ ಹೋಲ್ ಹಾಗೂ ಹೊಸ ಪೈಪ್ ಲೈನ್ ಆಳವಡಿಸಲು ಸುಮಾರು 17.84 ಲ.ರೂ. ಹಾಗೂ ಬೈಲೂರು ಮಿಷನ್ ಕಂಪೌಂಡ್ ಸರ್ಕಲ್‌ನಿಂದ ಚಂದು ಮೈದಾನ ಕ್ರಾಸ್‌ವರೆಗಿನ ಒಳಚರಂಡಿ ಜಾಲ ನಿರ್ಮಾಣಕ್ಕೆ 36.37 ಲ.ರೂ. ಸೇರಿದಂತೆ ಒಳಚರಂಡಿ ವ್ಯವಸ್ಥೆಗೆ 53 ಲ.ರೂ. ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.
ಆರ್‌ಸಿಸಿ ಮ್ಯಾನ್‌ಹೋಲ್
ಗುಂಡಿಬೈಲು ವಾರ್ಡ್‌ನಲ್ಲಿ ಮ್ಯಾನ್ ಹೋಲ್‌ಗಳು ವರ್ಷವಿಡಿ ಉಕ್ಕಿ ಹರಿಯುತ್ತಿರುವುದರಿಂದ ನಗರಸಭೆ ಅಧಿಕಾರಿಗಳು ಬ್ರಿಸ್ಕ್ನಲ್ಲಿ ನಿರ್ಮಾಣವಾದ ಮ್ಯಾನ್‌ಹೋಲ್‌ಗಳನ್ನು ತೆಗೆದು ಆರ್‌ಸಿಸಿಯಿಂದ ಮ್ಯಾನ್‌ಹೋಲ್ ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಜತೆಗೆ ಬೈಲೂರು ಮಿಷನ್ ಕಂಪೌಂಡ್ ಸರ್ಕಲ್‌ನಿಂದ ಚಂದು ಮೈದಾನ ಕ್ರಾಸ್‌ವರೆಗಿನ 6 ಇಂಚಿನ ಒಳಚರಂಡಿ ಪೈಪ್ ತೆರವು ಗೊಳಿಸಿ 1 ಫೀಟ್ ಪೈಪ್ ಗಳನ್ನು ಅಳವಡಿಸಲಾಗುತ್ತಿದೆ.
30 ದಿನಗಳ ಸರಣಿ ವರದಿ
“ಮರೆತೇ ಹೋದ ಇಂದ್ರಾಣಿ ಕಥೆ ಜಲಮೂಲ ರಕ್ಷಿಸಿ ಉಡುಪಿ ಉಳಿಸಿ’ ಎನ್ನುವ ಶೀರ್ಷಿಕೆಯಡಿಯಲ್ಲಿ ವೆಟ್‌ವೆಲ್‌ಗಳಲ್ಲಿ ಕೆಟ್ಟುನಿಂತ ಮೋಟರ್, ಜನರೇಟರ್ ಹಾಗೂ ನಿರ್ವಹಣೆ ಕೊರತೆಯಿಂದಾಗುತ್ತಿರುವ ಸಮಸ್ಯೆಗಳ ಕುರಿತು ವಿಸ್ಕೃತ ವರದಿಯನ್ನು ಒಂದು ತಿಂಗಳ ಕಾಲ ಸರಣಿ ವರದಿಯನ್ನು ಉಡುಪಿ ಸುದಿನದಲ್ಲಿ ಪ್ರಕಟಿಸಲಾಗಿತ್ತು. ಇದೀಗ ವೆಟ್‌ವೆಲ್‌ಗಳ ನಿರ್ವಹಣೆಯಿಂದ ನೇರವಾಗಿ ಕೊಳಚೆ ನೀರು ಬಿಡುವ ಪ್ರಮಾಣ ಕಡಿಮೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಅಂದಾಜು ಪಟ್ಟಿ ತಯಾರಿಕೆ
ಶಾರದಾ ಹೊಟೇಲ್ ಮುಂಭಾಗದ ವೆಟ್‌ವೆಲ್‌ನಲ್ಲಿ ಕಸಗಳು ನಿಲ್ಲುವ ಕಡೆ ಸ್ಕ್ರೀನಿಂಗ್ ಹಾಗೂ ಆವರಣ ಗೋಡೆ, ವಿದ್ಯುತ್ ದೀಪ ಸೇರಿದಂತೆ ಇತರ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಅಗತ್ಯವಿರುವ ಮೊತ್ತ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಹಂತ ಹಂತವಾಗಿ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ.
-ಮೋಹನ್ ರಾಜ್, ಎಇಇ, ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.