ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದರೆ ಪತ್ನಿಗೆ ವಿಚ್ಛೇದನ ಸಾಧ್ಯ: ಮಧ್ಯಪ್ರದೇಶ ಹೈಕೋರ್ಟ್
Team Udayavani, Jan 13, 2024, 12:47 AM IST
ಭೋಪಾಲ್: ಮದುವೆ ಆದ ಬಳಿಕ ಪತಿಯ ಜತೆಗೆ ದೈಹಿಕ ಸಂಪರ್ಕ ಹೊಂದಲು ಪತ್ನಿ ಒಪ್ಪುತ್ತಿಲ್ಲ ಎಂದಾದರೆ ಅದು ಮಾನಸಿಕ ಹಿಂಸೆಗೆ ಸಮ. ಈ ಅಂಶ ಕೂಡ ವಿಚ್ಛೇದನ ಪಡೆಯಲು ಸೂಕ್ತ ಕಾರಣ ಆಗಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಇದೇ ವಿಚಾರಕ್ಕೆ ಸಂಬಂ ಧಿಸಿದಂತೆ 2014ರಲ್ಲಿ ಭೋಪಾ ಲದ ಕೌಟುಂಬಿಕ ನ್ಯಾಯಾ ಲಯ ನೀಡಿದ್ದ ತೀರ್ಪು ತಿರಸ್ಕರಿಸಿದ ನ್ಯಾ| ಶೀಲ್ ನಾಗು ಮತ್ತು ನ್ಯಾ| ವಿನಯ್ ಸರಾಫ್ ಅವರಿದ್ದ ವಿಭಾಗೀಯ ಪೀಠ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಒಪ್ಪಲು ಸಾಧ್ಯವಿಲ್ಲ ಎಂದಿದೆ.
ಪತ್ನಿ ತನ್ನೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒಪ್ಪುತ್ತಿಲ್ಲ. ಇದು ತನಗೆ ಮಾನಸಿಕ ಹಿಂಸೆಯಾಗಿದೆ. ಹೀಗಾಗಿ ವಿಚ್ಛೇದನ ನೀಡಬೇಕೆಂದು ಕೋರಿ ವ್ಯಕ್ತಿಯೊಬ್ಬರು ಭೋಪಾಲ್ನ ಕೌಟುಂಬಿಕ ನ್ಯಾಯಾಲ ಯಕ್ಕೆ ಹೋಗಿದ್ದರು. ಆದರೆ, ವ್ಯಕ್ತಿಯ ವಾದ ಒಪ್ಪಲು ಕೌಟುಂಬಿಕ ನ್ಯಾಯಾ ಲಯ ನಿರಾಕರಿಸಿ, ವಿಚ್ಛೇ ದನ ನೀಡಲು ನಿರಾಕರಿ ಸಿತ್ತು. ಹೀಗಾಗಿ, ಅವರು ಮೇಲ್ಮನವಿ ಸಲ್ಲಿಸಿದ್ದರು.
2006ರ ಜು.12ರಂದು ಇಬ್ಬರಿಗೂ ಮದುವೆ ಯಾಗಿದೆ. ಆದರೆ 2006ರ ಜು.28ರವರೆಗೆ ಪತಿ ಭಾರತ ವನ್ನು ತೊರೆಯುವವರೆಗೂ ಪತ್ನಿ ಲೈಂಗಿಕ ಸಂಬಂಧ ನಿರಾಕರಿಸಿದ್ದಾರೆ. ಇದು ಕೂಡ ಮಾನಸಿಕ ಹಿಂಸೆಯಾಗುತ್ತದೆ. ವೈವಾಹಿಕ ವಿಷಯಗಳಲ್ಲಿ ಮಾನಸಿಕ ಹಿಂಸೆ ನಿರ್ಧರಿಸಲು ಯಾವುದೇ ನೇರ ವಾದ ಸೂತ್ರ ಅಥವಾ ಸ್ಥಿರ ಮೌಲ್ಯ ಮಾಪನಗಳು ಇರಬಾರದು ಎಂದು ಪೀಠ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.