ವನ್ಯ ಜೀವಿ ಸಪ್ತಾಹ: ಬೈಕ್ ಹಾಗೂ ಕಾರ್ ರ‍್ಯಾಲಿ
Team Udayavani, Oct 3, 2021, 7:43 PM IST
ಹುಣಸೂರು: ‘2020-21 ನೇ ಸಾಲಿನಲ್ಲಿ ನಡೆಸಿರುವ ಕ್ಯಾಮರಾ ಟ್ರಾಪಿಂಗ್‌ನಲ್ಲಿ 135 ಹುಲಿಗಳು ಸೆರೆ ಸಿಕ್ಕಿದ್ದರೆ, ದೇಶದಲ್ಲಿ ಅತೀ ಹೆಚ್ಚು ಅಂದರೆ 1600 ಆನೆಗಳು ಹಾಗೂ 1೦೦ ಕ್ಕೂ ಹೆಚ್ಚು ಚಿರತೆಗಳು ದಾಖಲಾಗಿರುವುದು ನಾಗರಹೊಳೆಯಲ್ಲಿ ಎನ್ನುವುದು ಹೆಮ್ಮೆ’ ಎಂದು ನಾಗರಹೊಳೆ ಹುಲಿ ಯೋಜನೆ ಮುಖ್ಯಸ್ಥ ಡಿ.ಮಹೇಶ್ ಕುಮಾರ್ ತಿಳಿಸಿದರು.
ಅರವತ್ತೇಳನೆ ವನ್ಯ ಜೀವಿ ಸಪ್ತಾಹದ ಅಂಗವಾಗಿ ಬಿ.ಆರ್.ಟಿ. ಉದ್ಯಾನದಿಂದ ಬಂದ ಬೈಕ್ ಹಾಗೂ ಕಾರ್ ರ‍್ಯಾಲಿಯನ್ನು ಹುಣಸೂರಿನ ವನ್ಯಜೀವಿ ವಿಭಾಗದ ಕಚೇರಿ ಬಳಿ ಆದಿವಾಸಿಗಳ ಸಾಂಸ್ಕೃತಿಕ ಕಲರವಗಳ ನಡುವೆ ಶಾಸಕ ಎಚ್.ಪಿ.ಮಂಜುನಾಥ್, ಡಿ.ಸಿ.ಎಫ್. ಮಹೇಶ್‌ಕುಮಾರ್ ಹಾಗೂ ಸಿಬ್ಬಂದಿಗಳು ಸಂಭ್ರಮದಿಂದ ಬರಮಾಡಿಕೊಂಡರು.
ಎನ್.ಡಿ.ಸಿ.ಎ.ಧ್ವಜ ಹಸ್ತಾಂತರ
ಅಜಾದಿ ಅಮೃತ್ ಮಹೋತ್ಸವದ ಅಂಗವಾಗಿ ಈ ಬಾರಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆಯೋಜಿಸಿರುವ ಈ ರ‍್ಯಾಲಿಯೊಂದಿಗೆ ಆಗಮಿಸಿದ್ದ ಬಿ.ಆರ್.ಟಿ ವನ್ಯಧಾಮದ ಮುಖ್ಯಸ್ಥ ಸಂತೋಷ್‌ಕುಮಾರ್ ಎನ್‌ಟಿಸಿಎ ಧ್ವಜವನ್ನು ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಹೊಳೆ ಉದ್ಯಾನದ ಮುಖ್ಯಸ್ಥ ಮಹೇಶ್‌ಕುಮಾರರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಫ್ ಮಹೇಶ್‌ಕುಮಾರ್, ‘ಈ ಬಾರಿ ಶುದ್ದ ಜಲಕ್ಕಾಗಿ ಜಲಚರ ಸಂರಕ್ಷಣೆ ಅರಣ್ಯ ಇಲಾಖೆಯ ಘೋಷವಾಖ್ಯವಾಗಿದ್ದು, ಈ ಬಗ್ಗೆ ಹೆಚ್ಚು ಆದ್ಯತೆ ನೀಡಲಾಗುವುದು. ದೇಶದ 18 ರಾಜ್ಯಗಳಲ್ಲಿ 51 ಹುಲಿ ಸಂರಕ್ಷಿತ ತಾಣಗಳಿದ್ದು, ವನ್ಯಜೀವಿ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಹುಲಿ ಪ್ರಾಧಿಕಾರದ ನಿರ್ದೇಶನದಂತೆ ಸೆ.26 ರಿಂದ ರ‍್ಯಾಲಿ ಆರಂಭಗೊಂಡಿ ದ್ದು,ಕೇರಳ, ತಮಿಳುನಾಡು, ಕರ್ನಾಟಕದ 9 ಉದ್ಯಾನಗಳಿಂದ 30 ಮಂದಿ ಅರಣ್ಯಾಧಿಕಾರಿಗಳಿಂದ ಕೂಡಿದ ರ‍್ಯಾಲಿಯು ನಾಗರಹೊಳೆ ಉದ್ಯಾನದ ಮೂಲಕ ಹಾದು ಮಧುಮಲೈ ಉದ್ಯಾನ ತಲುಪಿ ಅ. 5 ಕ್ಕೆ ಬಂಡೀಪುರ ಉದ್ಯಾನದಲ್ಲಿ ಅಂತ್ಯಗೊಳ್ಳಲಿದೆ. ರ‍್ಯಾಲಿಯುದ್ದಕ್ಕೂ ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಸಾರಲಾಗುತ್ತಿದೆ. ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ವಿಶ್ವದ ಗಮನ ಸೆಳೆದ ನಾಗರಹೊಳೆ ಉದ್ಯಾನವೇ ವೈಶಿಷ್ಟ್ಯ
