Water: ನಾವೇನು ಪಾಪ ಮಾಡಿದ್ದೇವೆ? ನಾವೂ ಈ ದೇಶದ ಪ್ರಜೆಗಳಲ್ಲವೇ?: ಎಚ್.ಡಿ.ದೇವೇಗೌಡ ಆಕ್ರೋಶ
Team Udayavani, Jan 12, 2024, 11:13 PM IST
ಬೆಂಗಳೂರು: ನೀತಿ ಆಯೋಗ ರೂಪಿಸಿದ ನಿಯಮಾವಳಿ ಪ್ರಕಾರವೇ ನಮ್ಮ ಜಲಾಶಯಗಳಿಂದ ನೀರೆತ್ತಲು ನಮಗೆ ಬಿಡುವುದಿಲ್ಲ. ಆದರೆ, ನೆರೆಯ ತಮಿಳುನಾಡು ಇಲ್ಲಿಂದ ಹರಿದ ನೀರನ್ನು ಎತ್ತಬಹುದು. ಅಲ್ಲಿನ ಪ್ರತಿ ಹಳ್ಳಿಗಳಿಗೆ ಆನಂದವಾಗಿ ಹರಿಸುತ್ತದೆ. ನಾವೇನು ಪಾಪ ಮಾಡಿದ್ದೇವೆ? ನಾವೂ ಈ ದೇಶದ ಪ್ರಜೆಗಳಲ್ಲವೇ? ಈ ತಾರತಮ್ಯ ಯಾಕೆ?
ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡು ನೀರಾವರಿ ಯೋಜನೆಗಳ ಕುರಿತು ಅಧ್ಯಯನ ನಡೆಸಿದ 31 ಸಂಸದರ ಸಂಸದೀಯ ಸ್ಥಾಯಿ ಸಮಿತಿ ಎದುರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದು ಹೀಗೆ.
ಇದನ್ನು ಸ್ವತಃ ದೇವೇಗೌಡ ಅವರು ಅನಂತರ ಸುದ್ದಿಗಾರರಿಗೆ ತಿಳಿಸಿದರು. ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಿತಿ ಸಭೆಯಲ್ಲಿ ಭಾಗವಹಿಸಿ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಲಕ್ಷ ಹೆಕ್ಟೇರ್‌ಗಿಂತ ಕಡಿಮೆ ಪ್ರದೇಶದ ಯಾವುದೇ ನೀರಾವರಿ ಯೋಜನೆಗಳಿದ್ದರೆ, ಅಂತಹ ಜಲಾಶಯಗಳಿಂದ ನೀರೆತ್ತಬಹುದು ಎಂದು ನೀತಿ ಆಯೋಗ ಹೇಳುತ್ತದೆ. ಕಾವೇರಿ ಜಲಾನಯನದ ಉದ್ದಕ್ಕೂ 20ಕ್ಕೂ ಹೆಚ್ಚು ನೀರಾವರಿ ಯೋಜನೆಗಳಿದ್ದು, ಅವೆಲ್ಲವೂ ಬರೀ ಹತ್ತು ಸಾವಿರ ಹೆಕ್ಟೇರ್ ಕೂಡ ಮೀರುವುದಿಲ್ಲ. ಹೀಗಿರುವಾಗ, ಅಲ್ಲಿಂದ ಕುಡಿಯಲು ಮತ್ತು ಕೃಷಿ ಬೆಳೆಗಳಿಗೆ ನೀರೆತ್ತಲು ಯಾಕೆ ಬಿಡುವುದಿಲ್ಲ ಎಂದು ಕೇಳಿದರು.
ಮೇಕೆದಾಟು ಯೋಜನೆಗೂ ತಕರಾರು ಮಾಡುತ್ತಾರೆ. ಆದರೆ, ಅಲ್ಲಿ ಹೊಗೇನಕಲ್‌ನಿಂದ ಪ್ರತಿ ಹಳ್ಳಿಗಳಿಗೆ ನೀರು ಹರಿಸುತ್ತಾರೆ. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ. ಹಾಗಿದ್ದರೆ, ನಾವೇನು ಪಾಪ ಮಾಡಿದ್ದೇವೆ? ಇದೇ ಪ್ರಶ್ನೆಯನ್ನು ನಾವು ಸಮಿತಿ ಎದುರು ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
ಇದಲ್ಲದೆ, ರಾಜ್ಯದಲ್ಲಿ ಪ್ರಸ್ತುತ ವಿವಿಧ ಹಂತದಲ್ಲಿರುವ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕೇಂದ್ರ ಸಾಧ್ಯವಾದಷ್ಟು ಹೆಚ್ಚು ಅನುದಾನ ನೀಡಬೇಕು. ಉದಾಹರಣೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ 5,300 ಕೋಟಿ ರೂ. ನೀಡಲಾಗಿತ್ತು. ಆದರೆ, ಇದು ಸಾಕಾಗುವುದಿಲ್ಲ. ಸಾವಿರಾರು ಕೋಟಿ ಮೊತ್ತದ ಪ್ರಾಜೆಕ್ಟ್ಗಳಿಗೆ ಅನುದಾನದ ತುರ್ತು ಅವಶ್ಯಕತೆ ಇದೆ. ಈ ಬಗ್ಗೆ ಸಮಿತಿ ಗಮನಕ್ಕೆ ತರಲಾಯಿತು. ಗುಜರಾತಿನ ಮಾಜಿ ನೀರಾವರಿ ಸಚಿವ ಪರ್ವತಭಾಯಿ ಪಟೇಲ್ ನೇತೃತ್ವದಲ್ಲಿ ಸಮಿತಿ ರಾಜ್ಯಕ್ಕೆ ಎರಡು ದಿನಗಳು ಭೇಟಿ ನೀಡಿತ್ತು. ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಗಮನಸೆಳೆಯಲಾಗಿದ್ದು, ಪೂರಕ ಸ್ಪಂದನೆ ಸಿಕ್ಕಿದೆ ಎಂದೂ ಹೇಳಿದರು.
ಸಿದ್ದು-ಅವರ ಶ್ರೀಮತಿ ಇಬ್ಬರೂ ಭಕ್ತರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೊತ್ತು. ಅವರೂ ರಾಮನ ಭಕ್ತರು ಮತ್ತು ಅವರ ಶ್ರೀಮತಿಯವರಂತೂ ಎಲ್ಲ ದೇವಸ್ಥಾನಗಳಿಗೂ ಹೋಗುತ್ತಾರೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ, ಅನಂತರ ಹೋಗುವುದಾಗಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಎಚ್.ಡಿ. ದೇವೇಗೌಡ ಪ್ರತಿಕ್ರಿಯೆ ಇದು. ರಿಪೋರ್ಟ್ ಮಾಡಲಿಕ್ಕಾಗಿ ಇದನ್ನು ನಾನು ಹೇಳುತ್ತಿಲ್ಲ. ಸಿದ್ದರಾಮಯ್ಯ ಭಕ್ತರು. ಚಾಮುಂಡೇಶ್ವರಿಗೆ ಕೂಡ ಯಾವಾಗಲೂ ಹೋಗುತ್ತಾರೆ. ಅವರ ಶ್ರೀಮತಿಯವರಂತೂ ಎಲ್ಲ ದೇವಸ್ಥಾನಗಳಿಗೂ ಹೋಗುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.