ನಾಳೆಯಿಂದ ಏನೇನು ಬದಲಾವಣೆ?

Team Udayavani, Sep 30, 2021, 7:05 AM IST

ನಾಳೆಯಿಂದ ಏನೇನು ಬದಲಾವಣೆ?

ಬ್ಯಾಂಕ್‌ ವ್ಯವಹಾರ ನಡೆಸದವರು ಈಗಿನ ದಿನಗಳಲ್ಲಿ ಯಾರೂ ಇಲ್ಲ. ಕೆಲವೊಂದು ಬ್ಯಾಂಕ್‌ ವಹಿವಾಟು, ಚೆಕ್‌ ಪುಸ್ತಕಗಳ ಬಳಕೆ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಬಳಕೆಯಲ್ಲಿ ಅ.1ರಿಂದ ಕೆಲವು ನಿಯಮಗಳು ಬದಲಾವಣೆಯಾಗಲಿವೆ. ಹೀಗಾಗಿ, ಬದಲಾವಣೆಯಾಗಲಿರುವ ಪ್ರಮುಖ ಅಂಶಗಳ ಮುನ್ನೋಟ ಇಲ್ಲಿದೆ.

ಚೆಕ್‌ ಪುಸ್ತಕದಲ್ಲಿ ಬದಲಾವಣೆ
ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌, ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ, ಅಲಹಾಬಾದ್‌ ಬ್ಯಾಂಕ್‌ಗಳ ಗ್ರಾಹಕರು ಗಮನಿಸಿ. ನಿಮ್ಮಲ್ಲಿರುವ ಚೆಕ್‌ ಪುಸ್ತಕ ಮತ್ತು ಎಂಐಸಿಆರ್‌ ಮತ್ತು ಐಎಫ್ಎಸ್‌ಸಿ ಕೋಡ್‌ಗಳು ಬದಲಾವಣೆಯಾಗಬೇಕಾಗಿದೆ. ಏಕೆಂದರೆ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನಲ್ಲಿ ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ, ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ ಗಳು ವಿಲೀನಗೊಂಡಿವೆ. ಹೀಗಾಗಿ, ಈ ಬ್ಯಾಂಕ್‌ಗಳ ಖಾತೆದಾರರು ಅ.1ರಿಂದ ಪಿಎನ್‌ಬಿಯ ಚೆಕ್‌ ಪುಸ್ತಕ ಬಳಕೆ ಮಾಡಬೇಕಾಗುತ್ತದೆ. ಇಂಟರ್‌ನೆಟ್‌ ಬ್ಯಾಂಕ್‌, ಎಟಿ ಎಂಗೆ ತೆರಳಿ, ಬ್ಯಾಂಕ್‌ ಶಾಖೆಗೆ ತೆರಳಿ ಈ ಬದಲಾವಣೆ ಮಾಡಿಕೊಳ್ಳಬಹುದು. ಇಂಡಿಯನ್‌ ಬ್ಯಾಂಕ್‌ ಜತೆಗೆ ವಿಲೀನವಾಗಿರುವ ಅಲಹಾಬಾದ್‌ ಬ್ಯಾಂಕ್‌ ಗ್ರಾಹಕರೂ ಹೊಸ ಚೆಕ್‌ ಪುಸ್ತಕ ಪಡೆದುಕೊಳ್ಳಬೇಕು. ಇದರ ಜತೆಗೆ ಎಂಐಸಿಆರ್‌ ಕೋಡ್‌ ಕೂಡ ಬದಲಾವಣೆಯಾಗಲಿದೆ.

