ಅರಂತೋಡು :ಕಾಡಿನಿಂದ ಊರಿಗೆ ಬಂದ ಒಂಟಿ ಸಲಗ ; ಈ ಆನೆಯಲ್ಲಿದೆ ಒಂದು ವಿಶೇಷತೆ
Team Udayavani, Jan 28, 2021, 6:37 PM IST
ಅರಂತೋಡು : ಅರಂತೋಡು ಪರಿಸರದ ಪೆರಾಜೆ, ಮೂಲೆಜಲು, ಪೀಚೆ ಭಾಗಗಳಿಗೆ ಕಾಡಾನೆಯೊಂದು ಬುಧವಾರ ಸಂಜೆ ಆಗಮಿಸಿದ್ದು ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪೆರಾಜೆಯ ಮೂಲೆ ಮಜಲು, ಪೀಚೆ, ಬಿಳಿಯಾರು ಭಾಗಗಳಲ್ಲಿ ಕಾಡಾನೆ ನಡೆದಾಡಿದ್ದು ಈ ಸಂದರ್ಭದಲ್ಲಿ ಭಯವಿಲ್ಲದೆ ತಮ್ಮ ತಮ್ಮ ಮೊಬೈಲ್ ಗಲ್ಲಿ ವಿಡಿಯೋ ಮಾಡಿ ಫೋಟೋಗಳನ್ನು ತೆಗೆದಿದ್ದಾರೆ.
ಈ ಆನೆಗೆ ಜನರು ಹೆದರದಿರಲು ಕೂಡಾ ಒಂದು ಕಾರಣವಿದೆ. ಈ ಆನೆ ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಈ ಪರಿಸರದಲ್ಲಿ ನಡೆದುಕೊಂಡು ಬಂದು ಬಿಳಿಯಾರು ಮೂಲಕ ಉಬರಡ್ಕವಾಗಿ ದೊಡ್ಡತೋಟ ಮುಖಾಂತರ ಪುಳಿಕುಕ್ಕು ಮೂಲಕ ಕೊಂಬರಿಗೆ ಹೋಗುತ್ತದೆ ಹಾಗಾಗಿ ಜನರಿಗೆ ಆನೆಯ ಪರಿಚಯ ಇದೆ.
ಇದನ್ನೂ ಓದಿ:ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ
ಕೆಲ ಸಮಯದ ಬಳಿಕ ಆನೆ ಆ ಕಡೆಯಿಂದ ಇತ್ತ ಹಿಂದಿರುಗುತ್ತದೆ. ಈ ವರ್ಷ ಸಲಗ ಬರುವಾಗ ಸ್ವಲ್ಪ ತಡವಾಗಿ ಜನವರಿ ತಿಂಗಳ ಕೊನೆಯಲ್ಲಿ ತನ್ನ ಸಂಚಾರ ಆರಂಭಿಸಿದೆ. ಕೃಷಿಕರಿಗೆ ಯಾವುದೇ ತೊಂದರೆ ಉಂಟು ಮಾಡದೆ ಈ ರೀತಿ ಪ್ರತಿ ವರ್ಷ ಸಂಚಾರ ಮಾಡುವುದು ಜನರ ಕುತೂಹಲಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.