ಮನೆ ಬಾಗಿಲಿಗೆ ಸೇವೆ-ಅನುಕೂಲಗಳೇನು?
ಬದುಕು ಬದಲಾಗಿದೆ ನಾವೂ ಬದಲಾಗೋಣ
Team Udayavani, Jun 20, 2020, 5:39 AM IST
ಕೋವಿಡ್-19 ಬಳಿಕ ನಮ್ಮೆಲ್ಲರ ಜೀವನವೇ ಬದಲಾಗಿದೆ.ಮಾಸ್ಕ್ ಮತ್ತು ಸಾಮಾಜಿಕ ಅಂತರವೇ ಇದಕ್ಕೆ ಮೊದಲ ಮದ್ದು ಆಗಿರುವುದರಿಂದ ಇದರ ಪಾಲನೆ ಎಲ್ಲರ ಕರ್ತವ್ಯವೂ ಆಗಿದೆ. ಜತೆ ಜತೆಗೆ ದೈನಂದಿನ ಕೆಲಸ ಕಾರ್ಯವೂ ಆಗಬೇಕಿದೆ. ಇಂತಹ ಸಮಯದಲ್ಲಿ ಪರಸ್ಪರ ಸ್ಪರ್ಶ ಅಥವಾ ಭೇಟಿಯನ್ನು ತಪ್ಪಿಸಲು ಹಲವಾರು ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಅದರಲ್ಲಿ ಒಂದು ಹೋಮ್ ಡೆಲಿವರಿ ಅಥವಾ ಮನೆ ಬಾಗಿಲಿಗೆ ಸೇವೆ. ಇದು ಹಿಂದೆಯೂ ಇತ್ತಾದರೂ ಈಗ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸುರಕ್ಷಿತವಾಗಿ ಕಾಣಿಸುತ್ತಿದೆ. ಗ್ರಾಹಕರಿಗೆ ಬೇಕಾಗಿರುವ ವಸ್ತುಗಳನ್ನು ಹೆಚ್ಚಿನ ಸಂಸ್ಥೆಗಳು ಈಗ ಮನೆ ಬಾಗಿಲಿಗೆ ತಲುಪಿಸುತ್ತಿವೆ.ದಿನಸಿ ಸಾಮಗ್ರಿಯಿಂದ ಔಷಧಗಳವರೆಗೆ ಎಲ್ಲವೂ ನಿಮ್ಮ ಹತ್ತಿರದ ಅಂಗಡಿಗಳಿಂದಲೇ ಮನೆಗೆ ತಲುಪುತ್ತವೆ. ಅದೂ ಸುರಕ್ಷತಾ ಕ್ರಮಗಳೊಂದಿಗೆ. ಆ ಕುರಿತು ಇಲ್ಲಿದೆ ಮಾಹಿತಿ.
ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿಕೊಂಡು ಹೆಚ್ಚಿನ ಎಲ್ಲ ಮಳಿಗೆಗಳು ತೆರೆದಿವೆ. ವ್ಯವಹಾರಗಳು ಸಾಮಾನ್ಯ ಸ್ಥಿತಿಗೆ ಹೊರಳುತ್ತಿವೆ. ಇದರ ನಡುವೆ ಎಲ್ಲರ ಹಿತದೃಷ್ಟಿಯಿಂದ ಕೆಲವೊಂದು ಸೇವೆಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಅವುಗಳಲ್ಲಿ ಒಂದು ಮನೆಬಾಗಿಲಿಗೆ ಸೇವೆ. ಇದು ಈಗ ಹೇಗೆ ಅನುಕೂಲಕರ? ಇಲ್ಲಿದೆ ಮಾಹಿತಿ.
ಸಾಮಾಜಿಕ ಅಂತರ, ಅನಾವಶ್ಯಕ ಓಡಾಟ ತಪ್ಪಿಸುವುದು ಸಹಿತ ಹಲವಾರು ವಿಷಯಗಳಿಗೆ ಮನೆ ಬಾಗಿಲಿಗೆ ಸೇವೆ ಎಂಬುದು ಈಗ ಹೆಚ್ಚು ಜನಪ್ರಿಯವಾಗಿದೆ. ಜನರು ಮನೆಯಲ್ಲಿದ್ದುಕೊಂಡೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದು. ಈಗಿನ ಕಾಲಕ್ಕೆ ಇದು ಹೆಚ್ಚು ಸುರಕ್ಷಿತವಾಗಿದೆ.