ಡಿಜಿಟಲ್‌ ಲೈಫ್ ಸರ್ಟಿಫಿಕೆಟ್‌
ಪಿಂಚಣಿ ಪಡೆಯುತ್ತಿರುವ ಎಂಬತ್ತು ವರ್ಷ ವಯಸ್ಸಿಗಿಂತ ಮೇಲ್ಪಟ್ಟ ವರು ಜೀವನ ಪ್ರಮಾಣ ಕೇಂದ್ರಗಳಲ್ಲಿ ಡಿಜಿಟಲ್‌ ಲೈಫ್ ಸರ್ಟಿಫಿಕೆಟ್‌ ಸಲ್ಲಿಸಬಹುದು. ದೇಶದಲ್ಲಿರುವ ಪ್ರಧಾನ ಅಂಚೆ ಕಚೇರಿಗಳಲ್ಲಿ ಅವು ಗಳನ್ನು ತೆರೆಯಲಾಗಿದೆ. ನ.31ರ ವರೆಗೆ ಅದನ್ನು ಸಲ್ಲಿಸಲು ಅವಕಾಶ ಉಂಟು.

ಇದನ್ನೂ ಓದಿ:ಸರಕಾರಕ್ಕೆ 48 ಗಂಟೆಗಳ ಗಡುವು ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಅಂಚೆ ಇಲಾಖೆ ಸೇವೆಯಲ್ಲಿ ಬದಲು
ಡೆಬಿಟ್‌ ಕಾರ್ಡ್‌ ಬದಲಾವಣೆ- 300 ರೂ. ಮತ್ತು ಜಿಎಸ್‌ಟಿ, ಡ್ಯುಪ್ಲಿಕೇಟ್‌ ಪಿನ್‌ ಬದಲು- 50 ರೂ. ಮತ್ತು ಜಿಎಸ್‌ಟಿ, ಅಂಚೆ ಬ್ಯಾಂಕ್‌ನ ಎಟಿಎಂನಲ್ಲಿ 5 ಉಚಿತ ವಹಿವಾಟು ಬಳಿಕ ಪ್ರತೀ ವಹಿವಾಟಿಗೆ 10 ರೂ. ಮತ್ತು ಜಿಎಸ್‌ಟಿ.

ಅಟೋ ಡೆಬಿಟ್‌
ಸೌಲಭ್ಯದಲ್ಲಿ ಬದಲು
ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಹಲವು ಸಬ್‌ಸ್ಕ್ರಿಪ್ಶನ್‌ ಮಾಡಿಸಿಕೊಂಡವರ ಖಾತೆಯಿಂದ ಹಣ ಕಡಿತ ಮಾಡುವ 24 ಗಂಟೆಗಳ ಮೊದಲು ಗ್ರಾಹಕರಿಗೆ ಎಸ್‌ಎಂಎಸ್‌, ಇ-ಮೇಲ್‌ ಮೂಲಕ ದೃಢೀಕರಣ ಬರುತ್ತದೆ. ಗ್ರಾಹಕರು ಅದಕ್ಕೆ ಸಮ್ಮತಿ ಸೂಚಿಸದ ಹೊರತಾಗಿ ಖಾತೆಯಿಂದ ಹಣ ಪಾವತಿಯಾಗುವುದಿಲ್ಲ.

ಹೂಡಿಕೆ ನಿಯಮ ಬದಲು
ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪೆ ನಿಗಳಲ್ಲಿ ಕೆಲಸ ಮಾಡುವ ಕಿರಿಯ ಉದ್ಯೋಗಿಗಳು ತಮ್ಮ ವೇತನದಲ್ಲಿ ಶೇ.10ರಷ್ಟನ್ನು ಅವರು ನಿರ್ವಹಿಸುತ್ತಿರುವ ಮ್ಯೂಚ್ಯುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ (ಸೆಬಿ) ಈ ನಿಯಮ ಜಾರಿಗೆ ತಂದಿದೆ. 2023ರ ಅಕ್ಟೋಬರ್‌ನಿಂದ ಉದ್ಯೋಗಿಗಳ ವೇತನದಲ್ಲಿ ಶೇ.20ರಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು. ಅದನ್ನು ನಿಗದಿತ ಅವಧಿಯ ವರೆಗೆ ವಿಥ್‌ಡ್ರಾ ಮಾಡುವಂತೆ ಇಲ್ಲ.

ಟಾಪ್ ನ್ಯೂಸ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

2

Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

1(1

Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್‌ ದೀಪಗಳಿಂದ ಶೃಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.