Oscars: ಆಸ್ಕರ್‌ಗೆಂದೇ ಸಿನೆಮಾ ಏಕೆ ಮಾಡುತ್ತೀರಿ?
Team Udayavani, Nov 24, 2023, 11:34 PM IST
ಪಣಜಿ: ನಮ್ಮ ಚಲನಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ಪಡೆಯಲು ಏನು ಮಾಡಬೇಕು? ಎಂಬ ಪ್ರಶ್ನೆಯ ಜತೆಗೇ ಆಸ್ಕರ್‌ಗಾಗಿಯೇ ಏಕೆ ಮಾಡಬೇಕು? ಇವೆರಡೂ ಪ್ರಶ್ನೆಗಳು ಹುಟ್ಟಿಕೊಂಡಿದ್ದು ನಿಜ. ಅವೆರಡಕ್ಕೂ ಉತ್ತರ ಸಿಕ್ಕಿದ್ದು ಇಫಿ ಚಲನಚಿತ್ರೋತ್ಸವದ ಸಂವಾದದಲ್ಲಿ.
ಸರಳವಾದ ಒಂದು ಸಾಲಿನ ಉತ್ತರ. ಒಳ್ಳೆ ಕಥೆಗಳಿರಬೇಕು. ಎರಡನೇ ಸಾಲಿನ ಉತ್ತರವೇನೆಂದರೆ ಭಾರತದಲ್ಲಿ ಅಂಥ ಬಹಳಷ್ಟು ಕಥೆಗಳಿವೆ. ಇದೇ ಸಂದರ್ಭದಲ್ಲಿ ಆಸ್ಕರ್ ಗೆಂದೇ ಸಿನೆಮಾ ಮಾಡುವುದರಲ್ಲಿ ಅರ್ಥವಿಲ್ಲ. ಅದಷ್ಟೇ ನಮ್ಮ ಗುರಿಯಾಗಬಾರದೂ ಸಹ. ಒಂದು ಸರ್ವಶ್ರೇಷ್ಠ ಸಿನೆಮಾ ಮಾಡುವುದು ನಮ್ಮ ಗುರಿಯಾಗಬೇಕು. ಉಳಿದೆಲ್ಲವೂ ಹಿಂಬಾಲಿಸುತ್ತದೆ ಎಂಬುದು ಒಟ್ಟೂ ಅಭಿಪ್ರಾಯವಾಗಿತ್ತು.
“ಸ್ಲಂ ಡಾಗ್ ಮಿಲಿನೇರ್’ ಚಿತ್ರದ ಸೌಂಡ್ ಡಿಸೈನರ್ ಮತ್ತು ಪ್ರೊಡಕ್ಷನ್ ಮಿಕ್ಸರ್ ರಸೂಲ್ ಕುಟ್ಟಿ ಅವರ ಪ್ರಕಾರ, ಆಸ್ಕರ್ ಸ್ಪರ್ಧೆಯಲ್ಲಿ ಭಾಗವಹಿಸುವ ಯಾವುದೇ ಚಲನಚಿತ್ರಗಳು ಆಯಾ ದೇಶದಲ್ಲಿನ ವೈವಿಧ್ಯತೆಯನ್ನು ಬಿಂಬಿಸಬೇಕು. ಪ್ರಮುಖ ಸಿನೆಮಾ ನಿರ್ದೇಶಕ ಋತ್ವಿಕ್ ಘಟಕ್ ಅವರ ಮಾತನ್ನು ಉಲ್ಲೇಖೀಸುತ್ತಾ, ಹೆಚ್ಚು ಸ್ಥಳೀಯ(ರಾಷ್ಟ್ರೀಯ)ರಾದರೆ ಅಷ್ಟೇ ವಿಶ್ವ ಮಾನವರಾಗಲು ಸಾಧ್ಯ. ಹಾಗಾಗಿ ಹೆಚ್ಚು ಸ್ಥಳೀಯ, ರಾಷ್ಟ್ರೀಯ ನೆಲೆಯ ಒಂದು ಆಲೋಚನೆ ಜಾಗತಿಕ ಆಲೋಚನೆಯಾಗಿ ಬದಲಾಗಬಹುದು. ಇದನ್ನು ನಾವು ಗಮನಿಸಬೇಕು ಎಂದರು.
ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಯೋಗವೂ ಪ್ರಶಸ್ತಿಯ ಬಳಿ ಕೊಂಡೊಯ್ಯಬಲ್ಲದು ಎಂದ ಅವರು, ಸರಕಾರಗಳೂ ಆಸ್ಕರ್ ಸ್ಪರ್ಧೆಗೆ ಇಳಿಯುವ ಚಲನಚಿತ್ರಗಳ ತಂಡವನ್ನು ಬೆಂಬಲಿಸಲು ಆರ್ಥಿಕ ಸಹಕಾರ ನೀಡಲು ಪ್ರತ್ಯೇಕ ನಿಧಿಯನ್ನು ಸ್ಥಾಪಿಸಬೇಕು ಎಂದವರು ರಸೂಲ್
1982 ರಲ್ಲಿ ಭಾನು ಆಥೈಯ ಈ ಗಾಜಿನ ಮನೆ ಒಡೆದು ಒಳಹೊಕ್ಕಿದ್ದರು. “ಗಾಂಧಿ’ ಚಿತ್ರದ ಕಾಸ್ಟೂಮ್ಸ್ ಡಿಸೈನ್‌ಗೆ ಆಸ್ಕರ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಬಳಿಕ ಎ.ಆರ್. ರೆಹಮಾನ್, ರಸೂಲ್ ಕುಟ್ಟಿ, ಎಂ.ಎಂ. ಕೀರವಾಣಿ, ಗುಣೀತ್ ಮೊಂಗ ಕಪೂರ್ ಹಾಗೂ ಕಾರ್ತಿಕಿ ಗೊನ್ಸಾಲ್ವೇಸ್ ಎಲ್ಲರೂ ಈ ಹಾದಿಯಲ್ಲಿ ಗುರಿ ಮುಟ್ಟಿದ್ಧಾರೆ ಎಂದರು.
ಸಂವಾದವನ್ನು ಆರಂಭಿಸಿದ “ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರದ ನಿರ್ಮಾಪಕರಾದ ಗುಣೀತ್ ಮೊಂಗ ಕಪೂರ್, ಅಮೆರಿಕದಲ್ಲಿ ಹಂಚಿಕೆಯಾಗಿ ಪ್ರದರ್ಶನವಾಗುವುದೂ ಆಸ್ಕರ್ ದಾರಿಯ ಆರಂಭವಾಗಬಹುದು. ಹಾಗಾಗಿ ಸಿನೆಮಾ ನಿರ್ಮಿಸಿದ ಮೇಲೆ ಇಡೀ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರಿಯಬೇಕು. ಬಳಿಕ ಹಂಚಿಕೆ, ಕಾರ್ಯತಂತ್ರ ಹಾಗೂ ಸರಿಯಾದ ಪಾಲುದಾರರನ್ನು ಹಿಡಿದರೆ ಗುರಿ ಮುಟ್ಟಲು ಸಾಧ್ಯವಿದೆ ಎಂದರು.
ಹಾಗೆಯೇ ಆಸ್ಕರ್ ಹಾದಿಯಲ್ಲಿ ಚಿತ್ರೋತ್ಸವಗಳ ಕೊಡುಗೆಯನ್ನು ಉಲ್ಲೇಖೀಸಲು ಮರೆಯಲಿಲ್ಲ. ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರಗಳು ಸರಿಯಾಗಿ ಬಿಂಬಿತವಾದರೆ ಆಸ್ಕರ್ ಹಾದಿ ಕಠಿನವೆನಿಸದು. ಆದ ಕಾರಣ ಸೂಕ್ತವಾದ ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ನಮ್ಮ ಚಿತ್ರಗಳು ಪ್ರದರ್ಶನಗೊಳ್ಳಬೇಕು ಎಂದರು.
ಶಾರ್ಟ್ಸ್ ಟಿವಿಯ ಕಾರ್ಟರ್ ಪಿಲ್ಚರ್ ಅವರ ಸಲಹೆಯಂತೆ, ಭಾರತದ ಕಥೆಗಳನ್ನು ಹೇಳಬೇಕು. ಇಲ್ಲಿ ಸಾಕಷ್ಟು ಕಥೆಗಳಿವೆ. ಅವುಗಳನ್ನು ಸರಿಯಾಗಿ ಬಿಂಬಿಸಬೇಕು. ಅದೇ ಆಸ್ಕರ್‌ಗೆ ದಾರಿ ಎಂದರು. ಸೋನಲ್ ಕರ್ಲಾ ಸಂವಾದ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.