ಮೆಡಿಕಲ್, ದಿನಸಿ ಅಂಗಡಿಗಳು, ಹೊಟೇಲ್‌ಗಳು ಸಹಿತ ಹೆಚ್ಚಿನ ಆವಶ್ಯಕ ವಸ್ತುಗಳ ಮಾರಾಟ ಮಳಿಗೆಗಳು ಈ ಸೇವೆಯನ್ನು ನೀಡಲಾರಂಭಿಸಿವೆ. ಇದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಕೂಡ ಮಾಡಿಕೊಂಡಿದ್ದು, ಗ್ರಾಹಕರು ತಮ್ಮ ಆಯ್ಕೆಯ ವಸ್ತುಗಳನ್ನು ಸ್ಥಳೀಯವಾಗಿಯೇ ಪಡೆಯಬಹುದು.
ಮನೆ ಬಾಗಿಲಿಗೆ ಸೇವೆ ದೊರಕುವುದರಿಂದ ಗ್ರಾಹಕರಿಗೆ ಸಮಯದ ಉಳಿತಾಯವೂ ಆಗುತ್ತದೆ. ಅಂಗಡಿಗಳವರು ಕೂಡ ಇದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಲು ಮತ್ತು ಗ್ರಾಹಕರಿಗೆ ಸುರಕ್ಷಿತ ಸೇವೆ ನೀಡುವುದಕ್ಕೆ ಇದು ಹೆಚ್ಚು ಅನುಕೂಲಕರವಾಗಿದೆ.
ಮೆಡಿಕಲ್‌ಗಳಿಂದ ಹೋಮ್ ಡೆಲಿವರಿ ಬಯಸಿದರೆ ವೈದ್ಯರು ನೀಡಿದ ಚೀಟಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಎಷ್ಟು ದಿನಗಳ ಔಷಧ ಬೇಕು ಎಂಬುದನ್ನೂ ತಿಳಿಸಬೇಕು. ಗ್ರಾಹಕರು ಸಂಪೂರ್ಣವಾದ ವಿಳಾಸ, ದೂರವಾಣಿ ಸಂಖ್ಯೆ ನೀಡಬೇಕಾಗುತ್ತದೆ.
ಬಹುತೇಕ ಅಂಗಡಿಗಳು ಹೋಮ್ ಡೆಲಿವರಿ ಸಂದರ್ಭದಲ್ಲಿ ಡಿಜಿಟಲ್ ಪೇಮೆಂಟ್‌ಗಳಿಗೆ ಹೆಚ್ಚು ಒತ್ತು ನೀಡುತ್ತವೆ. ಡೆಲಿವರಿ ಬುಕ್ ಮಾಡಿದ 24 ಗಂಟೆಗಳೊಳಗೆ ಸ್ಟೋರ್ ಸಿಬಂದಿ ವಸ್ತುಗಳನ್ನು ಗ್ರಾಹಕರ ಮನೆಗೆ ತಲುಪಿಸುತ್ತಾರೆ. ಪ್ರದೇಶ ಗಳಿಗೆ ತಕ್ಕಂತೆ ಸಂಸ್ಥೆಗಳು ಡೆಲಿವರಿ ಶುಲ್ಕವನ್ನು ವಿಧಿಸುತ್ತವೆ.
ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಸಿಬಂದಿ ಕಡ್ಡಾಯವಾಗಿ ಮಾಸ್ಕ್ , ಗ್ಲೌಸ್ ಬಳಸುತ್ತಾರೆ. ಅವರ ದೇಹದ ಉಷ್ಣಾಂಶವನ್ನು ಪ್ರತಿದಿನ ಪರೀಕ್ಷಿಸಲಾಗುತ್ತದೆ. ಪ್ರತಿ ಬಾರಿ ಹೊರಗೆ ಹೋಗಿ ಬಂದ ಬಳಿಕ ಕೈಗಳನ್ನು ಸ್ಯಾನಿಟೈಸ್ ಮಾಡಿದ ಬಳಿಕವಷ್ಟೇ ಮತ್ತೋರ್ವ ಗ್ರಾಹಕರ ವಸ್ತುಗಳನ್ನು ಕೊಂಡೊಯ್ಯಲು ಅನುಮತಿಸಲಾಗುತ್ತದೆ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸ್‌ಆ್ಯಪ್ ಮಾಡಿ.
9148594259
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.