ಅರಕನಹಳ್ಳಿಯಲ್ಲಿ ಆಹಾರ ಅರಸಿ ಬಂದು ಕಂದಕಕ್ಕೆ ಬಿದ್ದ ಆನೆಯ ರಕ್ಷಣೆ
Team Udayavani, Aug 27, 2020, 10:57 AM IST
ಹನೂರು: ಕಂದಕಕ್ಕೆ ಬಿದ್ದು ನರಾಳಾಡುತ್ತಿದ್ದ ಗಂಡು ಆನೆಯೊಂದನ್ನು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ರಕ್ಷಣೆ ಮಾಡಿರುವ ಘಟನೆ ಪಟ್ಟಣದ ಅರಕನಹಳ್ಳಿ ಸಮೀಪ ನಡೆದಿದೆ.
ಮಲೆ ಮಹದೇಶ್ವರ ವನ್ಯಜೀವಿ ವಲಯಕ್ಕೆ ಒಳಪಡುವ ಪಚ್ಚೆದೊಡ್ಡಿ ಗಸ್ತಿನ ಅರಕನಹಳ್ಳಿ ಸಮೀಪ ಸುಮಾರು 30 ವರ್ಷದ ಗಂಡಾನೆಯೊಂದು ಕಂದಕಕ್ಕೆ ಬಿದ್ದಿದೆ. ಇದನ್ನು ಗಮನಿಸಿದ ಸಾರ್ವಜನಿಕರು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಜೆಸಿಬಿಯನ್ನು ಕರೆತಂದು ಮೇಲೆತ್ತಿದ್ದಾರೆ. ಬಳಿಕ ಆನೆಗೆ ಅಗ್ನಿಶಾಮಕ ವಾಹನದ ಮೂಲಕ ನೀರನ್ನು ಸಿಂಪಡಿಸಿ, ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‌ಎಫ್ಒ ಸುಂದರ್, ಉಪ ವಲಯ ಅರಣ್ಯಾಧಿಕಾರಿ ಸಾಲನ್, ಅರಣ್ಯ ರಕ್ಷಕ ತೀರ್ಥಪ್ರಸಾದ್, ಅನಿಲ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.