ಮುಂಬೈನಿಂದ ಬಂದಿದ್ದ ಗರ್ಭಿಣಿ ಸೇರಿ ಇಬ್ಬರಲ್ಲಿ ಸೋಂಕು ದೃಢ
Team Udayavani, May 5, 2020, 11:55 AM IST
ಸಾಂದರ್ಭಿಕ ಚಿತ್ರ
ಮಂಡ್ಯ: ಮುಂಬೈನಿಂದ ಕೆ.ಆರ್.ಪೇಟೆ ತಾಲೂಕಿನ ಜಾಗಿನಕೆರೆ ಗ್ರಾಮಕ್ಕೆ ಬಂದ ಗರ್ಭಿಣಿ ಹಾಗೂ ಯುವತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿ ದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೇ ರಿದೆ. ಇವರಿಬ್ಬರನ್ನೂ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಸಾಂತಾ ಕ್ರೂಸ್ ಈಸ್ಟ್ ನ್ಯೂ ಅಗ್ರಿಪಾಡ ಬಡಾವಣೆ ಅಪಾರ್ಟ್‌ಮೆಂಟ್‌ನಲ್ಲಿ 20 ವರ್ಷದ ಮಹಿಳೆ, ತನ್ನ ಪತಿ, ಭಾವ, ಭಾವನ ಹೆಂಡತಿ, ಮಕ್ಕಳೊಂದಿಗೆ 3 ವರ್ಷಗಳಿಂದ ವಾಸವಾಗಿದ್ದಾರೆ. ಇವರೆಲ್ಲರೂ ಕೆ.ಆರ್.ಪೇಟೆ ತಾಲೂಕು ಜಾಗಿನಕೆರೆ ಗ್ರಾಮದವರು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.
ಪಿ.637 ಎಂದು ಗುರುತಿಸಿರುವ 7 ತಿಂಗಳ ಗರ್ಭಿಣಿ ತನ್ನ ಪತಿ, ಭಾವ, ಭಾವನ ಹೆಂಡತಿ ಮತ್ತು ಮಕ್ಕಳೊಂದಿಗೆ ಏ.23ರಂದು ಮುಂಬೈನಿಂದ ಇನ್ನೋ ವಾ ಕಾರಿನಲ್ಲಿ ಹೊರಟು, 24ರಂದು ಮಧ್ಯಾಹ್ನ ಜಾಗಿ ನಕೆರೆ ಗ್ರಾಮಕ್ಕೆ ಬಂದಿದ್ದಾರೆ. ಈಕೆ ಗರ್ಭಿಣಿಯಾದ ಕಾರಣ ಚೆಕ್‌ಪೋಸ್ಟ್‌ಗಳಲ್ಲಿ ತಾಯಿ ಕಾರ್ಡ್ ತೋರಿಸಿ ಬಂದಿದ್ದಾರೆ. ಮೇ 1 ರಂದು ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಬಿಇ ವಿದ್ಯಾರ್ಥಿಗೆ ಸೋಂಕು: ಮುಂಬೈನ ಎಲ್. ಆರ್.ತಿವಾರಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡು ತ್ತಿರುವ 19 ವರ್ಷದ ಯುವತಿಗೂ ಸೋಂಕು ದೃಢ ಪಟ್ಟಿದೆ. ಆಕೆ ತಮ್ಮ ಸಹೋದರರು ವಾಸವಿದ್ದ ಅಪಾರ್ಟ್‌ಮೆಂಟ್‌ನ ಬೇರೆ ಮನೆಯಲ್ಲಿ ವಾಸವಾಗಿದ್ದರು. ಗರ್ಭಿಣಿಯೊಂದಿಗೆ ಮುಂಬೈನಿಂದ ಪ್ರಯಾಣ ಮಾಡಿ ಜಾಗಿನಕೆರೆ ಗ್ರಾಮಕ್ಕೆ ಬಂದಿ ದ್ದಾರೆ. ಇವರ ಗಂಟಲದ್ರವ ಪರೀಕ್ಷೆ ನಡೆಸಿದಾಗ ಪತ್ತೆಯಾಗಿದ್ದು, ಇಬ್ಬರನ್ನೂ ಮಿಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.