Explained: ಏನಿದು ಫೆಮಾ ಆ್ಯಕ್ಟ್? ಕ್ಸಿಯೋಮಿ ವಿರುದ್ಧದ ಕೇಸ್ ಏನು?
ವಿದೇಶಾಂಗ ವಿನಿಮಯ ಕಾಯ್ದೆ ಮತ್ತು ಆರ್ ಬಿಐ ನಿಯಮಗಳ ಸ್ಪಷ್ಟ ಉಲ್ಲಂಘನೆ.
Team Udayavani, May 2, 2022, 10:50 AM IST
ಗಾಲ್ವಾನ್ ಘರ್ಷಣೆ ಬಳಿಕ ಕೇಂದ್ರ ಸರ್ಕಾರ ಚೀನಾ ಜತೆಗಿನ ವ್ಯವಹಾರಗಳನ್ನು ತಗ್ಗಿಸಿಕೊಂಡಿ ರುವುದು ಸರಿಯಷ್ಟೇ. ಈಗ ಚೀನಾಗೆ, ವಿದೇಶಿ ವಿನಿಮಯ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಕ್ಸಿಯೋಮಿ ಹಣ ಕಳುಹಿಸುತ್ತಿದ್ದದ್ದು ಗೊತ್ತಾಗಿ, ಜಾರಿ ನಿರ್ದೇಶನಾಲಯವು ಅದರ 5,551.27 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ. ಹಾಗಾದರೆ, ಏನಿದು ಫೆಮಾ ಆ್ಯಕ್ಟ್? ಕ್ಸಿಯೋಮಿ ಮಾಡಿದ್ದಾದರೂ ಏನು? ಇಲ್ಲಿಂದೆ ಒಂದು ಸಂಕ್ಷಿಪ್ತ ನೋಟ.
ಕ್ಸಿಯೋಮಿ ವಿರುದ್ಧದಕೇಸ್ ಏನು?
ಏಪ್ರಿಲ್ ತಿಂಗಳ ಆರಂಭದಲ್ಲಿ ಜಾರಿ ನಿರ್ದೇಶನಾಲಯವು, ಕಂಪನಿಯ ಗ್ಲೋಬಲ್ ವೈಸ್ ಪ್ರೆಸಿ ಡೆಂಟ್ ಮನು ಕುಮಾರ್ ಜೈನ್ ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸಿತ್ತು. ಅಂದರೆ, ಕ್ಸಿಯೋಮಿ ಕಂಪನಿಯು ಮೂರನೇ ದೇಶದ ಚಾನೆಲ್ ಮೂಲಕ ಚೀನಾಗೆ ಇಲ್ಲಿಂದ ಹಣ ಕಳುಹಿಸುತ್ತಿತ್ತು. ಇದು ವಿದೇಶಾಂಗ ವಿನಿಮಯ ಕಾಯ್ದೆ ಮತ್ತು ಆರ್ ಬಿಐ ನಿಯಮಗಳ ಸ್ಪಷ್ಟ ಉಲ್ಲಂಘನೆ. ಅಷ್ಟೇ ಅಲ್ಲ, 3 ವರ್ಷದ ಹಿಂದೆ ಕ್ಸಿಯೋಮಿ ಕಂಪನಿಯೇ ಚೀನಾಗೆ 3 ಸಾವಿರ ಕೋಟಿ ರೂ. ಹಣ ಕಳುಹಿಸಿತ್ತು.
ಇ.ಡಿ.ಯಿಂದ ಹಣ ಜಪ್ತಿ
ಶನಿವಾರವಷ್ಟೇ ಜಾರಿ ನಿರ್ದೇಶನಾಲಯ( ಇ.ಡಿ.)ವು ಕ್ಸಿಯೋಮಿ ಕಂಪನಿಯ 5,551.27 ಕೋಟಿ ರೂ.ಗ ಳನ್ನು ಜಪ್ತಿ ಮಾಡಿದೆ. ವಿದೇಶಿ ವಿನಿಮಯ ಕಾಯ್ದೆಯನ್ನು ಕ್ಸಿಯೋಮಿ ಉಲ್ಲಂಘಿಸಿದೆ ಎಂಬುದು ಇ.ಡಿ. ಆರೋಪ. ಈ ಕಂಪನಿಯ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆ ಸಂದರ್ಭದಲ್ಲೇ ಕಂಪನಿಯ ಷೇರುದಾರರು, ಹಣದ ಮೂಲ ಮತ್ತು ವ್ಯಾಪಾರಿಗಳ ಜತೆಗಿನ ಒಪ್ಪಂದದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತ್ತು.
ಮೂರು ಕಂಪನಿಗಳಿಗೆ ಹಣ ವರ್ಗಾವಣೆ
ಜಾರಿ ನಿರ್ದೇಶನಾಲಯದ ಪ್ರಕಾರ, ಕ್ಸಿಯೋಮಿ ಕಂಪನಿಯು 3 ಕಂಪನಿಗಳಿಗೆ ರಾಯಲ್ಟಿ ರೂಪದಲ್ಲಿ ಭಾರೀ ಪ್ರಮಾಣದ ಹಣವನ್ನು ಇಲ್ಲಿಂದ ಕಳುಹಿಸಲಾಗಿತ್ತು.
ಅಂದರೆ, ಚೀನಾದಲ್ಲಿರುವ ಮೂಲ ಕಂಪನಿಯ ಆದೇಶದಿಂದ ಈ ಮೂರು ಕಂಪನಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ, ಭಾರತಕ್ಕೂ, ಕ್ಸಿಯೋಮಿಯಿಂದ ಹಣ ಸ್ವೀಕರಿಸಿದ ಮೂರು ಕಂಪನಿಗಳಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿಯೇ ಹಣ ಮುಟ್ಟು ಗೋಲು ಹಾಕಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ
Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?
Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.