ಮಾಲ್ದೀವ್ಸ್ ಯಾಕೆ ತ್ರಾಸಿ-ಮರವಂತೆ ಓಕೆ; ಶಾಲಾ ಮಕ್ಕ ಳ ಅಭಿಯಾನ
ವೆಲ್ ಕಮ್ ಸೆಹವಾಗ್ ಎಂದ ಶಾಸಕ ಗಂಟಿಹೊಳೆ...
Team Udayavani, Jan 12, 2024, 10:37 AM IST
ಉಪ್ಪುಂದ: ಕ್ರಿಕೆಟ್ ತಾರೆ ವೀರೇಂದ್ರ ಸೆಹವಾಗ್ ತ್ರಾಸಿ-ಮರವಂತೆ ಬೀಚ್ ಸೌಂದರ್ಯದ ಬಗ್ಗೆ ಜಾಲತಾಣದಲ್ಲಿ ಹಂಚಿಕೊಂಡಿರುವ ಬೆನ್ನಲ್ಲೇ ಶಾಸಕ ಗುರುರಾಜ್ ಗಂಟಿಹೊಳೆ ಸೇರಿದಂತೆ ಸಾರ್ವಜನಿಕರು ಮಾಲ್ದೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ, ಎನ್ನುವ ಸಂದೇಶ ಸಾರುತ್ತಿದ್ದಾರೆ.
ಸೆಹವಾಗ್ ಅವರು ಹಾಕಿದ ಮರವಂತೆ ಕಿನಾರೆಯ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಾಲ್ಡೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ ಎನ್ನುವ ಕೂಗ್ಗು ಎಲ್ಲೆಡೆ ಕೇಳಿಬರುತ್ತಿದೆ.
ಲಕ್ಷದ್ವೀಪದ ಪ್ರವಾಸದ ಬಳಿಕ ಪ್ರಧಾನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋದೊಂದಿಗೆ ಅಲ್ಲಿನ ಪ್ರಾಕೃತಿಕ
ಸೌಂದರ್ಯವನ್ನು ಹೊಗಳಿದ್ದರು. ಪ್ರಧಾನಿಯ ಈ ನಡೆಗೆ ಮಾಲ್ಡೀವ್ಸ್ ಸಚಿವರು ಬೇಕಾಬಿಟ್ಟಿ ಹೇಳಿಕೆ ನೀಡಿ ಭಾರತೀಯರನ್ನು
ಕೆರಳಿಸಿದ್ದರು. ಇದರ ಬೆನ್ನಲ್ಲೇ ದೇಶಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ
ಸೃಷ್ಟಿಯಾಯಿತು.
ಸೆಹವಾಗ್ ಅವರು ಎಕ್ಸ್ ಖಾತೆಯಲ್ಲಿ ಮರವಂತೆ ಫೋಟೋ ಹಂಚಿಕೊಂಡದನ್ನು ಗಮನಿಸಿದ ಶಾಸಕ ಗುರುರಾಜ್ ಗಂಟಿಹೊಳೆ
ಅವರು ವಿಶ್ವವಿಖ್ಯಾತ ತ್ರಾಸಿ ಮರವಂತೆ ಕಡಲ ತೀರಕ್ಕೆ ಸೆಹ್ವಾಗ್ ಅವರಿಗೆ ಸ್ವಾಗತ ಎಂದು ತಮ್ಮ ಜಾಲತಾಣ ಖಾತೆಯಲ್ಲಿ ವೆಲ್ ಕಮ್ ಸೆಹವಾಗ್ ಟ್ಯಾಗ್ ಮೂಲಕ ಸ್ವಾಗತಿಸಿದ್ದರು.
ಜ.11ರಂದು ಈ ಅಭಿಯಾನಕ್ಕೆ ಉಪ್ಪುಂದ ಮಡಿಕಲ್ ಸ.ಹಿ.ಪ್ರಾ., ಕಳುಹಿತ್ಲು ಉರ್ದು ಸ.ಕಿ.ಪ್ರಾ. ಶಾಲೆ, ತಾರಾಪತಿ ಸ.ಹಿ.ಪ್ರಾ. ಶಾಲೆ ಮತ್ತು ಕಡಲತಡಿಗೆ ಹೊಂದಿಕೊಂಡ ಹಲವಾರು ಸರಕಾರಿ ಶಾಲೆಯ ವಿದ್ಯಾರ್ಥಿಗಳು ತ್ರಾಸಿ-ಮರವಂತೆ ಬೀಚ್‌ಗೆ ತೆರಳಿಸಿ ಸಾಥ್ ನೀಡಿದರು.
ವಿದ್ಯಾರ್ಥಿಗಳು ತಾವೇ ತಯಾರಿಸಿದ ಪ್ಲೇ ಕಾರ್ಡ್ಸ್ ಪ್ರದರ್ಶಿಸುವ ಮೂಲಕ ವೀರೇಂದ್ರ ಸೆಹವಾಗ್ ಅವರನ್ನು ಬೈಂದೂರಿಗೆ ಕೈಬೀಸಿ ಕರೆಯುತ್ತಿದ್ದಾರೆ. ಮಕ್ಕಳ ಕೈಯಲ್ಲಿ ಮಾಲ್ಡೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ, Viru Paaji We Welcome You,, ಕೊಡಚಾದ್ರಿಯ ಚಾರಣ, ಮರವಂತೆಯ ಬೀಚ್ ವಾಕ್, ಪಡುವರಿಯ ಸಮುದ್ರ Lets Explore Byndoor ಎಂದೆಲ್ಲ ಬರೆದಿರುವ ಕಾರ್ಡ್‌ಗಳ ಜತೆಗೆ ಉತ್ಸಾಹದ ಧ್ವನಿಯೊಂದಿಗೆ ಘೋಷಣೆ ಕೂಗುತ್ತಾ ಶಾಲಾ ಮಕ್ಕಳು ಸ್ಥಳೀಯ ಪ್ರವಾಸಿ ತಾಣಗಳ ಸೊಬಗನ್ನು ಆಸ್ವಾದಿಸಿ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.