ಮುಂಬರುವ ವರ್ಷಗಳಲ್ಲಿ ಬಾಲ್ಯದ ಕಾಯಿಲೆ ಆಗಲಿದೆಯೇ ಕೋವಿಡ್?
ಮಕ್ಕಳಿಗೆ ಬರುವ ಸಾಮಾನ್ಯ ಶೀತ-ಜ್ವರವಾಗಿ ಮಾರ್ಪಾಡು
Team Udayavani, Aug 12, 2021, 10:00 PM IST
ಸಾಂದರ್ಭಿಕ ಚಿತ್ರ..
ವಾಷಿಂಗ್ಟನ್/ನವದೆಹಲಿ: ವರ್ಷ ವರ್ಷವೂ ಕೋವಿಡ್ ಹೊಸ ಹೊಸ ಅಲೆಗಳು, ರೂಪಾಂತರಿಗಳು ಜನರನ್ನು ಆತಂಕಕ್ಕೆ ನೂಕಿರುವ ನಡು ವೆಯೇ ಅಮೆರಿಕ ಮತ್ತು ನಾರ್ವೆಯ ವಿಜ್ಞಾನಿಗಳ ತಂಡ ಹೊಸ ಸುದ್ದಿಯೊಂದನ್ನು ನೀಡಿದೆ. ಇನ್ನು ಕೆಲವೇ ವರ್ಷಗಳಲ್ಲಿ ಕೋವಿಡ್ ಸೋಂಕು ಎನ್ನುವುದು ಬಾಲ್ಯದಲ್ಲಿ ಕಂಡು ಬರುವ ಸಾಮಾನ್ಯ ರೋಗವಾಗಿ ಮಾರ್ಪಾಡಾಗಲಿದೆ ಎಂದು ಈ ತಂಡ ಹೇಳಿದೆ.
ಸದ್ಯದಲ್ಲೇ ಲಸಿಕೆಯಿಂದಾಗಿ ಹಾಗೂ ವೈರಸ್‌ಗೆ ತೆರೆಯಲ್ಪಡುವುದರಿಂದ ವಯಸ್ಕರಲ್ಲಿ ಕೋವಿಡ್ ಪ್ರತಿಕಾಯ ಸೃಷ್ಟಿಯಾಗಲಿದೆ. ಹೀಗಾಗಿ, ವಯಸ್ಕರಿಗೆ ಕೋವಿಡ್ ಭೀತಿಯೂ ಕ್ರಮೇಣ ಕಡಿಮೆಯಾಗಲಿದೆ. ಆಗ ಮಕ್ಕಳು ಮಾತ್ರ ಬೇಗನೆ ಸೋಂಕಿಗೆ ತುತ್ತಾಗುತ್ತಾರೆ. ಆದರೆ ಕೋವಿಡ್ ಸೋಂಕಿನ ಗಂಭೀರತೆಯು ಮಕ್ಕಳಲ್ಲಿ ಸಾಮಾನ್ಯವಾಗಿ ಕಡಿಮೆಯೇ ಇರುವುದರಿಂದ ಮುಂದಿನ ದಿನಗಳಲ್ಲಿ ಇದು ಮಕ್ಕಳಿಗೆ ಬರುವ ಸಾಮಾನ್ಯ ಶೀತ-ಜ್ವರದಂತೆ ಆಗಲಿದೆ ಎಂದು ನಾರ್ವೆಯ ಓಸ್ಲೋ ವಿವಿಯ ಒಟ್ಟರ್ ಜಾರ್ನ್ ಸ್ಟಡ್ ಹೇಳಿದ್ದಾರೆ. ಈ ಹಿಂದೆಯೂ ಹಲವು ರೀತಿಯ ಸೋಂಕುಗಳು ಇದೇ ಮಾದರಿಯಲ್ಲಿ ಬದಲಾಗಿವೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಮಗಳ ಎದುರೇ ತಂದೆ ಮೇಲೆ ಹಲ್ಲೆ: ಅಪ್ಪನ ರಕ್ಷಣೆಗೆ ಗೋಗರೆದ ಪುಟ್ಟ ಬಾಲಕಿ
ಸಕ್ರಿಯ ಸೋಂಕು ಹೆಚ್ಚಳ:
ದೇಶದಲ್ಲಿ ಬುಧವಾರದಿಂದ ಗುರುವಾರಕ್ಕೆ 41,195 ಮಂದಿಗೆ ಸೋಂಕು ದೃಢ ಪಟ್ಟು, 490 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕಿ ತರ ಸಂಖ್ಯೆ 3,87,987ಕ್ಕೇರಿಕೆಯಾಗಿದೆ. ಸತತ 5 ದಿನಗಳಿಂದಲೂ ಇದು ಇಳಿಮುಖವಾಗಿತ್ತು. ಇನ್ನು, ಕೇರಳದಲ್ಲಿ ಗುರುವಾರ 21,445 ಪ್ರಕ ರಣಗಳು ಪತ್ತೆಯಾಗಿ, 160 ಸಾವು ಸಂಭವಿಸಿವೆ.
ಬಂಗಾಳದಲ್ಲಿ ನಿರ್ಬಂಧ ಮುಂದುವರಿಕೆ:
ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಸಂಬಂಧಿ ನಿರ್ಬಂಧವನ್ನು ಆ.30ರವರೆಗೆ ವಿಸ್ತರಣೆ ಮಾಡಲಾಗಿದೆ. 3ನೇ ಅಲೆಯ ಭೀತಿ ಇರುವ ಕಾರಣ ಸ್ಥಳೀಯ ರೈಲುಗಳ ಸಂಚಾರ ಆರಂಭಿಸಿಲ್ಲ. ರಾತ್ರಿ ಕರ್ಫ್ಯೂ ಸ್ವಲ್ಪ ಮಟ್ಟಿಗೆ ಸಡಿಲಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
South Korea: ಅಧ್ಯಕ್ಷ ಯೂನ್ ರನ್ನು ಕೂಡಲೇ ಬಂಧಿಸಿ: ಪೊಲೀಸರಿಗೆ ದಕ್ಷಿಣ ಕೊರಿಯಾ!
Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
Islamabad: ಪಾಕಿಸ್ಥಾನಕ್ಕೆ ವಿಶ್ವಬ್ಯಾಂಕ್‌ನಿಂದ 1.70 ಲಕ್ಷ ಕೋಟಿ ರೂ. ಸಾಲ
Dhaka; ವರ್ಷಾಂತ್ಯಕ್ಕೆ ಬಾಂಗ್ಲಾ ಸಂಸತ್ ಚುನಾವಣೆ ಸಾಧ್ಯತೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.