‘ವಿಶ್ವದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2020-21ನೇ ಸಾಲಿನಲ್ಲಿ ನಡೆಸಿರುವ ಕ್ಯಾಮರಾ ಟ್ರಾಪಿಂಗ್‌ನಲ್ಲಿ 135 ಹುಲಿಗಳು ಸೆರೆ ಸಿಕ್ಕಿವೆ. ದೇಶದಲ್ಲಿ ಅತೀ ಹೆಚ್ಚು ಅಂದರೆ 1600ರಿಂದ 1600 ಆನೆಗಳು ಹಾಗೂ100 ಕ್ಕೂ ಹೆಚ್ಚು ಚಿರತೆಗಳು ದಾಖಲಾಗಿರುವುದು ಹೆಮ್ಮೆ, ವನ್ಯಜೀವಿ ಸಂರಕ್ಷಣೆಯಿಂದಾಗಿ ಆಗಾಗ್ಗೆ ಮಾನವ- ವನ್ಯಜೀವಿ ಸಂಘರ್ಷ ನಡೆಯುತ್ತಿದ್ದು, ಸಂಘರ್ಷದ ಸಂದರ್ಭದಲ್ಲಿ ಇಲ್ಲಿನ ಶಾಸಕ ಮಂಜುನಾಥರು ತಾವೇ ಮುಂದೆ ನಿಂತು ಸಹಕರಿಸುತ್ತಿರುವುದು ಶ್ಲಾಘನೀಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ನಾಗರಹೊಳೆ ಉದ್ಯಾನವು ವನ್ಯಜೀವಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯ. ಆದರೆ ಅರಣ್ಯ ಇಲಾಖೆ ಕಾರ್ಯಕ್ರಮಗಳು ನಾಲ್ಕು ಗೋಡೆಗಳ ಮದ್ಯೆ ನಡೆಯುತ್ತಿರುವುದು ಸರಿಯಲ್ಲ, ಬದಲಾಗಿ ಇಂತಹ ಕಾರ್ಯಕ್ರಮಗಳು ಸಾರ್ವಜನಿಕರ ಮಧ್ಯೆ ನಡೆಯಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡಂತೆ ಕಾರ್ಯಕ್ರಮ ರೂಪಿಸಬೇಕು. ಕಾಡು ಎಂದರೆ ಜನರಲ್ಲಿ ನಮ್ಮದು ಎನ್ನುವ ಭಾವನೆ ಮೂಡಿಸಬೇಕು, ಅವರಲ್ಲಿ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಒಲುಮೆ ಹುಟ್ಟುವಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ದೇವನಾಯಕ, ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್. ಪ್ರಸನ್ನಕುಮಾರ್, ಬಿ.ಆರ್.ಟಿ.ವನ್ಯಧಾಮದ ಡಿಸಿಎಫ್ ಸಂತೋಷ್ ಕುಮಾರ್, ಎಸಿಎಫ್‌ಗಳಾದ ಸತೀಶ್,ಗೋಪಾಲ್, ಮಹದೇವ್, ಆರ್.ಎಫ್.ಓ ಹನುಮಂತರಾಜು ಸೇರಿದಂತೆ ಎಲ್ಲ ವಲಯಗಳ ಆರ್.ಎಫ್.ಓ.ಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ನಾಗರಹೊಳೆಯ ಆದಿವಾಸಿ ತಂಡದ ಸದಸ್ಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.